More

    10ರಂದು ಸುಕನ್ಯಾ ಸಮೃದ್ಧಿ ಮಹೋತ್ಸವ: ಗದಗ ಅಂಚೆ ಅಧೀಕ್ಷಕ ಚಿದಾನಂದ ಪದ್ಮಸಾಲಿ ಮಾಹಿತಿ

    ಕೊಪ್ಪಳ: ಅಂಚೆ ಇಲಾಖೆಯಿಂದ ಅ.10ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಅಂಚೆ ಅಧೀಕ್ಷಕ ಚಿದಾನಂದ ಪದ್ಮಸಾಲಿ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ದೇಶದ 75 ನಗರಗಳಲ್ಲಿ ಸುಕನ್ಯಾ ಸಮೃದ್ಧಿ ಮಹೊತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಕುಟುಂಬದ 10 ವರ್ಷದೊಳಗಿನ ಇಬ್ಬರು ಹೆಣ್ಣು ಮಕ್ಕಳಿಗೆ ಯೋಜನೆಯಡಿ ಖಾತೆ ತೆರೆಯಬಹುದು. 15 ವರ್ಷದ ಬಳಿಕ ಅವರು ಕಟ್ಟಿದ ಹಣ್ಣಕ್ಕೆ ಬಡ್ಡಿ, ಚಕ್ರಬಡ್ಡಿ ಸಮೇತ ಹಣ ನೀಡಲಾಗುವುದು. ಆರಂಭಿಕವಾಗಿ 250 ರೂ. ಕಟ್ಟಿ ಖಾತೆ ತೆರೆಯಬಹುದು. ಮೊದಲ ಕಂತು ಕಟ್ಟದವರಿಗೆ ದಾನಿಗಳ ನೆರವಿನಿಂದ ಹಣ ಪಡೆದು ಖಾತೆ ಮಾಡಿಕೊಡಲಾಗುತ್ತಿದೆ. ಬಳಿಕ ವರ್ಷಕ್ಕೆ ಕನಿಷ್ಠ 100ರೂ.ನಿಂದ 1.5 ಲಕ್ಷ ರೂ.ವರೆಗೆ ಹಣ ಕಟ್ಟಲು ಅವಕಾಶವಿದೆ. ದಾನಿಗಳ ನೆರವಿನಿಂದ ಈವರೆಗೆ ಗದಗ ವಿಭಾಗದಿಂದ 5 ಸಾವಿರ ಖಾತೆ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

    ದಾನಿಗಳಿಂದ ನೆರವು ಪಡೆಯಲು ಅ.10ವರೆಗೆ ಅವಕಾಶವಿದೆ. ಅಂದು ಬೆಳಗ್ಗೆ 10.30ಕ್ಕೆ ಸುಕನ್ಯಾ ಸಮೃದ್ಧಿ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ರಾಜ್ಯ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್, ಉತ್ತರ ಕರ್ನಾಟಕ ವಲಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಎನ್.ವಿನೋದ್ ಕುಮಾರ್ ಇತರರು ಭಾಗಿಯಾಗಲಿದ್ದಾರೆಂದು ಮಾಹಿತಿ ನೀಡಿದರು. ಕೊಪ್ಪಳ ಪ್ರಧಾನ ಅಂಚೆ ಪಾಲಕ ಭೀಮಸೇನ ಎ.ಜೆ., ಅಂಚೆ ನಿರೀಕ್ಷಕ ಮಹಾಂತೇಶ ಎಸ್.ತೊಗರಿ, ವೈ.ವೈ.ಕೋಳೂರು, ರವಿ ಕಾಂತನವರ್, ಜಗದೀಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts