More

    ಕೊಟ್ಟೂರಿನಲ್ಲಿ ಜೋರಿದೆ ನೇರಳೆ ಹಣ್ಣಿನ ವ್ಯಾಪಾರ

    ಕೊಟ್ಟೂರು: ಪಟ್ಟಣದಲ್ಲಿ ನೀರಳೆ ಹಣ್ಣಿನ ಮಾರಾಟ ಜೋರಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಜೂನ್ ಮತ್ತು ಜುಲೈನಲ್ಲಿ ಈ ಹಣ್ಣ ಮಾರುಕಟ್ಟೆಗೆ ಬರುತ್ತದೆ. ಔಷಧೀಯ ಗುಣಗಳಿರುವ ಕಾರಣಕ್ಕೆ ಗ್ರಾಹಕರು ನೇರಳೆಯನ್ನು ಕೊಳ್ಳುತ್ತಿದ್ದಾರೆ.

    ಪಟ್ಟಣದ ಅಲ್ಲಲ್ಲಿ ವ್ಯಾಪಾರಿಗಳು ಬುಟ್ಟಿಯಲ್ಲಿ, ತಳ್ಳುಗಾಡಿಯಲ್ಲಿ ಹಣ್ಣಗಳನ್ನು ಇಟ್ಟುಕೊಂಡು ಮಾರುತ್ತಿರುವುದು ಕಂಡುಬರುತ್ತಿದೆ. ಒಂದು ಕೆಜಿಗೆ 150-200ವರೆಗೆ ಮಾರಾಟವಾಗುತ್ತಿದೆ. ನೇರಳೆ ಮರಗಳನ್ನು ಗುತ್ತಿಗೆದಾರರು ಪಡೆದು, ಮಾರಾಟ ಮಾಡುತ್ತಿದ್ದಾರೆ. ನೇರಳೆ ಮರಗಳ ಮೇಲೆ ಪಕ್ಷಿಗಳು, ಬಾವಲಿಗಳು ದಾಳಿ ಮಾಡಿ ಹಣ್ಣಗಳನ್ನು ತಿನ್ನುವ ಸಮಯವಿದು. ಇದರೊಂದಿಗೆ ಮಳೆ ಕಾಟ ಹಾಗೂ ನೆಲಕ್ಕೆ ಬಿದ್ದ ಹಣ್ಣುಗಳನ್ನು ಖರೀದಿಸುವವರು ಕಡಿಮೆ. ಈ ಸಮಸ್ಯೆಗಳ ನಡುವೆ ಹಣ್ಣುಗಳು ನೆಲಕ್ಕೆ ಬೀಳದಂತೆ ಮರದಿಂದ ಕಿತ್ತು ವ್ಯಾಪಾರಿಗಳು ಸಂಗ್ರಹಿಸುತ್ತಿದ್ದಾರೆ. ಹೀಗೆ ಸಂಗ್ರಹಿತ ಹಣ್ಣುಗಳನ್ನು ವ್ಯಾಪಾರಿಗಳಿಗೆ ಗುತ್ತಿಗೆದಾರರು ಹೋಲ್‌ಸೇಲ್‌ನಲ್ಲಿ ಮಾರಾಟ ಮಾಡುತ್ತಾರೆ. ಮೊದಲೆಲ್ಲ ಜವಾರಿ ನೇರಳೆಹಣ್ಣುಗಳು ಲಭ್ಯವಿದ್ದವು. ಈಗ ಬೆಳಗಾವಿಯಲ್ಲಿ ವಿಜ್ಞಾನಿಗಳು ದೂಪದಾಳು ಹೆಸರಿನ ಹೊಸ ನೇರಳೆ ತಳಿ ಅಭಿವೃದ್ಧಿ ಪಡಿಸಿದ್ದಾರೆ. ಇವು ಜವಾರಿಗಿಂತ ಸಿಹಿ, ತೊಳೆ, ತಿನ್ನಲು ಹಿತವಾಗಿರುತ್ತದೆ.


    ಷುಗರ್, ಬಿಪಿ ಇರುವವರು ಹೆಚ್ಚೆಚ್ಚು ಕೊಂಡುಕೊಳ್ಳುತ್ತಿದ್ದಾರೆ. ಬೀಜಗಳನ್ನು ಒಣಗಿಸಿ, ಪುಡಿಮಾಡಿ ಬೆಳಗ್ಗೆ ಸೇವಿಸುತ್ತಾರೆ. ದಿನಕ್ಕೆ 30-40 ಕೆಜಿ ನೇರಳೆಹಣ್ಣು ಮಾರಾಟ ಮಾಡುತ್ತೇವೆ. ದೊಡ್ಡ ಪ್ರಮಾಣದಲ್ಲಿ ಲಾಭವಾಗುವುದಿಲ್ಲ. ಬದಲಾಗಿ ಕೂಲಿ ಹಣ ಸಿಗುತ್ತದೆ.
    | ಗಡಿಮಾಕುಂಟೆ ಮಂಜುನಾಥ, ವ್ಯಾಪಾರಿ. ಕೊಟ್ಟೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts