More

    ಧೋನಿ ತಾಳ್ಮೆ ಕಳೆದುಕೊಂಡಿದ್ದನ್ನು ನೋಡಿದ್ದೇವೆ!

    ಮುಂಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್ ವಲಯದಲ್ಲಿ ‘ಕ್ಯಾಪ್ಟನ್ ಕೂಲ್’ ಎಂದೇ ಹೆಸರು ಮಾಡಿದವರು. ಎದುರಾಳಿ ತಂಡದ ಆಟಗಾರರಿಗೂ ಧೋನಿ ಕೂಲ್ ಸೆನ್ಸ್ ಇಷ್ಟವಾಗುತ್ತದೆ. ಆದರೆ, ಮಾಜಿ ಆಟಗಾರರಾದ ಗೌತಮ್ ಗಂಭಿರ್ ಹಾಗೂ ರ್ಇಾನ್ ಪಠಾಣ್, ಧೋನಿ ಕೂಲ್ ಕಳೆದುಕೊಂಡಿರುವ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಧೋನಿ ಸಿಟ್ಟಾಗಿದ್ದರ ಬಗ್ಗೆ ಬಹಿರಂಗ ಪಡಿಸಿದ್ದರು. 2017ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ವೇಳೆ ಧೋನಿ ಸೂಚನೆಗಳನ್ನು ಸರಿಯಾಗಿ ಪಾಲಿಸದ್ದಕ್ಕೆ ಕೆಂಗಣ್ಣಿಗೆ ಗುರಿಯಾಗಿದ್ದೆ ಎಂದು ಹೇಳಿಕೊಂಡಿದ್ದರು.

    ಇದನ್ನೂಓದಿ: VIDEO| ಕನ್ನಡದಲ್ಲಿ ಟಿಕ್‌ಟಾಕ್ ಮಾಡಿದ ಹೈದರಾಬಾದ್ ಬ್ಯಾಡ್ಮಿಂಟನ್ ದಂಪತಿ!

    ‘ನಾನು ಟೀಂ ಇಂಡಿಯಾ ಪರ ಆಡುವಾಗ ಒಂದೆರಡು ಭಾರಿ ಧೋನಿ ತಾಳ್ಮೆ ಕಳೆದುಕೊಂಡಿರುವುದನ್ನು ಕಂಡಿದ್ದೇನೆ’ ಎಂದು 58 ಟೆಸ್ಟ್, 147 ಏಕದಿನ ಪಂದ್ಯಗಳನ್ನಾಡಿರುವ 38 ವರ್ಷದ ಗಂಭೀರ್ ಹೇಳಿದ್ದಾರೆ. ಜನರು ಧೋನಿ ಸಿಟ್ಟಾಗಿರುವುದನ್ನು ನೋಡಿಲ್ಲ ಎನ್ನುತ್ತಾರೆ. ನಾನಂತು ಒಂದೆರಡು ಬಾರಿ ಧೋನಿ ಸಿಟ್ಟಾಗಿದ್ದನ್ನು ಕಂಡಿದ್ದೇನೆ. 2007ರ ವಿಶ್ವಕಪ್ ಹಾಗೂ ಇತರ ವಿಶ್ವಕಪ್ ಟೂರ್ನಿಗಳಲ್ಲಿ ಉತ್ತಮ ನಿರ್ವಹಣೆ ತೋರದ ವೇಳೆ ಧೋನಿ ಸಿಟ್ಟಾಗಿದ್ದರು ಎಂದು ಸ್ಟಾರ್ ಸ್ಪೋರ್ಟ್ಸ್ ಷೋವೊಂದರಲ್ಲಿ ಗಂಭೀರ್ ಹೇಳಿದ್ದಾರೆ.

    ‘ಧೋನಿ ಕೂಡ ಮನುಷ್ಯರೇ, ಕೆಲವೊಂದು ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಕ್ಯಾಚ್ ಬಿಟ್ಟರೆ, ಫೀಲ್ಡಿಂಗ್‌ನಲ್ಲಿ ಎಡವಿದರೆ ಧೋನಿ ಖಂಡಿತ ಕೋಪಗೊಳ್ಳುತ್ತಾರೆ’ ಎಂದು ಗಂಭೀರ್ ಹೇಳಿದ್ದಾರೆ. ‘2006-07ರ ವೇಳೆ ಒಮ್ಮೆ ಸಹ ಆಟಗಾರರು ಅಭ್ಯಾಸಕ್ಕೆ ಲೇಟಾಗಿ ಆಗಮಿಸಿದಾದ ದೋನಿ ಸಿಟ್ಟಾಗಿದ್ದನ್ನು ಕಂಡಿದ್ದೇನೆ’ ಎಂದು 35 ವರ್ಷದ ರ್ಇಾನ್ ಪಠಾಣ್ ಹೇಳಿದ್ದಾರೆ. ಅಭ್ಯಾಸದ ಬಳಿಕ ಎರಡು ತಂಡ ಮಾಡಿಕೊಂಡು ಪಂದ್ಯವಾಡುತ್ತಿದ್ದೇವು, ನಾನು ಧೋನಿ ಬ್ಯಾಟಿಂಗ್ ಮಾಡುತ್ತಿದ್ದೇವು, ಈ ವೇಳೆ ಧೋನಿಯನ್ನು ಔಟ್ ಎಂದು ಹೇಳಿದಾಗ ಸಿಟ್ಟಾಗಿ ಡ್ರೆಸ್ಸಿಂಗ್ ರೂಂಗೆ ತೆರಳಿ ತಡವಾಗಿ ಮೈದಾನಕ್ಕೆ ವಾಪಸಾಗಿದ್ದನ್ನು ನೋಡಿದ್ದೇನೆ ಎಂದು ಪಠಾಣ್ ಸ್ಮರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts