More

    VIDEO| ಇದ್ದರೆ ಇಂತಹ ನಿಜವಾದ ಪ್ರೇಮಿ ಇರಬೇಕು: ಕಣ್ಣೀರು ತರಿಸುತ್ತೇ ಈ ಲವ್ ಸ್ಟೋರಿ!

    ಕೋಲಾರ: ಇಂದು ನಿಷ್ಕಲ್ಮಶ ಪ್ರೀತಿ ಸಿಗುವುದೇ ತುಂಬಾ ವಿರಳ. ಎಲ್ಲವೂ ಸರಿಯಿದ್ದರೆ ಮಾತ್ರ ಅಲ್ಲಿ ಪ್ರೀತಿಗೆ ಸ್ಥಳವಿರುತ್ತದೆ. ಕೊಂಚ ವ್ಯತ್ಯಾಸವಾದರೂ ಪ್ರೀತಿ ಮಾಯವಾಗುತ್ತದೆ. ಅಂತಹ ಸ್ವಾರ್ಥ ಪ್ರಪಂಚದಲ್ಲಿ ಇಂದು ನಾವಿದ್ದೇವೆ. ಕಷ್ಟ ಅಂತ ಬಂದಾಗ ಕೈಕೊಟ್ಟು ಬೇರೆ ದಾರಿಯತ್ತ ಮುಖ ಮಾಡುವವರ ನಡುವೆ, ಕೋಲಾರದ ವ್ಯಕ್ತಿಯೊಬ್ಬ ತನ್ನ ಪ್ರೀತಿಯನ್ನು ಹೇಗೆ ಪೋಷಿಸುತ್ತಿದ್ದಾನೆಂದು ತಿಳಿದರೆ ನಿಜಕ್ಕೂ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುತ್ತದೆ.

    ಮಾಲೂರು ತಾಲ್ಲೂಕು ದೊಡ್ಡಕಡತೂರು ಗ್ರಾಮದ ನಿವಾಸಿಗಳಾದ ರಘು ಹಾಗೂ ದಿವ್ಯಾ, 2013ರ ಮೇ.24ರಂದು ತಮ್ಮ ಹೆತ್ತವರ ವಿರೋಧದ ನಡುವೆಯು ಮದುವೆಯಾಗಿದ್ದಾರೆ. ನೂರಾರು ಕನಸನ್ನು ಕಟ್ಟಿಕೊಂಡು 6 ವರ್ಷಗಳ ಕಾಲ ಪ್ರೀತಿಸಿ, ಮನಸಾರೆ ಇಷ್ಟಪಟ್ಟು ಮದುವೆಯಾದರು. ನಾಲ್ಕು ವರ್ಷಗಳ ಕಾಲ ಪ್ರೀತಿಯಿಂದಲೇ ಸಂಸಾರ ನಡೆಸಿದರು. ಇನ್ನೇನು ಸುಂದರ ಸಂಸಾರದಲ್ಲಿ ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ 2017ರಲ್ಲಿ ಹೊಸ ಅಥಿತಿಯ ಆಗಮನವಾಗಲಿದೆ ಅನ್ನುವ ಸಮಯದಲ್ಲಿ ಆಸ್ಪತ್ರೆಯವರು ಮಾಡಿದ ಯಡವಟ್ಟು ಸುಂದರ ಸಂಸಾರದ ಸಂತಸವನ್ನೇ ಕೋಮಾಗೆ ದೂಡಿದೆ.

    ಐದು ವರ್ಷಗಳ ಹಿಂದೆ ಹೆರಿಗೆ ಸಂದರ್ಭದಲ್ಲಿ ವೈದ್ಯರು ನೀಡಿದ ಅತಿಯಾದ ಅರವಳಿಕೆಯಿಂದ ಕೋಮಾಗೆ ಹೋದ ದಿವ್ಯಾ, ಅಂದಿನಿಂದ ಇಂದಿನವರೆಗೂ ಕೋಮಾಸ್ಥಿತಿಯಲ್ಲಿದ್ದಾರೆ. ಜೀವಂತ ಶವವಾಗಿರುವ ತನ್ನ ಪ್ರಿಯತಮೆಯನ್ನು ರಘು, ತನ್ನ ಅಂಗೈನಲ್ಲಿಟ್ಟುಕೊಂಡು ಹಾರೈಕೆ ಮಾಡುತ್ತಿದ್ದಾರೆ.

    ಕೋಮಾ ಸ್ಥಿತಿಯಲ್ಲಿರುವ ದಿವ್ಯಾಳ ಪರಿಸ್ಥಿತಿ ಇಂದಿಗೆ ಹೇಗಿದೆ ಅನ್ನೋದನ್ನ ನೋಡಿದ್ರೆ ಒಂದು ಕ್ಷಣ ನಿಮ್ಮ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಕೋಮಾಗೆ ಹೋಗಿ ಐದು ವರ್ಷಗಳಾಗಿ ಮತ್ತೆ ಯಥಾಸ್ಥಿತಿಗೆ ಬಾರದ ತನ್ನ ಪ್ರಿಯತಮೆ ದಿವ್ಯಾಳನ್ನು ಮಗುವಂತೆ ಆರೈಕೆ ಮಾಡುತ್ತಾ ರಘು ತನ್ನ ಜೀವನ‌ ಕಳೆಯುತ್ತಿದ್ದಾನೆ.

    ಇನ್ನು ಕಳೆದ ಐದು ವರ್ಷಗಳ ಹಿಂದೆ ಕೋಮಾ ಸ್ಥಿತಿಗೆ ತಲುಪಿದ ದಿವ್ಯಾಳಿಗಾಗಿ ರಘು ಹಾಗೂ ದಿವ್ಯಾಳ ಪೊಷಕರು ಮಾಡದ ಕೆಲಸವಿಲ್ಲ, ಬೇಡದ ದೇವರಿಲ್ಲ, ಸುತ್ತದ ಆಸ್ಪತ್ರೆಗಳಿಲ್ಲ ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಿದ್ದರೂ ತನ್ನ ದಿವ್ಯಾಳನ್ನು ತನ್ನ ಮಗುವಂತೆ ನೋಡಿಕೊಳ್ಳುತ್ತಿರುವ ರಘು ಹಾಗೂ ತನ್ನನ್ನು ಇಷ್ಟು ಪ್ರೀತಿಸುವ ಗಂಡನನ್ನು ಬಿಟ್ಟು ಹೋಗದೆ ಉಸಿರು ಬಿಗಿಡಿದುಕೊಂಡಿದ್ದಾಳೆ. (ದಿಗ್ವಿಜಯ ನ್ಯೂಸ್​)

    ಪ್ರೇಮಿಗಳ ದಿನದಂದೇ ಅನಾರೋಗ್ಯ ಪೀಡಿತ ಪತ್ನಿಗೆ ಪತಿಯಿಂದ ಕಿಡ್ನಿ ದಾನ: ಮನಕಲಕುವ ಕತೆ ಇದು!

    ಪ್ರೇಮಿಗಳ ದಿನದಂದೇ ಪುಲ್ವಾಮಾದಲ್ಲಿ ಪಾಕ್‌ ಉಗ್ರರ ಅಟ್ಟಹಾಸಕ್ಕೆ ಎರಡು ವರ್ಷ: 40 ಯೋಧರ ನೆನೆದು ಕಣ್ಣೀರು

    ಶಾಕಿಂಗ್‌! ಚಾವಣಿ ತೆಗೆದು ಒಳನುಗ್ಗಿ ಹಸುಗೂಸನ್ನು ಎಳೆದೊಯ್ದ ಮಂಗ- ಅಸುನೀಗದ ಕಂದಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts