More

    ಪಿಯು ಫಲಿತಾಂಶ ಸುಧಾರಣೆಗೆ ಕ್ರಮವಹಿಸಿ: ಡಿಡಿಪಿಯು ಜಿ.ಎಂ.ಭೂಸನೂರಮಠ ಹೇಳಿಕೆ

    ಕೊಪ್ಪಳ: ಪಿಯು ಫಲಿತಾಂಶ ಹೆಚ್ಚಿಸಲು ವಿಷಯಾಧಾರಿತ ಕಾರ್ಯಾಗಾರ ಹಮ್ಮಿಕೊಂಡಿದ್ದು ಉಪನ್ಯಾಸಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಂ.ಭೂಸನೂರಮಠ ಹೇಳಿದರು.

    ಭಾಗ್ಯನಗರದ ಜ್ಞಾನಬಂಧು ಕಾಲೇಜಿನಲ್ಲಿ ಪಿಯು ಇಲಾಖೆಯಿಂದ ಉಪನ್ಯಾಸಕರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ವಿಷಯಾಧಾರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪಿಯು ಫಲಿತಾಂಶ ಸುಧಾರಿಸುವುದು ಕಾರ್ಯಾಗಾರದ ಮೂಲ ಉದ್ದೇಶ. ಏಕಕಾಲಕ್ಕೆ 12 ವಿಷಯಾಧಾರಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲು ಆಗಮಿಸಿದ್ದಾರೆ. ಮುಂದೆಯೂ ಇಂತಹ ಕಾರ್ಯಾಗಾರಗಳನ್ನು ಹೆಚ್ಚಿನ ಸಂಖ್ಯೆಗಳಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜುಗಳ ಉಪನ್ಯಾಸಕರು ಭಾಗವಹಿಸಿರುವುದು ಸಂತಸದ ಸಂಗತಿ. ಎಲ್ಲರೂ ಕಾರ್ಯಾಗಾರದ ಸದುಪಯೋಗ ಪಡೆಯಿರಿ ಎಂದರು.

    ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಿ.ಅನಿಲಕಮಾರ್ ಮಾತನಾಡಿ, ದಾನಪ್ಪ ಕವಲೂರು ಹೆಸರಿಗೆ ತಕ್ಕಂತೆ ದಾನಿಗಳು. ನಮ್ಮ ಕಾರ್ಯಾಗಾರಕ್ಕೆ ಸಹಕಾರ ನೀಡಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಮುಂದೆಯೂ ಸಹಕಾರ ನೀಡಲಿ ಎಂದರು.

    ರಾಜ್ಯ ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ ಮಾತನಾಡಿ, ಉಪನ್ಯಾಸಕರ ಸಂಘ ಬಲಗೊಳ್ಳಬೇಕು. ಎಲ್ಲ ಉಪನ್ಯಾಸಕರನ್ನು ಸಂಘದಲ್ಲಿ ಸೇರಿಸಿಕೊಳ್ಳಿ. ಉಪನಿರ್ದೇಶಕರು, ಪ್ರಾಚಾರ್ಯರು, ಉಪನ್ಯಾಸಕರು ಎಲ್ಲರೂ ಸೇರಿ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.

    ಜ್ಞಾನಬಂಧು ಪಿಯು ಕಾಲೇಜಿನ ಅಧ್ಯಕ್ಷ ದಾನಪ್ಪ ಕವಲೂರು, ಭಾಗ್ಯನಗರ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ರಾಜಶೇಖರ್ ಪಾಟೀಲ್ ಮಾತನಾಡಿದರು. ಪ್ರಾಚಾರ್ಯರಾದ ಟಿ.ಸಿ.ಶಾಂತಪ್ಪ, ಡಾ.ರವಿ ಚವ್ಹಾಣ್, ಶರಣಪ್ಪ ಬೇಲೇರಿ, ಉಪನ್ಯಾಸಕರಾದ ಮಲ್ಲಿಕಾರ್ಜುನ ಹೊಳಗುಂದಿ, ಮೆಹಬೂಬ್ ಅಲಿ, ಕೆ.ಎಸ್.ಹುಲಿ, ಸಂಜಯ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts