More

  ತಾಳುಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಭಕ್ತೆ ಕಾಡಾನೆ ದಾಳಿಗೆ ಬಲಿ!

  ಚಾಮರಾಜನಗರ: ಹನೂರು ತಾಲೂಕಿನ ತಾಳುಬೆಟ್ಟ ಹಾಗೂ ಮಲೆಮಹದೇಶ್ವರ ಬೆಟ್ಟದ ನಡುವಿನ ಅರಣ್ಯ ಪ್ರದೇಶದಲ್ಲಿ ತೆರಳುತಿದ್ದ ವೇಳೆ ಭಕ್ತೆಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

  ತಾಳು ಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಅರಣ್ಯ ಪ್ರದೇಶದ ಮೂಲಕ ಪಾದಯಾತ್ರೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಭಕ್ತೆಯ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ಪಡೆದಿದೆ. ಈ ಘಟನೆ ಮಂಗಳವಾರ ಸಂಜೆ ಯುಗಾದಿ ಹಬ್ಬದಂದೇ ನಡೆದಿದೆ.

  Elephant Attck 1

  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲೇಗಾಳ ಗ್ರಾಮದ ಲಕ್ಷ್ಮೀ (36) ಮೃತ ದುರ್ದೈವಿ. ಈಕೆ ಮಂಗಳವಾರ ಸಂಜೆ 5 ಗಂಟೆಯಲ್ಲಿ ಸಹೋದರ ಪುಟ್ಟರಾಜು, ಸಹೋದರಿ ಪದ್ಮ ಇವರ ಜತೆಗೂಡಿ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ರಂಗಸ್ವಾಮಿ ಒಡ್ಡು ಸಮೀಪದ ಅರಣ್ಯ ಪ್ರದೇಶದಲ್ಲಿ ಒಂಟಿ ಆನೆಯೊಂದು ದಾಳಿ ನಡೆಸಿದ ಪರಿಣಾಮ ಲಕ್ಷ್ಮೀ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

  ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

  ದೇಹ ತಣ್ಣಗಿಡಲು ಹೊರಗಡೆ ಜ್ಯೂಸ್​ ಕುಡಿಯುತ್ತೀರಾ? ಎಷ್ಟು ಡೇಂಜರ್​ ಗೊತ್ತಾ? ಈ ವಿಚಾರ ನಿಮ್ಗೆ ತಿಳಿದಿರಲೇಬೇಕು

  ಕಳೆದ ತಿಂಗಳಲ್ಲಿ ಅತೀ ಹೆಚ್ಚು ಬಾರಿ ನೋಡಲಾದ ವೆಬ್‌ಸೈಟ್‌ಗಳಿವು! ನೀವು ಇದನ್ನೇ ಚೆಕ್ ಮಾಡಿದ್ರಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts