More

    ಕೋಮಲ್ ಅಭಿನಯದ ಹೊಸ ಚಿತ್ರಕ್ಕೆ ‘ಯಲಾ ಕುನ್ನಿ’ ಎಂದು ನಾಮಕರಣ …

    ಬೆಂಗಳೂರು: ಕೋಮಲ್​ ಮತ್ತೊಮ್ಮೆ ಬಿಜಿಯಾಗಿದ್ದಾರೆ. ‘ಕಾಲಾಯ ನಮಃ’ ಮತ್ತು ‘ರೊಲೆಕ್ಸ್​’ ಚಿತ್ರಗಳ ನಂತರ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಯಲಾ ಕುನ್ನಿ’ ಎಂದು ಹೆಸರಿಡಲಾಗಿದೆ. ಈ ಹೆಸರಿಗೆ ‘ಮೇರಾ ನಾಮ್ ವಜ್ರಮುನಿ!’ ಎಂಬ ಅಡಿಬರಹ ಸಹ ಇದೆ.

    ಇದನ್ನೂ ಓದಿ: ಧ್ರುವ ಸರ್ಜಾ ಮಗಳು ಹೇಗಿದ್ದಾಳೆ ಗೊತ್ತಾ?: ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ

    ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ‘ಎಲಾ ಕುನ್ನಿ’ ಚಿತ್ರವನ್ನು ಎನ್.ಆರ್. ಪ್ರದೀಪ ನಿರ್ದೇಶಿಸುತ್ತಿದ್ದಾರೆ. ಇದಕ್ಕೂ ಮುನ್ನ ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಮುಂತಾದ ನಿರ್ದೇಶಕರ ಜತೆಗೆ ಕೆಲಸ ಮಾಡಿರುವ ಪ್ರದೀಪ್​ಗೆ ಇದು ಮೊದಲ ಚಿತ್ರ.

    1981ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನ ಹಳ್ಳಿ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗುವುದಂತೆ.‌ ಚಿತ್ರದಲ್ಲಿ ವಜ್ರಮುನಿಯಾಗಿ ಕೋಮಲ್ ರೆಟ್ರೋ ಲುಕ್​ನಲ್ಲಿ ಕಾನಿಸಿಕೊಳ್ಳುತ್ತಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣಮೂರ್ತಿ ಅವರ ಮಗ ಜಯಸಿಂಹ ಮುಸುರಿ, ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ ‘ಫ್ರೆಂಚ್ ಬಿರಿಯಾನಿ’ ಖ್ಯಾತಿಯ ಮಹಾಂತೇಶ್ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ನಲ್ಲೂ ‘ಕಬ್ಜ’ ಹವಾ; ಬುಲೆಟ್​ ಸವಾರಿ ಮಾಡಿದ ಉಪೇಂದ್ರ

    ‘ಯಲಾ ಕುನ್ನಿ – ಮೇರಾ ನಾಮ್ ವಜ್ರಮುನಿ!’ ಚಿತ್ರಕ್ಕೆ ನಿರ್ದೇಶಕ ಪ್ರದೀಪ್​ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಧರ್ಮವಿಶ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

    ನಿಮ್ಮ ಮದುವೆ ಬಗ್ಗೆ ಹೇಳಿ… ಸಿನಿಮಾ ವೇದಿಕೆಯಲ್ಲಿ ನಟ ನರೇಶ್​ ಕೊಟ್ಟ ಉತ್ತರ ಹೀಗಿತ್ತು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts