More

    ಪಂಚಸಂಗಮ ಸಭೆಯ ನಿರ್ಣಯಗಳು

    ಕೂಡಲಸಂಗಮ: ಪಂಚಮಸಾಲಿ ಪಾದಯಾತ್ರೆಯ ತೃತೀಯ ವರ್ಷಾಚರಣೆ ನಿಮಿತ್ತ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ 2ಎ ಮೀಸಲಾತಿ ಚಳವಳಿಗಾರರ ಪಂಚಸಂಗಮ ಸಭೆ ಹಾಗೂ 12ನೇ ಕೃಷಿ ಸಂಕ್ರಾಂತಿ ಸಮಾರಂಭದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

    ಲೋಕಸಭೆ ಚುನಾವಣೆ ಪೂರ್ವ ಬೆಂಗಳೂರು ಅಥವಾ ದಾವಣಗೆರೆಯಲ್ಲಿ 10 ಲಕ್ಷ ಜನರ ಶಕ್ತಿ ಪ್ರದರ್ಶನ ಮಾಡುವುದು. ಲಿಂಗಾಯತ ಒಳ ಪಂಗಡಗಳ ದುಂಡು ಮೇಜಿನ ಪೂರ್ವಭಾವಿ ಸಭೆಯನ್ನು ಜನವರಿ 27,28 ರಂದು ದಾವಣಗೆರೆಯಲ್ಲಿ ನಡೆಸಲಾಗುವುದು, 2ಎ ಮೀಸಲಾತಿಗಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ನಿಯೋಗ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಶಾಸಕ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಬಿ.ಆರ್.ಪಾಟೀಲರಿಗೆ ವಹಿಸುವಂತೆ ಸಭೆ ನಿರ್ಣಯ ತೆಗೆದುಕೊಂಡಿದೆ. ಮುಖ್ಯಮಂತ್ರಿಗಳು ಕೇಳಿದ ಒಂದು ವಾರದ ಕಾಲಾವಕಾಶ ಮುಗಿದಿರುವುದರಿಂದ ಆದಷ್ಟು ಬೇಗ ಕಾನೂನು ತಜ್ಞರ ಸಭೆ ಕರೆಯವಂತೆ ಸಭೆ ಒತ್ತಾಯಿಸಿತು.

    ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಚಿವ ಸಂಪುಟದಲ್ಲಿ ನಿರ್ಣಯಿಸಿ ಬೇಗ ಸರ್ಕಾರ ಘೋಷಿಸುವಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ವಾಮೀಜಿ ಹೇಳಿದರು.

    2024ರ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ಗುಜರಾತ್ ರಾಜ್ಯದ ಅಂತಾರಾಷ್ಟ್ರೀಯ ಸಾವಯವ ಕೃಷಿ ವಿಜ್ಞಾನಿ ಡಾ. ಎಂ.ಎಚ್. ಮೆಹ್ತಾ ಅವರಿಗೆ ನೀಡಲು ಘೋಷಿಸಿತ್ತು. ಪ್ರಯಾಣದ ತೊಂದರೆಯಿಂದ ಇಂದು ಪ್ರಶಸ್ತಿ ಸ್ವೀಕರಿಸಲು ಮೆಹ್ತಾ ಅವರು ಬರಲಿಲ್ಲ. ಈ ಪ್ರಶಸ್ತಿಯನ್ನು ೆಬ್ರವರಿ ತಿಂಗಳಲ್ಲಿ ಕೂಡಲಸಂಗಮದಲ್ಲಿಯೇ ಮೆಹ್ತಾ ಅವರಿಗೆ ನೀಡಲಾಗುವುದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. 14 ಕೆ.ಎಸ್.ಎಂ 5
    ಬಸವಜಯಮತ್ಯುಂಜಯ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts