More

    ಕಳೆದ 5 ತಿಂಗಳಲ್ಲಿ ಅಬಕಾರಿ ಇಲಾಖೆ ಆದಾಯ ಎಷ್ಟು ಗೊತ್ತಾ?

    ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತರುವ ಅಬಕಾರಿ ಇಲಾಖೆಗೆ ಕಳೆದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 10,197 ಕೋಟಿ ರೂಪಾಯಿಗಳ ಆದಾಯ ಬಂದಿದೆ. 261 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 87 ಲಕ್ಷ ಬಾಕ್ಸ್ ಬಿಯರ್ ಸೇಲಾಗಿದ್ದು, ಶೇ.31 ರಷ್ಟು ರಾಜಸ್ವ ಹೆಚ್ಚಳವಾಗಿದೆ.

    ಕಳೆದ ವರ್ಷದ ಇದೇ ಅವಧಿಯಲ್ಲಿ 7,755 ಕೋಟಿ ರೂ. ಆದಾಯ ಬಂದಿತ್ತು. ಏಪ್ರಿಲ್‌ನಲ್ಲಿ 2,202 ಕೋಟಿ ರೂ., ಮೇನಲ್ಲಿ 1,474 ಕೋಟಿ ರೂ., ಜೂನ್‌ನಲ್ಲಿ 2,230 ಕೋಟಿ ರೂ., ಜುಲೈನಲ್ಲಿ 2,223 ಕೋಟಿ ರೂ. ಹಾಗೂ ಆಗಸ್ಟ್‌ನಲ್ಲಿ 2,067 ಕೋಟಿ ರೂ. ಮದ್ಯ ಮಾರಾಟದಿಂದ ಆದಾಯ ಹರಿದುಬಂದಿದೆ. ಕರೊನಾದಿಂದ ಕುಸಿತ ಕಂಡಿದ್ದ ಬಿಯರ್ ಆದಾಯ ಆಗಸ್ಟ್‌ನಲ್ಲಿ ತುಸು ಏರಿಕೆಯಾಗಿದೆ.

    2021-22ನೇ ಸಾಲಿನಲ್ಲಿ ಸರ್ಕಾರ, ಅಬಕಾರಿ ಇಲಾಖೆಗೆ ಒಟ್ಟು 24,580 ಕೋಟಿ ರೂ.ಗಳ ರಾಜಸ್ವ ಸಂಗ್ರಹದ ಗುರಿ ನಿಗದಿಪಡಿಸಿದೆ.

    ಮಹಿಳೆಯರೇ, ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ

    ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು: ಈಶ್ವರಪ್ಪ ವಾಗ್ದಾಳಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts