More

    50 ಮಂದಿಗೆ ತಹಸೀಲ್ದಾರ್ ಹುದ್ದೆ ಕೆಪಿಎಸ್ಸಿ 2015ರ ಬ್ಯಾಚ್​ನ 50 ಅಭ್ಯರ್ಥಿಗಳಿಗೆ ಅವಕಾಶ

    ಬೆಂಗಳೂರು: ಕರ್ನಾಟಕ ನಾಗರಿಕ ಸೇವೆಯ ಪ್ರತಾಂಕಿತ ಹುದ್ದೆಗಳ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಷರತ್ತುಬದ್ಧವಾಗಿ ನೇಮಕ ಮಾಡಿರುವ ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದೆ.

    ಇದನ್ನೂ ಓದಿ: ತರಕಾರಿ, ಸೊಪ್ಪು ದುಪ್ಪಟ್ಟು ಬೆಲೆಗೆ ಮಾರಾಟ: ಸುಲಿಗೆಗಿಳಿದ ಚಿಲ್ಲರೆ ವ್ಯಾಪಾರಿಗಳು

    ಕರ್ನಾಟಕ ಲೋಕ ಸೇವಾ ಆಯೋಗವು 2015ನೇ ಸಾಲಿನಲ್ಲಿ ತಹಸೀಲ್ದಾರ್ ಗ್ರೇಡ್-2 ವೃಂದ ಗ್ರೂಪ್ ಬಿ ಹುದ್ದೆಗೆ 66 ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿ ಪ್ರಕಟಿಸಿದ್ದ ಪಟ್ಟಿಯಲ್ಲಿನ 50 ಅಭ್ಯರ್ಥಿಗಳಿಗೆ ನೇಮಕ ಭಾಗ್ಯ ಲಭಿಸಿದೆ.

    ಇದನ್ನೂ ಓದಿ: ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಚಾಲನೆ

    ಪರಿವೀಕ್ಷಣೆ (ಪ್ರೊಬೆಷನರಿ) ಮೇಲೆ ನೇಮಕವಾದ ತಹಸೀಲ್ದಾರ್ ಗ್ರೇಡ್-2 ಗ್ರೂಪ್ ಬಿ ವೃಂದದ ಅಭ್ಯರ್ಥಿಗಳಿಗೆ ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, ಕಾಲಕಾಲಕ್ಕೆ ಜಾರಿಯಲ್ಲಿರುವ ನಿಯಮ ಅಥವಾ ಆದೇಶಗಳ ಅಧೀನಕ್ಕೆ ಒಳಪಟ್ಟಿರುತ್ತದೆ. ಈ ಆಯ್ಕೆ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದಲ್ಲಿ, ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ. ನೇಮಕ ಆದೇಶವನ್ನು ನೋಂದಾಯಿತ ಅಂಚೆ ಮೂಲಕ ರವಾನಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಳಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು ಸೇರಿ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

    ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts