More

  ಸಂಸದ ಪ್ರಜ್ವಲ್ ರೇವಣ್ಣ ಬಂಧಿಸಿ

  ಕೊಪ್ಪಳ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಶನಿವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿ, ನಮ್ಮ ದೇಶದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನವಿದೆ. ಜೆಡಿಎಸ್ ತೆನೆ ಹೊತ್ತ ಮಹಿಳೆಯನ್ನು ತನ್ನ ಗುರುತು ಮಾಡಿಕೊಂಡಿದೆ. ಅದೇ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವುದು ನಾಚಿಗೇಡಿನ ಸಂಗತಿ. ಅಪ್ಪ-ಮಗ ಇಬ್ಬರು ಮನೆಗೆಲಸದವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನೊಂದ ಮಹಿಳೆ ಪ್ರಕರಣ ದಾಖಲಿಸಿ ಇವರ ಬಣ್ಣ ಬಯಲು ಮಾಡಿದ್ದಾರೆ. ತಕ್ಷಣ ಕಾಮುಕ ಸಂಸದನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

  ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ಕಿಶೋರಿ ಬೂದನೂರ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಗ್ಯಾರಂಟಿ ಹಣದಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆನ್ನುತ್ತಾರೆ. ಆದರೆ, ಅವರ ಮನೆಯ ಮಗನೇ ದಾರಿ ತಪ್ಪಿದ್ದಾನೆ. ಕುಮಾರಸ್ವಾಮಿಯವರೇ ರಾಜ್ಯದ ಮಹಿಳೆಯರು ಹಾದಿ ತಪ್ಪಿಲ್ಲ. ನಿಮ್ಮ ಕುಟುಂಬದವರು ದಾರಿ ತಪ್ಪಿದ್ದಾರೆ. ನಿಮಗೆ ಮಹಿಳೆಯರ ಬಗ್ಗೆ ಗೌರವ ಇದ್ದರೆ ಪ್ರಜ್ವಲ್‌ನನ್ನು ಎಸ್‌ಐಟಿಗೆ ಒಪ್ಪಿಸಿ ಎಂದು ಸವಾಲು ಹಾಕಿದರು.

  ಕಾಂಗ್ರೆಸ್ ಮುಖಂಡ ಅಮರೇಶ ಕರಡಿ ವಾತನಾಡಿದರು. ಪದಾಧಿಕಾರಿಗಳಾದ ಜ್ಯೋತಿ ಗೊಂಡಬಾಳ, ಸಾವಿತ್ರಿ ಮುಜಂದಾರ, ರಜಿಯಾ ಮನಿಯಾರ್, ರೇಷ್ಮಾ ಖಾಜಾವಲಿ, ಸವಿತಾ ಗೋರಂಟ್ಲಿ, ನಾಗರತ್ನಾ ಪೂಜಾರ, ಸುಮಂಗಲಾ ನಾಯಕ, ಯಶೋದಾ ಮರಡಿ, ಕಾವೇರಿ, ಬಸವರಾಜ ಭೋವಿ ಇತರರಿದ್ದರು.

  See also  ಆಹಾರ ನಿರೀಕ್ಷಕರ ಲಾಗಿನ್ ಒದಗಿಸುವಂತೆ ಡಿಸಿಗೆ ತಹಸೀಲ್ದಾರ್ ಪ್ರಸ್ತಾವನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts