More

    ಸಹಜ ಸ್ಥಿತಿಯತ್ತ ಜನ ಜೀವನ ; ಲಾಕ್‌ಡೌನ್ ಸಡಿಲಿಕೆ ಮಧ್ಯಾಹ್ನ 2ರ ಬಳಿಕವೂ ತೆರೆದಿದ್ದ ಅಂಗಡಿಗಳು

    ಕೊಪ್ಪಳ: ಒಂದು ತಿಂಗಳ ಬಳಿಕ ಲಾಕ್‌ಡೌನ್ ಭಾಗಶಃ ಸಡಿಲಿಕೆಯಿಂದಾಗಿ ಸೋಮವಾರ ಜಿಲ್ಲಾದ್ಯಂತ ಜನ ಜೀವನ ಸಹಜ ಸ್ಥಿತಿಗೆ ಮರಳಿದ್ದು ಕಂಡುಬಂತು.

    ಅಗತ್ಯ ವಸ್ತುಗಳು ಸೇರಿ ಇತರ ವಿವಿಧ ಸಾಮಗ್ರಿಗಳ ಅಂಗಡಿಗಳು ತೆರೆದಿದ್ದವು. ಮಧ್ಯಾಹ್ನ 2ರ ಬಳಿಕವೂ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಪೊಲೀಸರು ಮುಚ್ಚಿಸಿದರು. ಆದರೂ, ಕೆಲ ಅಂಗಡಿಯವರು ಬಾಗಿಲು ಹಾಕಿಕೊಂಡು ವ್ಯವಹಾರ ನಡೆಸಿದರು. ಪಾರ್ಸೆಲ್‌ಗೆ ಅವಕಾಶವಿದ್ದರೂ ಹೋಟೆಲ್‌ಗಳಲ್ಲಿ ಜನರನ್ನು ಒಳಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಮದುವೆಗೆ ಷರತ್ತುಬದ್ಧ ಅನುಮತಿ ನೀಡಿರುವುದರಿಂದ ಬಟ್ಟೆ, ಬಂಗಾರ ಹಾಗೂ ಪಾತ್ರೆ ಅಂಗಡಿಗಳಲ್ಲಿ ಜನರು ಕಿಕ್ಕಿರಿದು ಕಂಡುಬಂದರು. ಮದ್ಯದ ಅಂಗಡಿಗಳು ಜನರಿಂದ ತುಂಬಿದ್ದವು.

    ನಿರ್ಜನವಾಗಿರುತ್ತಿದ್ದ ರಸ್ತೆಗಳು ಜನರು, ವಾಹನಗಳ ಓಡಾಟದಿಂದ ತುಂಬಿಕೊಂಡಿದ್ದವು. ಜವಾಹರ ರಸ್ತೆ, ಗಡಿಯಾರ ಕಂಬ ವೃತ್ತ, ಅಶೋಕ ವೃತ್ತ ಸೇರಿ ವಿವಿಧೆಡೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಲಾಯಿತು. ಕರೊನಾ ಬಗ್ಗೆ ಮೈ ಮರೆಯಬಾರದು ಎಂದು ಪೊಲೀಸರು ಜನರನ್ನು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts