More

    ಅಪರಿಚಿತ ಶವದ ಹಿಂದಿತ್ತು 50 ಲಕ್ಷ ರೂ. ಆಸ್ಪತ್ರೆ ಖರ್ಚಿನ ಕಹಾನಿ!

    ಬೆಂಗಳೂರು: ನೀಲಗಿರಿ ತೋಪಿನಲ್ಲಿ ಪತ್ತೆಯಾಗಿದ್ದ ಅಪಚಿತ ಶವ ಮತ್ತು ಹಣದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಇದು ರಾಬರಿಗಾಗಿ ನಡೆದ ಕೊಲೆಯಲ್ಲ, 50 ಲಕ್ಷ ರೂಪಾಯಿ ಆಸ್ಪತ್ರೆ ಖರ್ಚಿನ ಕಹಾನಿ ಎಂಬುದು ಬಯಲಾಗಿದೆ.

    ಬುಧವಾರ ಬೆಳಗ್ಗೆ 7.30ರಲ್ಲಿ ಕೆ.ನಾರಾಯಣಪುರ ಮುಖ್ಯರಸ್ತೆಯ ನೀಲಗಿರಿ ತೋಪಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿದ್ದ ಅಪರಿಚಿತ ಶವ ಪತ್ತೆಯಾಗಿತ್ತು. ಕಾರಿಗೆ ಹೊದಿಸುವ ಕವರ್​ ಹಾಗೂ ಹಾಸಿಗೆಯಲ್ಲಿ ಕಟ್ಟಿದ್ದರು. ಸಂಚು ರೂಪಿಸಿ ಹತ್ಯೆ ಮಾಡಿರುವುದು ಕಂಡುಬಂದಿತ್ತು. ಶವದ ಬಳಿ 4-5 ಸಾವಿರ ಹಣ ಬಿಸಾಡಿ, ಇದು ರಾಬರಿಗಾಗಿ ನಡೆದ ಕೊಲೆ ಎನ್ನುವಂತೆ ಬಿಂಬಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಕೊತ್ತನೂರು ಪೊಲೀಸರು ತನಿಖೆ ಕೈಗೊಂಡಿದ್ದರು. ಕೊಲೆಯಾದ ಯುವಕ ಭಾರತಿನಗರದ ಹರೀಶ್​(25) ಎಂದು ಗೊತ್ತಾಗಿದ್ದು, ಕುಟುಂಬಸ್ಥರು ಸಹ ಗುರುತಿಸಿದ್ದರು.

    ಎಲೆಕ್ಟ್ರಿಷನ್​ ಕೆಲಸ ಮಾಡಿಕೊಂಡಿದ್ದ ಹರೀಶ್​ ಮತ್ತು ಜೀವ ಎಂಬಾತನ ನಡುವೆ ನಾಲ್ಕೈದು ತಿಂಗಳ ಹಿಂದೆ ಗಲಾಟೆಯಾಗಿತ್ತು. ಜೀವ ಮೇಲೆ ಹರೀಶ್​ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ಜೀವ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆಗಾಗಿ ಸುಮಾರು 50 ಲಕ್ಷ ರೂ. ಖರ್ಚಾಗಿತ್ತು ಎನ್ನಲಾಗಿದೆ. ಈ ಪ್ರಕರಣದಲ್ಲಿ ಭಾರತಿನಗರ ಪೊಲೀಸರು ಹರೀಶ್​ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಜೀವ ಮೇಲೆ ಹಲ್ಲೆ ನಡೆಸಿದ ಸೇಡು ಮತ್ತು ಆಸ್ಪತ್ರೆಗೆ 50 ಲಕ್ಷ ರೂ. ಖರ್ಚಾಯ್ತು ಅನ್ನೋ ದ್ವೇಷ ಹರೀಶ್​ ಮೇಲೆ ಜೀವ ಸಹೋದರರಿಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಹರೀಶ್​ನನ್ನು ಕೊಲ್ಲಲು ಸಂಚು ರೂಪಿಸಿದ್ದರು.

    ಮಂಗಳವಾರ ರಾತ್ರಿ ಹರೀಶ್​ನನ್ನು ಕಾರಿನಲ್ಲಿ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದರು. ಸಿಸಿ ಕ್ಯಾಮರಾ ದೃಶ್ಯ ಪರಿಶೀಲನೆ ಹಾಗೂ ಹರೀಶ್​ಗೆ ಬಂದಿದ್ದ ಫೋನ್​ ಕರೆಗಳ ವಿವರ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

    ಹರೀಶ್​ ಕೊಲೆ ಆರೋಪಿಗಳಾದ ಫ್ರೇಜರ್​ಟೌನ್​ ನಿವಾಸಿ ದೀಪು ಅಲಿಯಾಸ್​ ದೀಪಕ್​ (28), ಸುರೇಂದ್ರ (25), ರವಿ (27) ಮತ್ತು ಕಾತಿರ್ಕ್​ (28) ಬಂಧಿತರು. ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ರಾತ್ರೋರಾತ್ರಿ ಮನೆಗೆ ಬಂದ ಪರ ಪುರುಷನೊಂದಿಗೆ ಸೊಸೆ ಲವ್ವಿ-ಡವ್ವಿ! ಎಚ್ಚರಗೊಂಡ ಅತ್ತೆಗೆ ಕಾದಿತ್ತು ಗಂಡಾಂತರ

    ನಿನ್ನ ಹೆಂಡ್ತಿ-ಮಕ್ಕಳನ್ನು ನನಗೇ ಬಿಟ್ಟುಕೊಡು ಎಂದು ಮನೆಗೆ ಬಂದ ಭೂಪ! ಆ ರಾತ್ರಿ ನಡೆದೇ ಹೋಯ್ತು ಘೋರ ಕೃತ್ಯ

    ಹೆಂಡತಿ ಪ್ರೀತಿಯಿಂದ ಮಾಡಿಕೊಟ್ಟ ಟೀ ಕುಡಿದ ಪತಿ ಸಾವು, ಸ್ವಲ್ಪ ಹೊತ್ತಲ್ಲೇ ಆಸ್ಪತ್ರೆ ಸೇರಿದ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts