More

  ಕ್ಷಯಮುಕ್ತ ಭಾರತ ನಮ್ಮ ಗುರಿ

  ಕೊಂಡ್ಲಹಳ್ಳಿ: ಭಾರತ ದೇಶವನ್ನು 2025ರ ವೇಳೆಗೆ ಕ್ಷಯಮುಕ್ತ ಮಾಡುವ ಗುರಿ ಹೊಂದಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್ ತಿಳಿಸಿದರು.

  ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಕ್ರಿಯ ಕ್ಷಯರೋಗ ಪತ್ತೆ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿದೆ ಎಂದರು.

  ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೆಳೆ ಜ್ವರ, ಬೆವರುವುದು, ಹಸಿವಾಗದಿರುವುದು ಇತರ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

  ನಿವೃತ್ತ ಶಿಕ್ಷಕ ವಿ.ಮೇಘನಾಥ್, ಫಾರ‌್ಮಸಿಸ್ಟ್ ಬಿ.ಟಿ.ಮೃತ್ಯುಂಜಯ, ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ನವೀನ್,

  ಪ್ರಾಥಮಿಕ ಆರೋಗ್ಯ ಸುರಕ್ಷಣಧಿಕಾರಿಗಳಾದ ಲಕ್ಷ್ಮೀ, ಟಿ.ಆರ್.ಶೋಭಾ, ಸೌಮ್ಯಾಶ್ರೀ, ಆರ್.ರಮ್ಯಾ, ಮಹೇಶ್,

  ಆಶಾ ಕಾರ್ಯಕರ್ತೆಯರಾದ ಚನ್ನವೀರಮ್ಮ, ಸಾವಿತ್ರಮ್ಮ, ಪುಟ್ಟಮ್ಮ, ಯಶೋಧಮ್ಮ, ವಿನೋದಾ, ಮಂಜಕ್ಕ, ಅನುಸೂಯಮ್ಮ, ಹಸೀನಾ, ಸುಮಾ ಇತರರಿದ್ದರು.

  ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಜಾಥಾ ಆಯೋಜಿಸಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts