More

    ಲಸಿಕೆ ವಿಳಂಬವಾಗಿದ್ದಕ್ಕೆ ಕರೊನಾ ಹೆಚ್ಚಳ

    ಕೊಪ್ಪಳ: ಕರೊನಾ ತಡೆಗಟ್ಟುವಲ್ಲಿ ಕೇಂದ್ರ-ರಾಜ್ಯ ಸರ್ಕಾರ ವಿಫಲವಾಗಿವೆ. ಸಕಾಲಕ್ಕೆ ಜನರಿಗೆ ಲಸಿಕೆ ನೀಡಿದ್ದರೆ ಇಷ್ಟೊಂದು ಜನರು ಸಾವಿಗೀಡಾಗುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.

    ನಗರದ ಗವಿಮಠಕ್ಕೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲ ಅಲೆಯಿಂದಲೂ ಸರ್ಕಾರ ಪಾಠ ಕಲಿಯಲಿಲ್ಲ. ಎರಡನೇ ಅಲೆ ಬಗ್ಗೆ ತಜ್ಞರು ಎಚ್ಚರಿಸಿದರೂ ನಿರ್ಲಕ್ಷಿಸಲಾಯಿತು. ಬೆಡ್, ಆಕ್ಸಿಜನ್, ವೆಂಟಿಲೇಟರ್, ಔಷಧ ಕೊರತೆಯಿಂದ ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಅದರ ಬಳಿಕ ಬ್ಲಾೃಕ್ ಫಂಗಸ್ ಕಾಯಿಲೆ, ಈಗ ಡೆಲ್ಟಾ ಪ್ಲಸ್ ಕಾಣಿಸಿದೆ. ಮೂರನೇ ಅಲೆಯ ಸಂಭವವಿದೆ ಎಂದರು.

    ದೇಶದಲ್ಲಿ 18 ವರ್ಷ ಮೇಲ್ಪಟ್ಟ 100 ಕೋಟಿ ಜನರಿದ್ದಾರೆ. ಈವರೆಗೆ ಶೇ.5 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಎಲ್ಲರಿಗೂ ಲಸಿಕೆ ನೀಡಿದರೆ ಕರೊನಾದಿಂದ ಪಾರಾಗಬಹುದು. ಅಮೆರಿಕದಂಥ ಮುಂದುವರಿದ ರಾಷ್ಟ್ರಗಳೇ ಮೊದಲಿಗೆ ತಮ್ಮ ದೇಶದ ಪ್ರಜೆಗಳಿಗೆ ಲಸಿಕೆ ನೀಡಲು ಆದ್ಯತೆ ನೀಡಿವೆ. ಆದರೆ, 66 ಕೋಟಿ ಡೋಸ್‌ನಷ್ಟು ಲಸಿಕೆಯನ್ನು ಅನ್ಯ ರಾಷ್ಟ್ರಗಳಿಗೆ ಪ್ರಧಾನಿ ಪೂರೈಸಿದ್ದಾರೆ. ಮೊದಲು ದೇಶದ ಜನರಿಗೆ ನೀಡಿ, ನಂತರ ವಿದೇಶಕ್ಕೆ ರಫ್ತು ಮಾಡಲಿ. ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಜಿಡಿಪಿ ಕುಸಿದಿದೆ. ಇದರ ನಡುವೆಯೂ ಸುಧಾರಣೆ ಕ್ರಮ ಕೈಗೊಳ್ಳುವ ಬದಲು ಸುಳ್ಳು ಪ್ರಚಾರ ನಡೆಸುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts