More

    ಹೆಣ್ಣುಮಗುವಿಗೆ ಜನ್ಮಕೊಟ್ಟ ಅನುಷ್ಕಾ; ತಂದೆಯಾದ್ರು ವಿರಾಟ್​ ಕೊಹ್ಲಿ!

    ಮುಂಬೈ: ಅನುಷ್ಕಾ ಗರ್ಭಿಣಿ ಆದಂದಿನಿಂದ ಗಮನ ಸೆಳೆಯುತ್ತಲೇ ಇದ್ದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ, ಇದೀಗ ಟಾಕ್​ ಆಫ್​ ದಿ ನೇಷನ್​ ಆಗಿದ್ದಾರೆಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಇವತ್ತಷ್ಟೇ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ವಿರಾಟ್​ ಕೊಹ್ಲಿ ತಂದೆಯಾಗಿದ್ದಾರೆ. ಹೀಗಾಗಿ ಕ್ರಿಕೆಟ್​ ಹಾಗೂ ಸಿನಿಮಾರಂಗದ ಅಭಿಮಾನಿಗಳು ಹಲವರು ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.

    ಪ್ರಸವವೇದನೆ ಕಾಣಿಸಿಕೊಂಡು ಬೆಳಗ್ಗೆಯಷ್ಟೇ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅನುಷ್ಕಾ ಗರ್ಭಿಣಿ ಆಗಿರುವ ವಿಚಾರವನ್ನು 2020ರ ಆಗಸ್ಟ್​​ನಲ್ಲಿ ಘೋಷಿಸಿದ್ದರು.

    ಅನುಷ್ಕಾ-ವಿರಾಟ್​ ದಂಪತಿಯ ಮಗುವನ್ನು ಕರೊನಿಯಲ್​ ಎಂದು ಕರೆಯಲಾಗುತ್ತದೆ. ಏಕೆಂದರೆ ಕೋವಿಡ್​-10 ಕ್ವಾರಂಟೈನ್ ಅವಧಿಯಲ್ಲಿ ಅವರ ಗರ್ಭಿಣಿಯಾಗಿದ್ದರು. ಅಲ್ಲದೆ ಈ ಕರೊನಾ ಅವಧಿಯಲ್ಲಿ ಗರ್ಭವತಿಯಾಗಿರುವವರು ಜನ್ಮ ನೀಡಿರುವ ಮಕ್ಕಳನ್ನು ಕೋವಿಡ್​ ಕಿಡ್ಸ್ ಎಂದೂ ಕರೆಯಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts