More

    ಕೂಡ್ಲಿಗಿ ಪಪಂ ಉಪಾಧ್ಯಕ್ಷರಾಯ್ಕೆ ಇಂದು


    ಕೂಡ್ಲಿಗಿ: ಬಿಜೆಪಿಯ ಊರಮ್ಮ ನೀಡಿದ ರಾಜೀನಾಮೆಯಿಂದ ತೆರವಾಗಿರುವ ಪಪಂ ಉಪಾಧ್ಯಕ್ಷೆ ಸ್ಥಾನಕ್ಕೆ ಜ.17ರಂದು ುನಾಚಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಟಿ.ಜಗದೀಶ್ ತಿಳಿಸಿದರು.

    ಅಂದು ಬೆಳಗ್ಗೆ 10ರಿಂದ 12 ಗಂಟೆ ತನಕ ನಾಮಪತ್ರ ಸಲ್ಲಿಕೆ, 12 ರಿಂದ 12.15ರ ತನಕ ನಾಮಪತ್ರ ಪರಿಶೀಲನೆ, 12.15 ರಿಂದ 12.30ರ ತನಕ ನಾಮಪತ್ರ ಹಿಂಪಡೆಯಲು, ಚುನಾವಣೆ ನಡೆದರೆ ಸದಸ್ಯರು ಕೈ ಎತ್ತುವ ಮೂಲಕ ಉಪಾಧ್ಯಕ್ಷೆ ಆಯ್ಕೆ ನಡೆಯಲಿದೆ. ಅವಿರೋಧ ಆಯ್ಕೆಯಾದರೆ ಚುನಾವಣಾಧಿಕಾರಿ ಘೋಷಿಸಲಿದ್ದಾರೆ. ಮುಂಜಾಗ್ರತೆಗಾಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಡಿವೈಎಸ್ಪಿ ಜಿ.ಹರೀಶ ಹೇಳಿದರು.

    ಪಪಂನಲ್ಲಿ 20 ಸದಸ್ಯರ ಬಲಾಬಲವಿದ್ದು, ಕಾಂಗ್ರೆಸ್ 7, ಬಿಜೆಪಿ 6, ಜೆಡಿಎಸ್ 5 ಮತ್ತು ಇಬ್ಬರು ಪಕ್ಷೇತರರು ಇದ್ದಾರೆ. ಜೆಡಿಎಸ್ ಬೆಂಬಲದಿಂದ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದರಿಂದ ಬಿಜೆಪಿಯ 2ನೇ ವಾರ್ಡ್ ಸದಸ್ಯೆ ಎಂ.ಶಾರದಾಬಾಯಿಗೆ ಅಧ್ಯಕ್ಷ ಗಾಗಿ, ಸಾಮಾನ್ಯ ಮಹಿಳಗೆ ಉಪಾಧ್ಯಕ್ಷೆ ಸ್ಥಾನ ಮೀಸಲಾಗಿದ್ದರಿಂದ 15ನೇ ವಾರ್ಡ್ ಸದಸ್ಯೆ ಊರಮ್ಮ ಉಪಾಧ್ಯಕ್ಷೆ ಗಾದಿ ಏರಿದ್ದರು. ಉಪಾಧ್ಯಕ್ಷೆ ಸ್ಥಾನ ಊರಮ್ಮ ಮತ್ತು 14ನೇ ವಾರ್ಡ್ ಬಿಜೆಪಿ ಸದಸ್ಯೆ ರೇಣುಕಾ ದುರುಗೇಶ್ ನಡುವೆ ಅಧಿಕಾರ ಹಂಚಿಕೆಯ ಮಾತುಕತೆಯಾಗಿತ್ತು. ಕೋವಿಡ್ ಸೋಂಕು ತಗುಲಿ ಬಿಜೆಪಿಯ 12ನೇ ವಾರ್ಡ್ ಸದಸ್ಯೆ ಬಿ.ಕೆ.ಜಯಮ್ಮ ಮೃತಪಟ್ಟ ಕಾರಣ, ಆ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ಬಿ.ಕೆ.ಸರಸ್ವತಿ ಆಯ್ಕೆಯಾಗಿದ್ದರು. ಈಗ ಬಿ.ಕೆ.ಸರಸ್ವತಿಯವರಿಗೆ ಅವಕಾಶ ಕೊಡಬೇಕು ಎಂದು ಜೆಡಿಎಸ್‌ನ ಮುಖಂಡರು ಒತ್ತಾಯಿಸಿದ್ದಾರೆ. ಹೀಗಾಗಿ ಮೊದಲ ಅವಧಿಗೆ ಬಿ.ಕೆ.ಸರಸ್ವತಿಯನ್ನು ಎರಡನೇ ಅವಧಿಗೆ ರೇಣುಕಾ ದುರುಗೇಶ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವಂತೆ ಶಾಸಕ ಗೋಪಾಲಕೃಷ್ಣ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts