More

    ಕ್ರಿಕೆಟ್‌ನಲ್ಲೂ ಇದ್ದಾರೆ ಫೆಡರರ್, ನಡಾಲ್!

    ನವದೆಹಲಿ: ಟೆನಿಸ್ ದಿಗ್ಗಜರಾದ ರೋಜರ್ ೆಡರರ್ ಮತ್ತು ರಾೆಲ್ ನಡಾಲ್‌ಗೆ ಸರಿಸಮಾನರಾದ ಆಟಗಾರರು ಕ್ರಿಕೆಟ್‌ನಲ್ಲೂ ಇದ್ದಾರೆ ಎಂದು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ. ಅವರ ಪ್ರಕಾರ ಕ್ರಿಕೆಟ್‌ನಲ್ಲಿರುವ ೆಡರರ್ ಎಂದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ! ನಡಾಲ್ ಎಂದರೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್!

    ಇದನ್ನೂಓದಿ: ‘ಇಂಡಿಯನ್’ ಪ್ರೀಮಿಯರ್ ಲೀಗ್‌ಗೆ ಚೆನ್ನೈಸೂಪರ್ ಕಿಂಗ್ಸ್ ವಿರೋಧ!

    ಕೊಹ್ಲಿ ಅವರಲ್ಲಿರುವ ಸ್ವಾಭಾವಿಕ ಪ್ರತಿಭೆಯಿಂದಾಗಿ ಅವರನ್ನು ಫೆಡರರ್‌ಗೆ ಹೋಲಿಸುತ್ತೇನೆ. ೆಡರರ್‌ರಂತೆ ಕೊಹ್ಲಿ ಬಹಳ ಸ್ವಾಭಾವಿಕವಾಗಿ ಚೆಂಡನ್ನು ಬಾರಿಸುತ್ತಾರೆ. ಸ್ಟೀವನ್ ಸ್ಮಿತ್ ಅವರಲ್ಲಿರುವ ಮಾನಸಿಕ ಸ್ಥೈರ್ಯದಿಂದಾಗಿ ನಡಾಲ್‌ಗೆ ಹೋಲಿಸುತ್ತಿರುವೆ. ಅವರ ಆಟ ಸ್ವಾಭಾವಿಕದಂತೆ ಕಾಣಿಸದಿದ್ದರೂ, ರನ್ ಗಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ವಿಲಿಯರ್ಸ್‌, ಜಿಂಬಾಬ್ವೆಯ ವೇಗಿ ಪೊಮ್ಮಿ ಎಂಬಂಗ್ವ ಜತೆಗಿನ ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ಹೇಳಿದ್ದಾರೆ.

    ‘ಮಾನಸಿಕ ಶಕ್ತಿಯ ವಿಷಯದಲ್ಲಿ ಸ್ಮಿತ್ ನಾನು ಇದುವರೆಗೆ ನೋಡಿದ ಅತ್ಯುತ್ತಮ ಆಟಗಾರ. ವಿರಾಟ್ ಕೂಡ ವಿಶ್ವದೆಲ್ಲೆಡೆ ಸಾಕಷ್ಟು ರನ್ ಗಳಿಸಿದ್ದಾರೆ. ಒತ್ತಡದ ನಡುವೆ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ’ ಎಂದು ಎಬಿಡಿ, ಕೊಹ್ಲಿ-ಸ್ಮಿತ್‌ರನ್ನು ಯಾರು ಉತ್ತಮ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಇದನ್ನೂಓದಿ: ಧೋನಿ ತಾಳ್ಮೆ ಕಳೆದುಕೊಂಡಿದ್ದನ್ನು ನೋಡಿದ್ದೇವೆ!

    ಚೇಸಿಂಗ್‌ನಲ್ಲಿ ಸಚಿನ್‌ಗಿಂತ ಕೊಹ್ಲಿ ಬೆಸ್ಟ್
    ಕ್ರಿಕೆಟ್ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್‌ಗಿಂತ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ಎಂದು ಎಬಿ ಡಿವಿಲಿಯರ್ಸ್‌ ಅಭಿಪ್ರಾಯಪಟ್ಟಿದ್ದಾರೆ. ‘ಸಚಿನ್ ನನಗೆ ಮತ್ತು ಕೊಹ್ಲಿ ಇಬ್ಬರಿಗೂ ಆದರ್ಶ ಆಟಗಾರ. ಅವರು ವೃತ್ತಿಜೀವನದುದ್ದಕ್ಕೂ ನಡೆದುಕೊಂಡ, ದಾಖಲೆಗಳನ್ನು ನಿರ್ಮಿಸಿದ ರೀತಿ ನಿಜಕ್ಕೂ ಅಮೋಘ ಮತ್ತು ಎಲ್ಲರಿಗೂ ಅನುಕರಣೀಯ. ಅದೇ ರೀತಿ ಕೊಹ್ಲಿ ಕೂಡ ತಮ್ಮದೇ ರೀತಿಯ ಗುಣಮಟ್ಟವನ್ನು ನಿರ್ಮಿಸಿದ್ದಾರೆ. ಚೇಸಿಂಗ್ ವಿಷಯದಲ್ಲಿ ಕೊಹ್ಲಿ, ನಾನು ಜೀವಮಾನದಲ್ಲಿ ನೋಡಿರುವ ಅತ್ಯುತ್ತಮ ಬ್ಯಾಟ್ಸ್‌ಮನ್. ಸಚಿನ್ ಎಲ್ಲ ರೀತಿಯ ಕ್ರಿಕೆಟ್ ಪ್ರಕಾರ ಮತ್ತು ಪರಿಸ್ಥಿತಿಗಳಲ್ಲಿ ಅಮೋಘ ಆಟಗಾರ. ಆದರೆ ಚೇಸಿಂಗ್ ವಿಷಯದಲ್ಲಿ ಕೊಹ್ಲಿಯೇ ಮೇಲುಗೈ ಸಾಧಿಸುತ್ತಾರೆ’ ಎಂದು ಎಬಿಡಿ ವಿವರಿಸಿದ್ದಾರೆ.

    ಲಿಟ್ಟಲ್ ಕೊಹ್ಲಿಗಾಗಿ ಕಾಯುತ್ತಿರುವೆ!
    ಆರ್‌ಸಿಬಿ ತಂಡದಲ್ಲಿ ಕೊಹ್ಲಿ ಸಹ-ಆಟಗಾರರಾಗಿರುವ ಎಬಿಡಿ, ಸಹಜವಾಗಿಯೇ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಐಪಿಎಲ್ ವೇಳೆ ಸಾಕಷ್ಟು ಸಮಯವನ್ನು ಜತೆಯಾಗಿ ಕಳೆಯುವುದರಿಂದಾಗಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಕ್ರಿಕೆಟ್ ಹೊರತಾಗಿ ಧಾರ್ಮಿಕ, ಕೌಟುಂಬಿಕ ವಿಷಯಗಳ ಬಗ್ಗೆಯೂ ಮಾತನಾಡುತ್ತೇವೆ ಎಂದು ಎಬಿಡಿ ಹೇಳಿದ್ದಾರೆ. ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಜತೆಗೂ ಉತ್ತಮ ಸ್ನೇಹವಿದೆ. ಅವರೊಂದಿಗೂ ಮಕ್ಕಳು, ಕುಟುಂಬದ ಬಗ್ಗೆ ಮಾನತಾಡುತ್ತೇನೆ ಎಂದಿರುವ ಎಬಿಡಿ ಕೊನೆಯಲ್ಲಿ, ‘ಲಿಟ್ಟಲ್ ಕೊಹ್ಲಿಯ ಬರುವಿಕೆಗಾಗಿ ನಾವು ಕಾಯುತ್ತಿದ್ದೇವೆ’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts