More

    ‘ಇಂಡಿಯನ್’ ಪ್ರೀಮಿಯರ್ ಲೀಗ್‌ಗೆ ಚೆನ್ನೈಸೂಪರ್ ಕಿಂಗ್ಸ್ ವಿರೋಧ!

    ನವದೆಹಲಿ: ಭಾರತೀಯರ ಹೆಮ್ಮೆಯ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್). ಹೆಸರಿನಲ್ಲಿ ಇಂಡಿಯನ್ ಇದ್ದರೂ ಇದು ಭಾರತೀಯರಿಗಷ್ಟೇ ಸೀಮಿತವಾಗಿರುವ ಟೂರ್ನಿಯಲ್ಲ. ಹೆಚ್ಚಿನ ತಂಡಗಳಿಗೆ ವಿದೇಶೀಯರೇ ಕೋಚ್‌ಗಳು. ಇನ್ನು ಪಂದ್ಯಗಳಲ್ಲಿ ಹೆಚ್ಚಾಗಿ ಮಿಂಚುವವರು, ನಿರ್ಣಾಯಕ ಪಾತ್ರ ವಹಿಸುವವರೂ ವಿದೇಶಿ ಆಟಗಾರರೇ. ಆದರೆ ಈಗ ಕರೊನಾ ಭೀತಿಯಿಂದಾಗಿ ಮುಂದೂಡಲ್ಪಟ್ಟಿರುವ ಐಪಿಎಲ್‌ಯನ್ನು ಮುಂದಿನ ದಿನಗಳಲ್ಲಿ ಆಯೋಜಿಸುವುದು ದೊಡ್ಡ ಸವಾಲು. ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದಾಗಿ ಕೇವಲ ಭಾರತೀಯ ಆಟಗಾರರನ್ನು ಒಳಗೊಂಡ ಐಪಿಎಲ್ ಟೂರ್ನಿ ನಡೆಸುವ ಚಿಂತನೆ ನಡೆದಿದೆ. ಆದರೆ ಐಪಿಎಲ್ ಇತಿಹಾಸದ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

    ‘ಕೇವಲ ಭಾರತೀಯ ಕ್ರಿಕೆಟಿಗರನ್ನು ಒಳಗೊಂಡ ಐಪಿಎಲ್ ಟೂರ್ನಿ ಬಗ್ಗೆ ಸಿಎಸ್‌ಕೆ ಆಸಕ್ತಿ ಹೊಂದಿಲ್ಲ. ಇದು ಇನ್ನೊಂದು ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ (ದೇಶೀಯ ಟಿ20 ಟೂರ್ನಿ) ಆಡಿದಂತಾಗುತ್ತದೆ. ಆದರೆ ಬಿಸಿಸಿಐ ಜತೆ ಈ ಬಗ್ಗೆ ಇನ್ನೂ ಚರ್ಚಿಸಿಲ್ಲ’ ಎಂದು ಚೆನ್ನೈ ಸೂಪರ್ ಕಿಂಗ್ಸ್ ್ರಾಂಚೈಸಿ ಮೂಲಗಳು ಮಂಗಳವಾರ ತಿಳಿಸಿವೆ. ಈ ಮುನ್ನ ರಾಜಸ್ಥಾನ ರಾಯಲ್ಸ್ ್ರಾಂಚೈಸಿ, ಕೇವಲ ಭಾರತೀಯ ಕ್ರಿಕೆಟಿಗರನ್ನು ಒಳಗೊಂಡ ಐಪಿಎಲ್‌ನಲ್ಲಿ ಆಡಲು ಸಿದ್ಧ ಎಂದಿತ್ತು.

    ಇದನ್ನೂಓದಿ: ಧೋನಿ ತಾಳ್ಮೆ ಕಳೆದುಕೊಂಡಿದ್ದನ್ನು ನೋಡಿದ್ದೇವೆ!

    ಮಾರ್ಚ್ 29ರಂದು ಆರಂಭಗೊಳ್ಳಬೇಕಾಗಿದ್ದ ಐಪಿಎಲ್ ಟೂರ್ನಿಯನ್ನು ಮೊದಲಿಗೆ ಏಪ್ರಿಲ್ 15ರವರೆಗೆ ಮುಂದೂಡಲಾಗಿತ್ತು. ಬಳಿಕ ಲಾಕ್‌ಡೌನ್ ವಿಸ್ತರಣೆಯ ಬೆನ್ನಲ್ಲೇ ಅನಿರ್ದಿಷ್ಟಾವಧಿಗೆ ಟೂರ್ನಿ ಮುಂದೂಡಲ್ಪಟ್ಟಿದೆ. ಈ ವರ್ಷ ಏಷ್ಯಾಕಪ್, ಟಿ20 ವಿಶ್ವಕಪ್‌ಗಳು ನಡೆಯದಿದ್ದರೆ, ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಆಸಕ್ತಿ ಹೊಂದಿದೆ.

    ಭಾರತದಲ್ಲಿ ಕರೊನಾ ಹಾವಳಿ ಕಡಿಮೆಯಾಗದಿದ್ದರೆ ಟೂರ್ನಿಯಲ್ಲಿ ವಿದೇಶದಲ್ಲಿ ಸಂಘಟಿಸುವ ಆಯ್ಕೆಗಳೂ ಬಂದಿವೆ. ಈಗಾಗಲೆ ಶ್ರೀಲಂಕಾ ಮತ್ತು ಯುಎಇ, ಐಪಿಎಲ್ ಆತಿಥ್ಯಕ್ಕೆ ಆಸಕ್ತಿ ವ್ಯಕ್ತಪಡಿಸಿವೆ.

    ಈ ವರ್ಷವೇ ಪೂರ್ಣ ಪ್ರಮಾಣದ ಐಪಿಎಲ್ ಟೂರ್ನಿಯನ್ನು ಸಂಘಟಿಸಬೇಕು ಎಂಬುದು ಸಿಎಸ್‌ಕೆ ್ರಾಂಚೈಸಿಯ ನಿಲುವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕರೂ ಆಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಐಪಿಎಲ್ ಟೂರ್ನಿಯ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದರು. ಆದರೆ, ಟೂರ್ನಿ ಮುಂದೂಡಿಕೆಯಿಂದಾಗಿ 38 ವರ್ಷದ ಧೋನಿ ಭವಿಷ್ಯವೂ ಅತಂತ್ರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts