More

    ಸುದೀಪ್ ಈಗ ಕೋಟಿಕೊಕ್ಕಡು; ತೆಲುಗಿಗೆ ಕೋಟಿಗೊಬ್ಬ 3 ಡಬ್

    ಬೆಂಗಳೂರು: ಸುದೀಪ್ ಅಭಿನಯದ ಹಿಂದಿನ ಚಿತ್ರಗಳೆಲ್ಲ ಬೇರೆ ಭಾಷೆಗಳಿಗೆ ಡಬ್ ಆಗುತ್ತಿರುವಾಗ, ‘ಕೋಟಿಗೊಬ್ಬ 3’ ಮಾತ್ರ ಯಾವುದೇ ಭಾಷೆಗೂ ಡಬ್ ಆಗಿಲ್ಲ ಎಂಬ ಬೇಸರ ಅವರ ಹಲವು ಅಭಿಮಾನಿಗಳಿಗಿತ್ತು. ಈಗ ಚಿತ್ರವು ತೆಲುಗಿಗೆ ‘ಕೆ3 – ಕೋಟಿಕೊಕ್ಕಡು’ ಎಂಬ ಹೆಸರಿನಲ್ಲಿ ಡಬ್ ಆಗುತ್ತಿದೆ.

    ‘ಕೋಟಿಗೊಬ್ಬ 3’ ಚಿತ್ರದ ತೆಲುಗು ಡಬ್ಬಿಂಗ್ ಮತ್ತು ಓವರ್​ಸೀಸ್ ಹಕ್ಕುಗಳನ್ನು ಶ್ರೇಯಸ್ ಮೀಡಿಯಾದ ಅಂಗಸಂಸ್ಥೆಯಾದ ಗುಡ್ ಸಿನಿಮಾ ಗ್ರೂಪ್ ಪಡೆದಿದ್ದು, ಆಂಧ್ರ , ತೆಲಂಗಾಣ ಮತ್ತು ವಿದೇಶಗಳಲ್ಲೂ ಚಿತ್ರದ ಬಿಡುಗಡೆ ಮಾಡುತ್ತಿದೆ. ದಕ್ಷಿಣ ಭಾರತದ ಖ್ಯಾತ ಸಿನಿಮಾ ಪ್ರಚಾರ ಸಂಸ್ಥೆಯಾದ ಶ್ರೇಯಸ್ ಮೀಡಿಯಾ ಈ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಹೊತ್ತಿದ್ದು, ಸದ್ಯದಲ್ಲೇ ಕೆಲಸಗಳನ್ನು ಶುರು ಮಾಡಲಿದೆ.

    ‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್​ಗೆ ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್ ನಟಿಸಿದ್ದು, ಮಿಕ್ಕಂತೆ ರವಿಶಂಕರ್, ಅಫ್ತಾಬ್ ಶಿವದಾಸಾನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ಶಿವಕಾರ್ತಿಕ್ ನಿರ್ದೇಶನ ಮಾಡಿದ್ದು, ‘ಸೂರಪ್ಪ’ ಬಾಬು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರವು ಏಪ್ರಿಲ್ ಕೊನೆಯ ವಾರದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts