More

    ವಿನಯ ಇರದ ವಿದ್ಯೆ ಪ್ರಯೋಜನವಿಲ್ಲ

    ಕೂಡ್ಲಿಗಿ: ಜ್ಞಾನ ನಿಂತ ನೀರಾಗದೆ, ಚಲನಶೀಲವಾಗಬೇಕು ಎಂದು ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಹಿರೇಮಠ ಕಲ್ಯಾಣ ಮಂಟಪದಲ್ಲಿ ಗುರುವಾರ ಹಿರೇಮಠ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇದನ್ನೂ ಓದಿ: ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸಿ

    ಜ್ಞಾನಕ್ಕಿಂತಲೂ ಮಿಗಿಲಾದ ಯಾವುದೇ ವಸ್ತುಗಳು ಜಗತ್ತಿನಲ್ಲಿಲ್ಲ. ವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತರಾಗಿದ್ದು, ವಿನಯವಂತಿಕೆ ಮಾಯವಾಗಿದೆ. ವಿನಯ ಇರದ ವಿದ್ಯೆ ಪ್ರಯೋಜನಕ್ಕೆ ಬಾರದು ಎಂದರು. ಜೆಸಿಐ ಕೂಡ್ಲಿಗಿ ಗೊಲ್ಡನ್ ಜೋನಲ್ 24ರ ರಾಷ್ಟ್ರೀಯ ತರಬೇತುದಾರ ಡಿ.ಪ್ರಕಾಶ್ ಮಾತನಾಡಿ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ನಿರಂತರ ಅಧ್ಯಯನದಿಂದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಪಡೆಯಬಹುದು.

    ಗುರಿ-ಪರಿಶ್ರಮದಿಂದ ಕಠಿಣ ಸವಾಲನ್ನು ಜಯಿಸಬಹುದು ಎಂದರು. ಗುಡೇಕೋಟೆ ವಸತಿ ನಿಲಯದ ಮೇಲ್ವಿಚಾರಕ ಹುಲಗಪ್ಪ, ಚಂದ್ರಶೇಖರಪುರದ ಗ್ರಾಪಂ ಮಾಜಿ ಸದಸ್ಯ ಪ್ರಸನ್ನ, ಪ್ರಾಚಾರ್ಯ ಅರವಿಂದ ವಿ. ಕುಲಕರ್ಣಿ, ಕಜಾಪ ತಾಲೂಕಾಧ್ಯಕ್ಷ ಕೆ.ಯಂ.ವೀರೇಶ್, ಉಪನ್ಯಾಸಕರಾದ ಟಿ.ದೇವಪ್ಪ, ಸಿದ್ದರಾಮ ಹಿರೇಮಠ, ಕೆ.ಎಚ್.ಎಂ.ವೀರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts