More

    34ನೇ ಶರಣಮೇಳಕ್ಕೆ ವೇದಿಕೆ ಸಿದ್ಧ

    ಕೂಡಲಸಂಗಮ: ಕೂಡಲಸಂಗಮದಲ್ಲಿ ಜನವರಿ 12 ರಿಂದ 14 ರವರೆಗೆ 3 ದಿನ ಸರಳವಾಗಿ ನಡೆಯುವ 34ನೇ ಶರಣ ಮೇಳಕ್ಕೆ ಬಸವ ಧರ್ಮ ಪೀಠದ ಆವರಣ ಸಂಪೂರ್ಣ ಸಿದ್ಧಗೊಂಡಿದ್ದು ಸೋಮವಾರ ಬೆಳಗ್ಗೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

    ಕೂಡಲಸಂಗಮ ಬಸವ ಧರ್ಮ ಪೀಠದ ಮಾಹಾದೇಶ್ವರ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿ, 34ನೇ ಶರಣ ಮೇಳದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ. ಬರುವ ಭಕ್ತರಿಗೆ ವಸತಿ ವ್ಯವಸ್ಥೆಯನ್ನು ಬಸವ ಧರ್ಮ ಪೀಠದ ಅಕ್ಕ ನಾಗಲಾಂಬಿಕೆ, ಸರ್ವಜ್ಞ, ಸಿದ್ಧರಾಮೇಶ್ವರ, ಅಕ್ಕಮಹಾದೇವಿ, ಕಲ್ಯಾಣಮ್ಮ, ನಿಲಾಂಬಿಕೆ, ಹರಳಯ್ಯ, ಹಡಪದ ಅಪ್ಪಣ್ಣ, ಶಾಂತರಸ, .ಗು. ಹಳಕಟ್ಟಿ ಶರಣ ಧಾಮದಲ್ಲಿ 500 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. 20 ಮಾರಾಟ ಮಳಿಗೆಗಳ ಟೆಂಟ್ ನಿರ್ಮಿಸಲಾಗಿದೆ ಎಂದು ಹೇಳಿದರು.

    120/240 ಅಡಿ ಉದ್ದದ ವೇದಿಕೆ, 120/120 ಅಡಿ ಉದ್ದದ ಊಟದ ಮನೆ ನಿರ್ಮಿಸಿದ್ದು ಪರಸ್ಪರ ಅಂತರದೊಂದಿಗೆ ಕಾರ್ಯಕ್ರಮ ವೀಕ್ಷಿಸಲು ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ಆಗಮಿಸುವ ಭಕ್ತರಿಗೆ ಉತ್ತರ ಕರ್ನಾಟಕದ ಬಿಳಿಜೋಳದ ರೊಟ್ಟಿ, ಸಜ್ಜೆ ರೋಟಿ, ಲಾಡು, ಹುಗ್ಗಿ, ಸಾವಿಗೆ ಪೈಸ, ಕುಂಬಳಕಾಯಿ ಪೈಸ, ಜಾಮೂನು, ಮೈಸೂರು ಪಾಕ್ ಮುಂತಾದ ಸಿಹಿತಿಂಡಿಗಳ ಜತೆಗೆ ಮೊಸರು, ಮಜ್ಜಿಗೆ ಕೊಡಲಾಗುವುದು. 25 ಬಾಣಸಿಗರು, 100 ಸಹಾಯಕರು ಅಡುಗೆ ತಯಾರಿ ಮಾಡುವರು. ರಾಷ್ಟ್ರೀಯ ಬಸವ ದಳದ 500ಕ್ಕೂ ಅಧಿಕ ಕಾರ್ಯಕರ್ತರನ್ನು ಪ್ರಸಾದ ಬಡಿಸಲು ಸರತಿ ಪದ್ಧತಿಯಲ್ಲಿ ನಿಯೋಜನೆ ಮಾಡಲಾಗಿದೆ. ಶರಣ ಮೇಳಕ್ಕೆ ಆಗಮಿಸುವ ಭಕ್ತರಿಗೆ ಬಾಗಲಕೋಟೆ, ಇಲಕಲ್ಲ, ಹುನಗುಂದ, ವಿಜಯಪುರ ರಾಜ್ಯ ರಸ್ತೆ ಸಾರಿಗೆ ಘಟಕದವರು ಅಧಿಕ ಪ್ರಮಾಣದಲ್ಲಿ ಬಸ್‌ಗಳನ್ನು ಬಿಡುವಂತೆ ತಿಳಿಸಲಾಗಿದೆ ಎಂದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts