More

    ಮಕ್ಕಳ ತಂಟೆಗೆ ಬಂದ್ರೆ ಹುಷಾರ್ … ಕೋಡ್ಲು ಎಚ್ಚರಿಕೆ

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕ್ಲಾಸಿಕ್​ ಚಿತ್ರ ಎಂದು ಪರಿಗಣಿಸಲಾಗಿರುವ ‘ಉದ್ಭವ’ ಚಿತ್ರದ ಮುಂದಿನ ಭಾಗವಾದ ‘ಮತ್ತೆ ಉದ್ಭವ’ ಚಿತ್ರವನ್ನು ನಿರ್ದೇಶಿಸಿ ಕಳೆದ ವರ್ಷವಷ್ಟೇ ಬಿಡುಗಡೆ ಮಾಡಿದ್ದ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ, ಇದೀಗ ಮಕ್ಕಳ ಚಿತ್ರವೊಂದರ ಮೂಲಕ ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರಕ್ಕೆ, ‘ಮಕ್ಕಳ ತಂಟೆಗೆ ಬಂದ್ರೆ ಹುಷಾರ್​’ ಎಂಬ ಹೆಸರನ್ನೂ ಇಟ್ಟಿದ್ದಾರೆ.

    ಇದನ್ನೂ ಓದಿ: ‘ಕೋವಿಡ್ ಕಿಡ್’​ಗೆ ಜನ್ಮಕೊಟ್ಟ ಅನುಷ್ಕಾ; ತಂದೆಯಾದ್ರು ವಿರಾಟ್​ ಕೊಹ್ಲಿ!

    ಮಕ್ಕಳ ನಿತ್ಯ ಚಟುವಟಿಕೆ, ಪೋಷಕರ ಜೀವನ ಶೈಲಿ, ಮೊಬೈಲ್ ಗೀಳು ಹಾಗೂ ಶ್ರೀಮಂತ, ಮಧ್ಯಮ ಹಾಗೂ ಬಡವರ ಮನೆ ಮಕ್ಕಳು ಕೊರೋನ ಬರುವ ಮೊದಲು ಹಾಗೂ ನಂತರ ಹೇಗಿದ್ದಾರೆ? ಎಂಬ ವಿಷಯಗಳನ್ನಿಟ್ಟುಕೊಂಡು ಈ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ ಕೋಡ್ಲು.

    ಚಿತ್ರೀಕರಣ ಆರಂಭವಾಗಿ ಕೇವಲ ನಲವತ್ತು ದಿನಗಳಲ್ಲಿ ಚಿತ್ರದ ಸೆನ್ಸಾರ್ ಸಹ ಪೂರ್ಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಅದಕ್ಕೂ ಮೊದಲು, ಸಂಕ್ರಾಂತಿ ವೇಳೆಗೆ ಟ್ರೇಲರ್ ಬಿಡುಗಡೆಯಾಗಲಿದೆ.

    ಭುವನ್ ಫಿಲಂಸ್ ಲಾಂಛನದಲ್ಲಿ ನಾರಾಯಣ್ ಹಾಗೂ ಕೋಡ್ಲು ರಾಮಕೃಷ್ಣ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇನ್ನು, ಕ್ರಿಶ್ ಜೋಶಿ ಅವರ ಕಥೆಗೆ ಕೋಡ್ಲು ರಾಮಕೃಷ್ಣ ಹಾಗೂ ರಾಮಮೂರ್ತಿ ಚಿತ್ರಕಥೆ ರಚಿಸಿದ್ದಾರೆ. ಕ್ರಿಶ್ ಜೋಶಿ ಅವರೊಡಗೂಡಿ ಕೋಡ್ಲು ರಾಮಕೃಷ್ಣ ಸಂಭಾಷಣೆ ಬರೆದಿದ್ದಾರೆ.

    ಇದನ್ನೂ ಓದಿ: ‘ರಾಧೆ ಶ್ಯಾಮ್​’ಗಾಗಿ ಇಟಲಿಯಿಂದ ಬಂದ 350 ಡ್ಯಾನ್ಸರ್ಸ್​!

    ‘ಮಕ್ಕಳ ತಂಟೆಗೆ ಬಂದ್ರೆ ಹುಷಾರ್​’ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಸಾದ್​, ಶಿವಧ್ವಜ್, ಪ್ರಥಮ ಪ್ರಕಾಶ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ಕುಮಾರಿ ಐಶ್ವರ್ಯ, ಶ್ರೀಧರ್ ನಾಯಕ್, ಸ್ನೇಹ ಭಟ್, ಪ್ರಕಾಶ್, ಭವಾನಿ ಪ್ರಕಾಶ್, ಬೇಬಿ ಗಗನ, ಬೇಬಿ ಯಶಿಕಾ, ಬೇಬಿಶ್ರೀ, ಬೇಬಿ ಪ್ರತಿಷ್ಠ ದೇಶಪಾಂಡೆ, ಯುಕ್ತ ಹೆಗಡೆ, ಮಾಸ್ಟರ್ ವಿಷ್ಣು ಸಂಜಯ್, ಮಾಸ್ಟರ್ ತರುಣ್, ಮಾಸ್ಟರ್ ಸರ್ವಜ್ಞ, ಮಾಸ್ಟರ್ ಯುವರಾಜ್ ಮುಂತಾದವರು ನಟಿಸಿದ್ದು, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಿದ್ದಾರೆ.

    ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್​; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts