More

    ನಿಮ್ಹಾನ್ಸ್ ನಿಂದ ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ ಮಾಹಿತಿ ಪ್ರದರ್ಶನ

    ಬೆಂಗಳೂರು: ಮಾನಸಿಕ ಅಸ್ವಸ್ಥರಿಗೆ ನೀಡುವ ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ – – ಇಸಿಟಿ (ಶಾಕ್ ಟ್ರೀಟ್‌ಮೆಂಟ್) ಬಗ್ಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಜಾಗೃತಿ ಮೂಡಿಸುತ್ತಿದ್ದು, ಸಂಸ್ಥೆಯ ಹೆರಿಟೆಜ್ ಮ್ಯೂಸಿಯಂನಲ್ಲಿ ಈ ಚಿಕಿತ್ಸೆ ಕುರಿತಾದ ಪ್ರದರ್ಶನ ಆಯೋಜಿಸಿದೆ.

    ಈಗಾಗಲೇ ಪ್ರಾರಂಭವಾಗಿರುವ ಈ ಪ್ರದರ್ಶನ ಮುಂದಿನ ಒಂದು ತಿಂಗಳ ಕಾಲ ನಡೆಯಲಿದೆ. ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಪ್ರದರ್ಶನ ಇರಲಿದೆ. 2023ರಲ್ಲಿ ನಿಮ್ಹಾನ್ಸ್‌ನಲ್ಲಿ ಮಾನಸಿಕ ಅಸ್ವಸ್ಥತೆ ಸಮಸ್ಯೆಗಾಗಿ ಏಳು ಸಾವಿರಕ್ಕೂ ಅಧಿಕ ಮಂದಿ ಇಸಿಟಿ ಸೇವೆ ಪಡೆದಿದ್ದಾರೆ.

    ಸಂಸ್ಥೆಯಲ್ಲಿ 75 ವರ್ಷಗಳಿಂದ ಈ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಚಿಕಿತ್ಸೆಯ ಲಾಭ ಜನರ ಅರಿವಿಗೆ ಬರಬೇಕು. ಆಗ ಚಿಕಿತ್ಸೆ ಅಗತ್ಯ ಇರುವವರನ್ನು ಗುರುತಿಸಿ, ಚೇತರಿಸಿಕೊಳ್ಳಲು ನೆರವಾಗಲಿದೆ. ಆದರೆ ಈ ಚಿಕಿತ್ಸೆಯ ಬಗ್ಗೆ ಇರುವ ಅಪವಾದ ಮತ್ತು ಕಳಂಕವನ್ನು ಹೋಗಲಾಡಿಸಲು ಮನೋವೈದ್ಯ ವಿಜ್ಞಾನ ವಿಭಾಗದ ನೆರವಿನಿಂದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನವು ಇಸಿಟಿ ಇತಿಹಾಸ, ಇಸಿಟಿ ಪಡೆದವರ ಅನುಭವ ಹಾಗೂ ಚಿಕಿತ್ಸೆಯ ಬಗ್ಗೆ ತಿಳಿಯಲು ಸಹಕಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts