More

    ಕೆಪಿಎಸ್ಸಿ: ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಲು ಅರ್ಹತೆಗಳೇನಿವೆ?

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಉಳಿಕೆ ಮೂಲ ವೃಂದ ಹಾಗೂ ಹೈದ್ರಾಬಾದ್- ಕರ್ನಾಟಕ ವೃಂದದಲ್ಲಿನ ಗ್ರೂಪ್ ಎ ತಾಂತ್ರಿಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಿದೆ.
    ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಹುದ್ದೆಗಳಿವೆ. ಉಳಿಕೆ ಮೂಲ ವೃಂದದ ಹುದ್ದೆಗಳು 10 + 6 (ಬ್ಯಾಕ್​ ಲಾಗ್) ಹಾಗೂ ಹೈದರಾಬಾದ್ ಕರ್ನಾಟಕ 3+2 (ಬ್ಯಾಕ್ ಲಾಗ್) ಸೇರಿ ಒಟ್ಟು 21 ಹುದ್ದೆಗಳಿವೆ.

    ಇದನ್ನೂ ಓದಿ: ಬಾಬಾ ರಾಮ್​​ದೇವ್ ಅವರ ಕರೊನಾ ಔಷಧ ಮಾರುವವರಿಗೆ ರಾಜಸ್ಥಾನ ಖಡಕ್ ವಾರ್ನಿಂಗ್

    ಅಂಗೀಕೃತ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ಅಥವಾ ಆರ್ಕಿಟೆಕ್ಚರ್ ಪದವಿ ಪೂರೈಸಿರುವವರು ಅರ್ಜಿ ಸಲ್ಲಿಸಲಬಹುದು. ವಿದ್ಯಾರ್ಹತೆ ಕುರಿತ ಹೆಚ್ಚಿನ ಮಾಹಿತಿಗೆ ವೆಬ್​ಸೈಟ್ ನಲ್ಲಿರುವ ಅಧಿಸೂಚನೆ ನೋಡಿ.
    ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮಾಸಿಕ ವೇತನ 52,650 ರೂ. ದಿಂದ 97,100 ರೂ. ಇರುತ್ತದೆ. ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ವಯೋ ಸಡಿಲಿಕೆ ಇರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 10 ರಿಂದ ಆಗಸ್ಟ್ 10 ರ ವರೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ http://www.kpsc.kar.nic.in ವೆಬ್​ಸೈಟ್ ಸಂಪರ್ಕಿಸಬಹುದು.

    ಬಂತು ಇ-ಬ್ಲಡ್ ಸರ್ವೀಸಸ್ ಆ್ಯಪ್… ಜೀವ ರಕ್ಷಕ ರಕ್ತದ ಲಭ್ಯತೆಯನ್ನು ಪರಿಶೀಲಿಸುವುದು ಇನ್ನೂ ಸುಲಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts