More

    ಭಾರತದ ಗೆಲುವಿನೊಂದಿಗೆ ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಅಹಮದಾಬಾದ್: ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡೇ ದಿನಗಳಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಮಣಿಸಿ ಬೀಗಿತು. ಈ ವೇಳೆ ಟೀಮ್ ಇಂಡಿಯಾ ನಾಯಕ ವಿಶೇಷ ದಾಖಲೆಯೊಂದನ್ನು ಬರೆದರು. ವಿರಾಟ್ ಕೊಹ್ಲಿ ಈಗ ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ಜಯಿಸಿದ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.

    ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ತವರಿನಲ್ಲಿ ಆಡಿದ 29 ಟೆಸ್ಟ್‌ಗಳಲ್ಲಿ 22ನೇ ಗೆಲುವು ಕಂಡಿತು. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತವರಿನಲ್ಲಿ ಆಡಿದ 30 ಟೆಸ್ಟ್‌ಗಳಲ್ಲಿ 21 ಗೆಲುವು ಕಂಡಿದ್ದು ಹಿಂದಿನ ದಾಖಲೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (30) ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ಗೆದ್ದ ನಾಯಕ ಎನಿಸಿದ್ದಾರೆ.

    ದಿನದಾಟದಲ್ಲಿ 17 ವಿಕೆಟ್ ಪತನ
    ಅಹಮದಾಬಾದ್ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಉಭಯ ತಂಡಗಳಿಂದ 17 ವಿಕೆಟ್‌ಗಳು ಪತನ ಕಂಡವು. ಎಲ್ಲ ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿದ್ದು ವಿಶೇಷ. ಮೊದಲ ದಿನ 13 ವಿಕೆಟ್ ಉರುಳಿದ್ದವು. ಆರ್ಚರ್, ಇಶಾಂತ್ ತಲಾ 1 ವಿಕೆಟ್ ಪಡೆದ ವೇಗಿಗಳು.

    ಇಂಗ್ಲೆಂಡ್ ತಂಡ 2ನೇ ಇನಿಂಗ್ಸ್‌ನಲ್ಲಿ ಕೇವಲ 81 ರನ್‌ಗೆ ಆಲೌಟ್ ಆಯಿತು. ಇದು ಭಾರತದ ವಿರುದ್ಧ ದಾಖಲಿಸಿದ ಕನಿಷ್ಠ ಮೊತ್ತ ಇದಾಗಿದೆ. 1971ರಲ್ಲಿ ಓವಲ್‌ನಲ್ಲಿ 101 ರನ್ ಗಳಿಸಿದ್ದು ಇದುವರೆಗಿನ ಕಡಿಮೆ ಮೊತ್ತವಾಗಿತ್ತು. ಅಹರ್ನಿಶಿ ಟೆಸ್ಟ್ ಇತಿಹಾಸದಲ್ಲಿ ಸ್ಪಿನ್ನರ್‌ಗಳು (28) ಅತಿಹೆಚ್ಚು ವಿಕೆಟ್ ಕಬಳಿಸಿದ ಪಂದ್ಯ ಇದಾಗಿದೆ. 2017-18ರಲ್ಲಿ ದುಬೈನಲ್ಲಿ ನಡೆದ ಪಾಕ್ ಹಾಗೂ ಲಂಕಾ ನಡುವಿನ ಪಂದ್ಯದಲ್ಲಿ 24 ವಿಕೆಟ್‌ಗಳು ಬಿದ್ದಿದ್ದು ಹಿಂದಿನ ದಾಖಲೆ.

    ಹಲವು ದಾಖಲೆ ಬರೆದ ಅಕ್ಷರ್
    ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 3ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಹರ್ಭಜನ್ ಸಿಂಗ್ ಸತತ 4 ಬಾರಿ ಈ ಸಾಧನೆ ಮಾಡಿದ್ದರೆ, ಶಿವರಾಮಕೃಷ್ಣನ್, ಜಾವಗಲ್ ಶ್ರೀನಾಥ್ ಕೂಡ ಸತತ 3ನೇ ಬಾರಿಗೆ ಐದು ವಿಕೆಟ್ ಗೊಂಚಲು ಕಬಳಿಸಿದ್ದರು. ಅಕ್ಷರ್ ಪಟೇಲ್ (70ಕ್ಕೆ 11) ಅಹರ್ನಿಶಿ ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು ಪ್ಯಾಟ್ ಕಮ್ಮಿನ್ಸ್ (62ಕ್ಕೆ 10) ಬ್ರಿಸ್ಬೇನ್‌ನಲ್ಲಿ 2019-19ರಲ್ಲಿ ಶ್ರೀಲಂಕಾ ಎದುರು ಹಾಗೂ 2016-17ರಲ್ಲಿ ದೇವೇಂದ್ರ ಬಿಶೂ (174ಕ್ಕೆ 10) ದುಬೈನಲ್ಲಿ ಪಾಕ್ ಎದುರು 10 ವಿಕೆಟ್ ಕಬಳಿಸಿದ್ದರು.

    ಟೆಸ್ಟ್ ಇತಿಹಾಸದಲ್ಲಿ ನಡೆದ ಎಲ್ಲ 16 ಅಹರ್ನಿಶಿ ಪಂದ್ಯದಲ್ಲೂ ಲಿತಾಂಶ ಬಂದಿತು. ಪಿಂಕ್ ಟೆಸ್ಟ್ ಇತಿಹಾಸದಲ್ಲಿ ಇದುವರೆಗೆ ಒಂದು ಪಂದ್ಯವೂ ಡ್ರಾಗೊಂಡಿಲ್ಲ. ಭಾರತ ಇದುವರೆಗೆ ಆಡಿರುವ 3 ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 2ನೇ ಜಯ ದಾಖಲಿಸಿತು. ಹಿಂದಿನ 2 ಟೆಸ್ಟ್ ಮೂರನೇ ದಿನದಾಟಕ್ಕೆ ಮುಕ್ತಾಯ ಕಂಡಿದ್ದವು. ಎರಡೇ ದಿನಗಳಲ್ಲಿ ಮುಗಿದ 22ನೇ ಟೆಸ್ಟ್ ಹಾಗೂ 2ನೇ ಅಹರ್ನಿಶಿ ಟೆಸ್ಟ್ ಇದಾಗಿದೆ. ಭಾರತ ಎರಡೇ ದಿನಗಳಲ್ಲಿ ಗೆದ್ದ 2ನೇ ಟೆಸ್ಟ್. 2018ರಲ್ಲಿ ಅ್ಘಾನಿಸ್ತಾನ ಎದುರು ಬೆಂಗಳೂರಿನಲ್ಲಿ ಈ ಸಾಧನೆ ಮಾಡಿತ್ತು.

    VIDEO | 194 ಪಂದ್ಯಗಳಲ್ಲಿ ಮೊದಲ ಸಿಕ್ಸರ್ ಸಿಡಿಸಿದ ಇಶಾಂತ್ ಶರ್ಮ!

    ಮೋದಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಮೋಡಿ, ಎರಡನೇ ದಿನಕ್ಕೆ ಆಂಗ್ಲರ ಬಗ್ಗುಬಡಿದ ವಿರಾಟ್ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts