More

    ಕಾಲಜ್ಞಾನಿ ಬಸವಣ್ಣನವರ ವಚನಗಳು ಸಾರ್ವಕಾಲಿಕ ಶ್ರೇಷ್ಠ

    ಕೊಡೇಕಲ್: ಶತಶತಮಾನಗಳಿಂದ ಕಾಲಜ್ಞಾನ, ನೀತಿಜ್ಞಾನ, ಬೋಧಜ್ಞಾನಗಳ ಮೂಲಕ ಹಳೆಯ ಸಂಪ್ರದಾಯ, ಆಚರಣೆಗಳನ್ನು ಮುಂದುವರೆಸಿಕೊAಡು ಹೋಗುತ್ತಿರುವ ಕೊಡೇಕಲ್ ಬಸವಣ್ಣನವರ ಕಾಲಜ್ಞಾನದ ವಚನಗಳು ಸಾರ್ವಕಾಲಿಕ ಶ್ರೇಷ್ಠ ಎಂದು ಜಾಲಹಳ್ಳಿಯ ಶ್ರೀ ಜಯಶಾಂತಲಿಗೇಶ್ವರ ಶಿವಾಚಾರ್ಯರು ನುಡಿದರು.

    ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಬಯಲೋಳು ಬಯಲಾದ ಶ್ರೀ ಬಸವರಾಜಯ್ಯ ಅಪ್ಪನವರ ೬೯ನೇ ಪುಣ್ಯಾರಾಧನೆ ಮತ್ತು ಪ್ರವಚನದ ಮಹಾಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕೊಡೇಕಲ್ ಭಾವೈಕ್ಯತೆಯ ಪುಣ್ಯಭೂಮಿಯಾಗಿದೆ. ಇಲ್ಲಿನ ಜನರು ಸಂಸ್ಕಾರವಂತರು, ಶ್ರೀ ವೃಷಭೇಂದ್ರ ಅಪ್ಪನವರಂತಹ ಪೂಜ್ಯರನ್ನು ಪಡೆದುಕೊಂಡಿರುವ ನೀವು ಭಾಗ್ಯವಂತರು. ಅಧ್ಯಾತ್ಮ ಪ್ರವಚನಗಳನ್ನು ಆಯೋಜಿಸಿ ಜನರಲ್ಲಿ ಆಧ್ಯಾತ್ಮಿಕತೆ ತುಂಬುತ್ತಿರುವ ಪೂಜ್ಯರ ಕಾರ‍್ಯ ಶ್ಲಾಘನೀಯ ಎಂದರು.

    ಮಾಜಿ ಸಚಿವ ನರಸಿಂಹನಾಯಕ ಮಾತನಾಡಿ, ನಮ್ಮೂರಿನ ಮಹಲಿನ ಮಠದ ಪರಂಪರೆ ಶ್ರೇಷ್ಠವಾದ ಪರಂಪರೆಯಾಗಿದೆ. ಇದು ಬೆಂಕಿಯಂತಹ ಸ್ಥಳ. ಇಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

    ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪನವರ ಸಾನ್ನಿದ್ಯ ವಹಿಸಿದ್ದರು. ದೇವಾಪುರದ ಜಡಿಶಾಂತಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರು, ಶ್ರೀ ನೀಲಕಂಠಸ್ವಾಮಿ ವಿರಕ್ತಮಠ ನೇತೃತ್ವ ವಹಿಸಿದ್ದರು. ರಾಣಿ ರಂಗಮ್ಮ ಜಹಾಗೀರದಾರ ಮತ್ತು ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಅಧ್ಯಕ್ಷತೆ ವಹಿಸಿದ್ದರು, ಪ್ರಮುಖರಾದ ವೀರಸಂಗಪ್ಪ ಹಾವೇರಿ, ರಂಗನಾಥ ದೋರಿ, ಶಾಮಸುಂದರ ಜೋಶಿ, ಬಸನಗೌಡ ಅಳ್ಳಿಕೋಟಿ, ಕನಕು ಜಿರಾಳ, ಸೋಮಲಿಂಗಪ್ಪ ದೋರಿ, ಸಂಗಪ್ಪ ಶಿವಪುರ, ಬಸವರಾಜ ಹೊಸಪೂಜಾರಿ, ಬಸಣ್ಣ ಹಳೇಪೂಜಾರಿ, ಸಿ.ಬಿ.ಬಾಗೋಡಿ, ದೇವು ಗೋಪಾಳಿ, ಮಲ್ಲು ನವಲಗುಡ್ಡ, ಸಂಗಮೇಶ ಹೂಗಾರ, ಗವಿಸಂಗಯ್ಯ ಪಂಜಗಲ್, ಡಾ.ಬಿ.ಬಿ.ಬಿರಾದಾರ, ಕುಮಾರಸ್ವಾಮಿ ಗುಡ್ಡೊಡಗಿ, ದಾವಲಸಾಬ ಕಮತಗಿ, ಬಸವರಾಜ ಗೋನಾಟಲ್, ಹಣಮಯ್ಯ ಕೆಂಡದ, ಎಸ್.ಎನ್ ಅಡ್ಡಿ, ಸಂಗಮೇಶ ಅಡ್ಡಿ, ಬಸಪ್ಪ ಪಂಜಗಲ್, ಗೌಡಪ್ಪ ರಾಮನಗೌಡ್ರ, ಬಸವರಾಜ ಜಾಲಿಗಿಡದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

    ಕೋರಿಸಂಗಯ್ಯ ಗಡ್ಡದ ನಿರೂಪಣೆ ಮಾಡಿದರು. ಬಸವರಾಜ ಭದ್ರಗೋಳ ಸ್ವಾಗತಿಸಿದರು. ಬಸವರಾಜ ಕೆಂಡದ ವಂದಿಸಿದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

    ಶ್ರೀ ನಿಜಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಬಯಲೋಳು ಬಯಲಾಗಿರುವ ಶ್ರೀ ಬಸವರಾಜಯ್ಯ ಅಪ್ಪನವರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿದ ಬಳಿಕ ಪ್ರಸಾದ ನಡೆಯಿತು. ಖ್ಯಾತ ಸಂಗೀತ ಕಲಾವಿದರಿಂದ ಶನಿವಾರ ಅಹೋರಾತ್ರಿ ಸಂಗೀತ ಸೇವೆ ಜರುಗಿತು.

    ಪ್ರವಚನ ಮಂಗಲ: ಕಳೆದ ೧೧ ದಿನಗಳಿಂದ ನಡೆದ ಅಧ್ಯಾತ್ಮ ಜೀವನ ದರ್ಶನ ಪ್ರವಚನ ಮಂಗಲವನ್ನು ಪ್ರವಚನಕಾರ ಶ್ರೀ ಜಯಸಿದ್ಧೇಶ್ವರ ಶಿವಾಚಾರ್ಯರು ನೆರವೇರಿಸಿದರು. ನಾಗರಾಜ ಹೂಗಾರ ಮತ್ತು ಸುರೇಶ ಹೂಗಾರ ಸಂಗೀತ ಸೇವೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts