More

    ನೂತನ್ ಬಸ್ ಮಾರ್ಗದ ಸಂಚಾರಕ್ಕೆ ಚಾಲನೆ

    ಕೂಡಲಸಂಗಮ: ಕೂಡಲಸಂಗಮದಿಂದ ಬೆಂಗಳೂರು, ಬಸವನಬಾಗೇವಾಡಿಯಿಂದ ಕೂಡಲಸಂಗಮ ನೂತನ ಮಾರ್ಗದ ಬಸ್ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವಿಶೇಷಾಧಿಕಾರಿ ಶಿವಯೋಗಿ ಕಳಸದ ಶನಿವಾರ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಹೊರ ಆವರಣದಲ್ಲಿ ಚಾಲನೆ ನೀಡಿದರು.

    ಹುನಗುಂದ ಘಟಕದ ಕೂಡಲಸಂಗಮ ಬೆಂಗಳೂರು ಬಸ್ ಸಂಜೆ 6 ಗಂಟೆಗೆ ಕೂಡಲಸಂಗಮದಿಂದ ಹೊರಟು ಹುನಗುಂದ, ಇಳಕಲ್ಲ, ಹೊಸಪೇಟೆ, ಚಿತ್ರದುರ್ಗ, ತುಮಕೂರ ಮಾರ್ಗವಾಗಿ ಬೆಳಗ್ಗೆ 5.30ಕ್ಕೆ ಬೆಂಗಳೂರು ತಲುಪುವುದು. ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಡುವ ಬಸ್ ಬೆಳಗ್ಗೆ 8 ಗಂಟೆಗೆ ಕೂಡಲಸಂಗಮ ತಲುಪುವುದು.

    ಬಸವನಬಾಗೇವಾಡಿಯಿಂದ ಕೂಡಲಸಂಗಮಕ್ಕೆ ನಿರಂತರ ಎರಡು ಬಸ್‌ಗಳು ಮ್ಯಾಗೇರಿ, ಆಲಮಟ್ಟಿ, ನಿಡಗುಂದಿ ಮಾರ್ಗವಾಗಿ ಸಂಚರಿಸುವುವು. ನಿತ್ಯ ಎರಡು ಬಸ್‌ಗಳಿಂದ 12 ಟ್ರಿಪ್ ಸಂಚಾರ ಆರಂಭವಾಗುವುದು ಎಂದರು.

    ಬಾಗಲಕೋಟೆ ಘಟಕ ವಿಭಾಗ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣವರ, ವಿಜಯಪುರ ಘಟಕ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ, ಸಂಚಾರಿ ಅಧಿಕಾರಿ ಪಿ.ವ್ಹಿ.ಮೈತ್ರಿ, ಹುನಗುಂದ ಘಟಕ ವ್ಯವಸ್ಥಾಪಕ ಜಿ.ಬಿ. ಚಿತ್ತವಾಡಗಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ರಘು ಎ.ಇ ಸೇರಿದಂತೆ ಮತ್ತಿತರರು ಇದ್ದರು.
    ಬಸವನಬಾಗೇವಾಡಿಯಿಂದ ಕೂಡಲಸಂಗಮಕ್ಕೆ ನೇರ ಬಸ್ ಸಂಚಾರ ಇಲ್ಲಿಯವರೆಗೂ ಯಾರು ಆರಂಭಿಸಿರಲಿಲ್ಲ. ಬಸವನ ಬಾಗೇವಾಡಿ ಘಟಕದಿಂದ ಆರಂಭಿಸಿರುವುದು ಸಂತಸ ಉಂಟು ಮಾಡಿದೆ. ಹುನಗುಂದ ಘಟಕ ದಿಂದ ಕೂಡಲಸಂಗಮ ಬೆಂಗಳೂರು ಬಸ್ ಹತ್ತು ವರ್ಷಗಳ ಹಿಂದೆ ಇತ್ತು ಮತ್ತೆ ಅದೇ ಮಾರ್ಗ ಬಸ್ ಆರಂಭಿಸಿರುವುದು ಪ್ರವಾಸಿಗರಿಗೆ ಅನುಕೂಲವಾಗುವುದು ಎಂದು ಗ್ರಾಮಸ್ಥರು ಹೇಳಿದರು.

    ಕೂಡಲಸಂಗಮದಿಂದ ಬಾಗಲಕೋಟೆಗೆ, ಹುನಗುಂದಕ್ಕೆ ಸಮಪರ್ಕ ಬಸ್ ಸೇವೆ ಇಲ್ಲ, ನಿತ್ಯ ಕ್ಷೇತ್ರಕ್ಕೆ ಬರುವ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕ ಬಸ್ ಬಿಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಕೆಲ ದಿನಗಳ ಹಿಂದೆ ಮನವಿ ಕೊಟ್ಟಾಗ ಘಟಕ ವ್ಯವಸ್ಥಾಪಕರಿಗೆ ಬಸ್ ಬಿಡಲು ಸೂಚಿಸಿದರು. ಇನ್ನೂ ಬಸ್ ಬಿಟ್ಟಿರುವುದಿಲ್ಲ, ಕೂಡಲೇ ಈ ಮಾರ್ಗದಲ್ಲಿ ಬಸ್ ಬಿಡುವ ಕಾರ್ಯ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೂಡಲಸಂಗಮ ಘಟಕದ ಅಧ್ಯಕ್ಷ ಮಹಾಂತೇಶ ಕುರಿ ಹೇಳಿದರು.

    ಕೂಡಲಸಂಗಮದಿಂದ ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಶಿವಯೋಗ ಮಂದಿರ ಮೂಲಕ ಬಾದಾಮಿಗೆ ತಲುಪುವ ಸಂಚಾರ ಮಾರ್ಗದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಈ ಮಾರ್ಗದಲ್ಲಿ ಬಸ್ ಬಿಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು.
    ಶಿವಯೋಗಿ ಕಳಸದ,ಎಂಡಿ, ಕೆಎಸ್‌ಆರ್‌ಟಿಸಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts