More

    ಕೊಪ್ಪಳದಲ್ಲಿ ಕಿಸಾನ್ ಕೇರ್ ಸೆಂಟರ್‌ಗೆ ಚಾಲನೆ: ಗಮನ ಸೆಳೆದ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ

    ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಂಗಳವಾರ ಕಿಸಾನ್ ಕೇರ್ ಸೆಂಟರ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಚಾಲನೆ ನೀಡಿದರು.

    ತೋಟಗಾರಿಕೆ ಬೆಳೆಗಳಿಂದ ಉತ್ಪಾದಿಸಿದ ಪರಿಕರಗಳ ಪ್ರದರ್ಶನ ಗಮನ ಸೆಳೆಯಿತು. ಶೇಂಗಾ, ಕಡಲೆ ಇತರ ದ್ವಿದಳ ಧಾನ್ಯಗಳ ಬಗ್ಗೆ ಸಚಿವರು ರೈತರಿಂದ ಮಾಹಿತಿ ಪಡೆದರು. ಸಿರಿಧಾನ್ಯಗಳಾದ ಊದಲು, ಸಾಮೆ, ನವಣೆ ಮತ್ತು ಸಜ್ಜೆ ಪ್ಯಾಕೆಟ್‌ಗಳ್ನು ನೋಡಿ, ಅವುಗಳಿಂದ ತಯಾರಿಸಿದ ಶುದ್ಧ ಎಣ್ಣೆಯನ್ನು ಖರೀದಿಸಿದರು. ಜೇನು ಸಾಕಣೆ ಬಗ್ಗೆ ನಿಂಗಪ್ಪ ಅವರಿಂದ ಮಾಹಿತಿ ಪಡೆದು ಜೇನು ಸವಿದರು. ಜೇನು ಕೃಷಿ ಬಗ್ಗೆ ಆಸಕ್ತಿಯಿದ್ದು, ಮಾರ್ಗದರ್ಶನ ನೀಡುವಂತೆ ಕೇಳಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಮಾಹಿತಿ ನೀಡಿದರು. ಇಲಾಖೆ ಕಾರ್ಯಕ್ಕೆ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು. ಇಲಾಖೆ ಆವರಣ ಕರ್ನಾಟಕ ನಕ್ಷೆಯಲ್ಲಿ ನಟ ಪುನೀತ್ ರಾಜಕುಮಾರ್ ಚಿತ್ರ ಅಳವಡಿಸಿದ್ದು ಗಮನ ಸೆಳೆಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಫೋಟೋ ತೆಗೆದುಕೊಂಡು ಖುಷಿಪಟ್ಟರು.

    ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಶಿವಪುತ್ರ ಶಂಭು, ಜಯಶ್ರೀ, ರಮೇಶ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಡಾ.ನಾಗೇಶ, ತೋಟಗಾರಿಕೆ ಇಲಾಖೆಯ ವಿಷಯ ತಜ್ಞ ವಾಮನಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts