More

    ಜಿಲ್ಲಾದ್ಯಂತ ಸಂಭ್ರಮದ ದಸರಾ ಆಚರಣೆ

    ಕೊಪ್ಪಳ: ನಗರ ಸೇರಿ ಜಿಲ್ಲಾದ್ಯಂತ ಆಯುಧ ಪೂಜೆ ಹಾಗೂ ದಸರಾ ಹಬ್ಬವನ್ನು ಜನರು ಮಂಗಳವಾರ, ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

    ಕಳೆದೆರೆಡು ವರ್ಷ ಕರೊನಾ ಕಾರಣ ಹಬ್ಬದ ವೈಭವ ಅಷ್ಟೊಂದಾಗಿ ಇರಲಿಲ್ಲ. ಈ ವರ್ಷ ವಿಜೃಂಭಣೆಯಿಂದ ಹಬ್ಬ ಆಚರಣೆಯಾಗಿದ್ದು, ಜನರು ನವರಾತ್ರಿಗಳನ್ನು ಪೂರೈಸಿ ಆದಿಶಕ್ತಿಗೆ ಭಕ್ತಿಯಿಂದ ನಮಿಸಿದರು. ಕೊಪ್ಪಳ ನಗರದ ಗಡಿಯಾರ ಕಂಭ ವೃತ್ತ, ಲೋಕಾಯುಕ್ತ ಕಚೇರಿ ಮುಂಭಾಗ, ಕೋಟೆ ಏರಿಯಾ, ಭಾಗ್ಯನಗರ, ಕನ್ನಿಕಾಪರಮೇಶ್ವರಿ ದೇವಾಲಯ, ಪಲ್ಯದ ಓಣಿ ಸೇರಿ ವಿವಿಧೆಡೆ ದೇವಿ ಪ್ರತಿಷ್ಠಾಪನೆಗೊಂಡಿದ್ದು, ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಸಾಂಗವಾಗಿ ನೆರವೇರಿದವು. ಮಂಗಳವಾರ ಮನೆ, ಅಂಗಡಿಗಳಲ್ಲಿ ಆಯುಧ ಪೂಜೆ ನೆರವೇರಿಸಿದರು. ಬುಧವಾರ ಮೆರವಣಿಗೆ ಮೂಲಕ ದೇವಿ ಮೂರ್ತಿ ವಿಸರ್ಜನೆಗೊಂಡವು. ಸಂಜೆ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ಜನರು ಬನ್ನಿ ಮುಡಿದರು. ಪರಸ್ಪರ ಶುಭಾಶಯ ಕೋರಿ ಶುಭ ಹಾರೈಸಿದರು. ಮಹಿಳೆಯರು, ಮಕ್ಕಳು, ಪುರುಷರು, ವೃದ್ಧರಾದಿಯಾಗಿ ಎಲ್ಲರೂ ಬನ್ನಿ ವಿನಿಮಯ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts