More

    ಕೊಟ್ಟೂರಲ್ಲಿ ಕೆರೆ ಒತ್ತುವರಿ ತೆರವು: ನಿಯಮ ಮೀರಿ ಬೆಳೆ ಬೆಳೆದರೆ ಕಾನೂನು ಕ್ರಮದ ಎಚ್ಚರಿಕೆ

    ಕೊಟ್ಟೂರು: ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ತಾಲೂಕಿನ 5 ಕೆರೆಗಳು ಒತ್ತುವರಿಯಾಗದಂತೆ ತಂತಿಬೇಲಿ ನಿರ್ಮಿಸಲು 2.94 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಇಲಾಖೆಯ ಎಇಇ ಪಿ.ಎಂ.ರಾಮಾಂಜನೇಯಲು ತಿಳಿಸಿದರು.

    ಪಟ್ಟಣದ ದೊಡ್ಡ ಕೆರೆಯಲ್ಲಿ ಅಕ್ರಮವಾಗಿದ್ದ ಮೂರು ಇಟ್ಟಂಗಿಭಟ್ಟಿಗಳಿಗೆ ನೋಟಿಸ್ ನೀಡಿ ಗಡುವು ಕೊಟ್ಟರೂ ನಿರ್ಲಕ್ಷ್ಯ ತೋರಿದ್ದರಿಂದ ಸೋಮವಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರವುಗೊಳಿಸಿ ಬಳಿಕ ಮಾತನಾಡಿದರು. ಇಲಾಖೆ ವ್ಯಾಪ್ತಿಯ ತಿಮ್ಮಲಾಪುರ ಕೆರೆಯನ್ನು ಒತ್ತುವರಿ ಮಾಡಿಕೊಂಡು ಅಡಕೆ, ಬಾಳೆ ತೋಟದ ಬೆಳೆಯನ್ನು ತೋಟಗಾರಿಕೆ ಇಲಾಖೆ ವಶಪಡಿಸಿಕೊಂಡ ನಂತರ ತೆರವುಗೊಳಿಸಲಾಗುವುದು. ಇನ್ನು ಕೊಟ್ಟೂರು ಮತ್ತು ದೇವಲಾಪುರ ಕೆರೆಯಲ್ಲಿ ಅಕ್ರಮವಾಗಿ 25 ರೈತರು ಕೊಳವೆಬಾವಿ ಕೊರೆಸಿಕೊಂಡು ನೀರಾವರಿ ಮಾಡಿಕೊಂಡಿದ್ದು, ಇದಕ್ಕೆ ಕಲ್ಪಿಸಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜೆಸ್ಕಾಂಗೆ ಎರಡು ಬಾರಿ ಆದೇಶ ನೀಡಿದರೂ ಕ್ರಮ ಕೈಗೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಕೆರೆ ಒತ್ತುವರಿ ಮಾಡಿಕೊಂಡ ರೈತರಿಗೆ ನೋಟಿಸ್ ನೀಡಿ ಇನ್ನು ಮುಂದೆ ಕೆರೆಯೊಳಗೆ ಬೆಳೆ ಬೆಳೆದರೆ ಕಾನೂನು ಕ್ರಮ ಕೈಗೊಳ್ಳಲಾಗುವ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ತೆರವು ಕಾರ್ಯಾಚರಣೆಯಲ್ಲಿ ಪಿಎಸ್‌ಐ ನಾಗಪ್ಪ, ಗ್ರಾಮಲೆಕ್ಕಾಧಿಕಾರಿ ಹರಪನಹಳ್ಳಿ ರವಿ ಹಾಗೂ ಸಣ್ಣ ನೀರಾವರಿ ಇಲಾಖೆ ಕಿರಿಯ ಇಂಜಿನಿಯರ್ ಮೇಡಂ ರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts