More

    ಮಳೆ ಬಂದರೆ ಮತ್ತೆ ಕುಸಿತ ಭೀತಿ, ಕೋಟೆರಾಯನ ಬೆಟ್ಟಕ್ಕೆ ಭೂವಿಜ್ಞಾನಿಗಳ ತಂಡ ಭೇಟಿ

    ಉಡುಪಿ: ಭಾರಿ ಮಳೆಯಿಂದ ಗುಡ್ಡ ಕುಸಿತ ಉಂಟಾಗಿರುವ ಶೇಡಿಮನೆ ಗ್ರಾಮದ ಅರಸಮ್ಮಕಾನು ಸಮೀಪದ ಕೋಟೆರಾಯನ ಬೆಟ್ಟಕ್ಕೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ಪಶ್ಚಿಮಘಟ್ಟಕ್ಕೆ ಹೊಂದಿಕೊಂಡ ಕೋಟೆರಾಯನ ಬೆಟ್ಟದ ಮಧ್ಯ ಭಾಗದಿಂದ 250 ಮೀ ಕೆಳಗೆ ಕುಸಿದಿದ್ದು, ಇದರಿಂದ ಸುಮಾರು 1.5 ಕಿಮೀವರೆಗೆ ಮಣ್ಣು, ದೊಡ್ಡ ಬಂಡೆ, ಮರಗಳು ಹರಿದುಬಂದು ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದಿವೆ. ನಿರಂತರ ಮಳೆಯಿಂದ ಮಣ್ಣಿನ ಸವಕಳಿ ಉಂಟಾಗಿ ಗುಡ್ಡ ಕುಸಿತ ಸಂಭವಿಸಿದೆ. ಬಂಡೆಗಳಿಗೆ ಹೊಂದಿಕೊಂಡಿದ್ದ ಮಣ್ಣು ಸಡಿಲಗೊಂಡು ಜರಿದುಬಿದ್ದಿದೆ. ಘಟನೆ ಸ್ಥಳಕ್ಕಿಂತ ಜನವಸತಿ ಪ್ರದೇಶ 3 ಕಿಮೀ ದೂರದಲ್ಲಿರುವುದರಿಂದ ಅಪಾಯವಿಲ್ಲ. ಮತ್ತೆ ಇದೇ ರೀತಿ ಮಳೆ ಬಂದರೆ ಪುನಃ ಸಡಿಲವಾಗಿರುವ ಭಾಗ ಕುಸಿಯುವ ಭೀತಿ ಇದೆ ಎಂದು ಭೂವಿಜ್ಞಾನಿ ಗೌತಮ್ ಶಾಸ್ತ್ರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸ್ಥಳೀಯರ ಮಾಹಿತಿ ಪ್ರಕಾರ ಶನಿವಾರ ರಾತ್ರಿ 11 ಗಂಟೆಗೆ ಭೂಕಂಪ ಮತ್ತು ಸಿಡಿಲು ಬಡಿದಂತೆ ದ್ದಾಗಿದೆ. ಬೆಟ್ಟದ ಪಾರ್ಶ್ವ ಕುಸಿದ ರಭಸಕ್ಕೆ 4 ಬೃಹತ್ ಬಂಡೆಗಳು ಉರುಳಿಬಂದು ದಾರಿಯಲ್ಲೇ ನಿಂತಿವೆ. ಸ್ವಲ್ಪ ಮಟ್ಟಿಗೆ ಅರಣ್ಯನಾಶವೂ ಆಗಿದೆ.
    ತಂಡದಲ್ಲಿ ಭೂವಿಜ್ಞಾನಿಗಳಾದ ಪದ್ಮಶ್ರೀ, ಸಂಧ್ಯಾ, ಹಾಜಿರಾ ಉಪಸ್ಥಿತರಿದ್ದರು.

    ಕೆಸರು ಮಿಶ್ರಿತ ಮಣ್ಣಿನಲ್ಲಿ ಹೂತುಹೋಗುವ ಸಾಧ್ಯತೆ ಇರುವುದರಿಂದ ಗುಡ್ಡ ಕುಸಿದ ಜಾಗಕ್ಕೆ ಹೋಗುವುದು ಅಪಾಯಕಾರಿ. ಜೇಡಿ ಮಣ್ಣು ಎಷ್ಟು ಆಳವಿದೆ ಎಂದು ಅಂದಾಜಿಸುವುದು ಕಷ್ಟಕರ. ಆದುದರಿಂದ ಇದರ ಮೇಲೆ ನಡೆದುಕೊಂಡು ಹೋಗುವವರು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ.
    – ಗೌತಮ್ ಶಾಸ್ತ್ರಿ, ಭೂವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts