More

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೋಟ ಮೀನು ಮಾರ್ಕೆಟ್

    ಕೋಟ: ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಟ ಪೇಟೆ ಹೃದಯ ಭಾಗದ ರಾಷ್ಟ್ರೀಯ ಹೆದ್ದಾರಿ ಸನಿಹದ ಮೀನು ಮಾರುಕಟ್ಟೆಯನ್ನು ಯಾರೂ ಕೇಳುವ ಸ್ಥಿತಿಯಲ್ಲಿಲ್ಲ ಎಂಬಂತಾಗಿದೆ.

    ಸುಮಾರು 77 ಲಕ್ಷ ರೂ. ವೆಚ್ಚದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಯೋಜನೆಯಡಿ ಸುಮಾರು ನಾಲ್ಕುವರೆ ವರ್ಷಗಳ ಹಿಂದೆ ನಿರ್ಮಾಣಗೊಂಡು ಉದ್ಘಾಟನೆ ಬಳಿಕ ಮೀನುಗಾರ ಮಹಿಳೆಯರಿಗೆ ಹಸ್ತಾಂತರಿಸಲಾಯಿತು. ಇದಾದ ಬಳಕ ಕೆಲವೇ ತಿಂಗಳಲ್ಲಿ ವ್ಯವಹಾರದಿಂದ ಮುಕ್ತಿ ಕಂಡಿತು. ಅನಂತರ ಪಂಚಾಯಿತಿ ಮರು ಏಲಂ ಮೂಲಕ ಓರ್ವರಿಗೆ ನಡೆಸಲು ನೀಡಿತ್ತಾದರೂ ಪ್ರಯೋಜನವಿಲ್ಲದಂತಾಗಿತ್ತು.

    ಕೋಟದ ಈ ಸುಸಜ್ಜಿತ ಮೀನು ಮಾರುಕಟ್ಟೆ ಒಂದುವರೆ ಸಾವಿರ ಚದರ ಅಡಿ ಹೊಂದಿದೆ. ಇದರ ಕಾಮಗಾರಿ ಮೂಲಕ ಹೈಟೆಕ್ ಮಾದರಿ ಸ್ಪರ್ಶಿಸಿತ್ತಾದ್ದರೂ ಇದರ ಪ್ರಯೋಜನ ಪಡೆಯಲು ಮೀನುಗಾರ ಮಹಿಳೆಯರಿಗೆ ಸಾಧ್ಯವಾಗದ ಸ್ಥಿತಿಯಿದೆ. ಒಂದು ಕಾಲದಲ್ಲಿ ಕೋಟ ಮೀನು ಮಾರುಕಟ್ಟೆ ಪ್ರಸಿದ್ಧಿ ಪಡೆದು ಉತ್ತಮ ವ್ಯವಹಾರ ನಡೆಯುತ್ತಿತ್ತು. ಕಾಲ ಕಳೆದಂತೆ ಮೀನು ಮಾರುವ ಮಹಿಳೆಯರು ಮಾರುಕಟ್ಟೆ ಬಿಟ್ಟು ಕೋಟದ ಈಗಿನ ಗಾಂಧಿ ಮೈದಾನದಲ್ಲಿ ವ್ಯವಹಾರ ನಡೆಸಲು ಪ್ರಾರಂಭಿಸಿ, ಪ್ರಸಕ್ತ ಮಹಿಳಾ ಮೀನು ಮಾರುವವರ ಸಂಖ್ಯೆ ಮೂರಂಕಿ ದಾಟಿದೆ.

    ಬದಲಿ ಬಳಸಲು ಸಲಹೆ ನೀಡಬಹುದು: ಕೋಟ ಮೀನು ಮಾರುಕಟ್ಟೆ ಪಾಳು ಬಿದ್ದು ಮೂರು ವರ್ಷ ಕಳೆದಿರಬಹುದು. ಅತ್ತ ಉಪಯೋಗಕ್ಕೂ ಬಾರದೆ ಇತ್ತ ಮರು ಬಳಕೆ ಯೂ ಆಗದೆ ಅವ್ಯವಸ್ಥೆಯ ಆಗರವಾಗಿದೆ. ಇದಕ್ಕೆ ಪರ್ಯಾಯವಾಗಿ ಈ ಮಾರುಕಟ್ಟೆಯನ್ನು ಮೀನು ವ್ಯಾಪಾರದಿಂದ ಹೊರತುಪಡಿಸಿ ಇತರೆ ವ್ಯವಹಾರಕ್ಕೆ ಪರಿವರ್ತಿಸಬಹುದು ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯ.

    ಒಂದು ಮಾರುಕಟ್ಟೆ ನಿರ್ಮಿಸಬೇಕಾದರೆ ಮೀನುಗಾರ ಮಹಿಳೆಯರ ಅಭಿಪ್ರಾಯ ಪಡೆಯಬೇಕು. ಇದೆಲ್ಲ ಮಾಡದೆ ಮೀನು ಮಾರುಕಟ್ಟೆ ನಿರ್ಮಿಸಿದ್ದಾರೆ. ಅದಾಗಿಯೂ ಪ್ರಸ್ತುತ ಮೀನು ಮಾರುವ ಸ್ಥಳ ಕೋಟ ರಾಷ್ಟ್ರೀಯ ಹೆದ್ದಾರಿ(ಗಾಂಧಿ ಮೈದಾನ ಸಮೀಪ)ಯಲ್ಲಿ ಪರ್ಯಾಯ ಮಾರುಕಟ್ಟೆ ಕಲ್ಪಿಸಿ ಈಗಿರುವ ಮಾರುಕಟ್ಟೆಯನ್ನು ಸರ್ಕಾರ ವಶಕ್ಕೆ ಪಡೆದು ಮತ್ಸ್ಯದರ್ಶಿನಿ ಹೋಟೆಲ್ ಮಾಡಿದರೆ ಮೀನುಗಾರರ ಆಕ್ಷೇಪವಿರುವುದಿಲ್ಲ.

    ಸಂದೀಪ್ ಕುಂದರ್ ಕೋಡಿ
    ಮೀನುಗಾರ ಮುಖಂಡ

    ರಾಜ್ಯ ಸರ್ಕಾರದ ಬಂದರು ಮೀನುಗಾರಿಕಾ ಇಲಾಖೆ ಮತ್ಸೃದರ್ಶಿನಿ ಯೋಜನೆಗೆ ಈ ಕಟ್ಟಡ ಉಪಯೋಗಿಸಲು ಪಂಚಾಯಿತಿ ಅನುಮತಿ ಬಯಸಿದ್ದಾರೆ. ಅದರಂತೆ ಪಂಚಾಯಿತಿ ಬೋರ್ಡ್ ನಿರ್ಣಯಿಸಿದ್ದು ಸರ್ಕಾರದ ಯೋಜನೆಯಂತೆ ಮತ್ಸ್ಯದರ್ಶನಿ ಹೋಟೆಲ್‌ಗೆ ಅನುವು ಮಾಡಿಕೊಡಲಿದೆ.

    ವನಿತಾ ಶ್ರೀಧರ ಆಚಾರ್ಯ
    ಅಧ್ಯಕ್ಷೆ, ಕೋಟ ಗ್ರಾಪಂ

    ರವೀಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts