More

    ಮೊದಲ ದಿನ ವಿದ್ಯಾರ್ಥಿಗಳಿಗೆ ಹೂ ಮಳೆ ಸ್ವಾಗತ, ಹೊಸ ವರ್ಷದ ಹರ್ಷದೊಂದಿಗೆ ಶಾಲೆ ಆರಂಭ

    ತಳಿರು ತೋಣದಿಂದ ಸಿಂಗಾರಗೊಂಡ ಶಾಲೆಗಳು


    ಕೊಪ್ಪಳ: ಕರೊನಾ ಮಹಾಮಾರಿ ಕಾರಣ ಕಳೆದ 10 ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಶಾಲೆ-ಕಾಲೇಜುಗಳು ಶುಕ್ರವಾರದಂದು ಮರು ಆರಂಭಗೊಂಡಿದ್ದು, ಮೊದಲ ದಿನ ವಿದ್ಯಾರ್ಥಿಗಳಿಗೆ ಹೂ ಹಾಕುವ ಮೂಲಕ ಶಿಕ್ಷಕರು ಸ್ವಾಗತ ಕೋರಿದರು. ಜಿಲ್ಲೆಯಲ್ಲಿ ಕರೊನಾ ಸೋಂಕಿನ ತೀವ್ರತೆ ಕಡಿಮೆ ಇದ್ದರೂ, ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ತರಗತಿಗಳು ಆಂಭವಾಗಿವೆ.

    6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮತ್ತು 10ನೇ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ. ಜಿಲ್ಲೆಯಲ್ಲಿ 1,372 ಪ್ರಾಥಮಿಕ 310 ಪ್ರೌಢಶಾಲೆಗಳಿವೆ. 23,295 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. 1,12,641 6ರಿಂದ 9ನೇ ವಿದ್ಯಾರ್ಥಿಗಳಿದ್ದಾರೆ.48 ಪಿಯು ಕಾಲೇಜುಗಳಿದ್ದು, 11,189 ದ್ವಿತೀಯ ಪಿಯು ವಿದ್ಯಾರ್ಥಿಗಳಿದ್ದಾರೆ. ಪಾಲಕರ ಒಪ್ಪಿಗೆ ಪಡೆದು ಶಾಲೆ-ಕಾಲೇಜಿಗೆ ವಿದ್ಯಾರ್ಥಿಗಳು ಹಾಜರಾಗಬೇಕಿದೆ. ಹೊಸ ವರ್ಷದ ಮೊದಲ ದಿನದಂದೇ ಶಾಲೆ ಆರಂಭವಾಗಿದ್ದು, ವಿದ್ಯಾರ್ಥಿಳು ಹಾಗೂ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಖುಷಿಯಿಂದಲೇ ಶಾಲೆಯತ್ತ ಮುಖ ಮಾಡಿದರು.

    ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳಲು ಬಾಕ್ಸ್ ಮಾದರಿ ಗುರುತುಗಳನ್ನು ಮಾಡಿ, ಥರ್ಮಲ್ ಸ್ಕಾೃನಿಂಗ್ ಹಾಗೂ ಸ್ಯಾನಿಟೈಸರ್ ಹಾಕಿ ಒಳ ಬರಮಾಡಿಕೊಳ್ಳಲಾಯಿತು. ಕೊಪ್ಪಳದ ಸಿಪಿಎಸ್ ಶಾಲೆ, ಸರಸ್ವತಿ ವಿದ್ಯಾಮಂದಿರ, ಮಾಸ್ತಿ ಪಬ್ಲಿಕ್ ಶಾಲೆ ಸೇರಿ ಬಹುಪಾಲು ಎಲ್ಲ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಶಿಕ್ಷಕರು, ಇತರ ಸಿಬ್ಬಂದಿ ಮಾಸ್ಕ್, ಕೈಗವಸು ಧರಿಸಿದ್ದು ಕಂಡುಬಂತು. ಶುಕ್ರವಾರವಾದ್ದರಿಂದ ಕೆಲ ಶಾಲೆಗಳಲ್ಲಿ ಶಾಲೆ ಆರಂಭ ಕಾರ್ಯಕ್ರಮ ಮಾಡಿ ಸರಸ್ವತಿ ಪೂಜೆ ಮಾಡಲಾಯಿತು. ಮನೆಯಲ್ಲಿದ್ದು, ಬೇಸರಗೊಂಡಿದ್ದ ಮಕ್ಕಳ ಮೊಗದಲ್ಲಿ ಶಾಲೆಗೆ ಮರಳಿ ಬಂದ ಹರ್ಷ ಕಾಣಿಸಿತು.

    ಶೇ.10 ಮಕ್ಕಳು ಹಾಜರು: ಜಿಲ್ಲೆಯಲ್ಲಿ ಮೊದಲ ದಿನ 11,189 ವಿದ್ಯಾರ್ಥಿಗಳ ಪೈಕಿ 2,797ದ್ವಿತೀಯ ಪಿಯು ವಿದ್ಯಾರ್ಥಿಗಳು ಕಾಲೇಜುಗಳಿಗೆ ಹಾಜರಾಗಿದ್ದಾರೆ. ಇನ್ನು ಶೇ. 10ರಷ್ಟು ವಿದ್ಯಾರ್ಥಿಗಳು ವಿದ್ಯಾಗಮಕ್ಕೆ ಹಾಜರಾದರು. ಹೊಸ ವರ್ಷದ ಮೊದಲ ದಿನವಾದ್ದರಿಂದ ಪರಸ್ಪರ ಶುಭಾಶಯ ವಿನಿಮಯ ಹಾಗೂ ಲಾಕ್‌ಡೌನ್‌ನಲ್ಲಿ ತಮಗೆ ಆದ ಅನುಭವಗಳ ಕುರಿತು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ಶಿಕ್ಷಕರು ಮಕ್ಕಳೊಂದಿಗೆ ಸಂವಾದ ನಡೆಸಿದರು.


    ಕೋವಿಡ್ ನಿಯಮಗಳ ಅನುಸಾರ ಶಾಲೆ ಆರಂಭಿಸಲಾಗಿದೆ. ಮೊದಲ ದಿನ ನಮ್ಮ ಶಿಕ್ಷಕರು ಹೂ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಬರ ಮಾಡಿಕೊಂಡಿದ್ದಾರೆ. ಪಾಲಕರು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಶೇ.10ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ.
    | ದೊಡ್ಡಬಸಪ್ಪ ನೀರಲಕೆರೆ. ಡಿಡಿಪಿಐ ಕೊಪ್ಪಳ


    ಸದ್ಯ ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸಿದ್ದೇವೆ. ಮೊದಲ ದಿನ 2,797 ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿದ್ದಾರೆ. ಹೊಸ ವರ್ಷದ ಮೊದಲ ದಿನವಾದ್ದರಿಂದ ಬಹಳಷ್ಟು ವಿದ್ಯಾರ್ಥಿಗಳು ಬಂದಿಲ್ಲ. ಮುಂದೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬರುವ ನಿರೀಕ್ಷೆಯಿದೆ.
    | ರಾಜಶೇಖರ್ ಡಿಡಿಪಿಯು ಕೊಪ್ಪಳ

    ಮೊದಲ ದಿನ ವಿದ್ಯಾರ್ಥಿಗಳಿಗೆ ಹೂ ಮಳೆ ಸ್ವಾಗತ, ಹೊಸ ವರ್ಷದ ಹರ್ಷದೊಂದಿಗೆ ಶಾಲೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts