More

    ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು: ಈಶ್ವರಪ್ಪ ವಾಗ್ದಾಳಿ

    ಬೆಂಗಳೂರು: ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಮೋದಿ ಮೈಲೇಜ್ ಕಡಿಮೆಯಾಗಿದೆ ಅಂತ ಸಿದ್ದರಾಮಯ್ಯ ಹೇಳಿರುವುದನ್ನು ಪ್ರಸ್ತಾಪಿಸಿದ ಈಶ್ವರಪ್ಪ, ಕರ್ನಾಟಕದಲ್ಲಿ ಮೋದಿ ಹೆಸರು ಬರಲು ಎರಡು ಕಾರಣ. ಒಂದು ಮೋದಿ, ಮತ್ತೊಂದು ಬಿಜೆಪಿ ಪಕ್ಷ ಎಂದರು. ಯಾವುದಕ್ಕೂ ಚುನಾವಣೆಯೇ ಅಳತೆಗೋಲು. ಸುಳ್ಳು ಯಾರು ಹೇಳ್ತಿದ್ದಾರೆ ಅನ್ನೋದು ಗೊತ್ತಾಗ್ತಿದೆ. ಲೋಕಸಭಾ ಚುನಾವಣೆಯಲ್ಲಿ ಎರಡು ಸೀಟ್ ಬರಲ್ಲ ಅಂತ ಹೇಳಿದ್ರು. ಮುಂದೆ ನಾನೇ ಸಿಎಂ ಅಂತ ಹೇಳಿದ್ರು. ಎರಡು ಕ್ಷೇತ್ರದಲ್ಲಿ ಚುನಾವಣೆ ನಿಂತು ಒಂದು ಕಡೆ ಸೋತ್ರು. ಯಾರು ಸುಳ್ಳು ಹೇಳಿದ್ದು ಎಂದು ಕೇಳಿದರು.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ನಮ್ಮ ರಾಜ್ಯಾಧ್ಯಕ್ಷರು ಪ್ರತೀ ಮಂತ್ರಿಗಳು ತಿಂಗಳಲ್ಲಿ ಎರಡು ಬಾರಿ ಬರಲು ಸೂಚನೆ ನೀಡಿರುವ ಪ್ರಯುಕ್ತ ಇವತ್ತು ಮೊದಲ ಭೇಟಿ ಬಂದಿದ್ದೇನೆ ಎಂದರು. ಕಾರ್ಯಕರ್ತರ ಸಮಸ್ಯೆ, ಜನರ ಅಹವಾಲು ಸ್ವೀಕರಿಸಲು ಬಂದಿದ್ದೇನೆ ಎಂದರು. ಬೆಳಗಾವಿ ಉಪಚುನಾವಣೆ ಯಾರು ಗೆದ್ರು? ಗ್ರಾಮ ಪಂಚಾಯತಿ ಚುನಾವಣೆ ಅತಿ ಹೆಚ್ಚು ಸ್ಥಾನ ಗೆದ್ದಿದ್ದು ಬಿಜೆಪಿ. ದೇಶದಲ್ಲಿ, ಎಲ್ಲ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿದೆ. ಕಾಂಗ್ರೆಸ್ ಎಲ್ಲೆಡೆ ನೆಲ ಕಚ್ಚುತ್ತಿದೆ ಎಂದರು.

    ಇದನ್ನೂ ಓದಿ: ಕಾಶ್ಮೀರದ ವಿಚಾರವಾಗಿ ತಾಲಿಬಾನ್ ನಾಯಕ ಅನಸ್ ಹೇಳಿದ್ದೇನು…?

    ಗಣೇಶ ಹಬ್ಬ ಆಚರಣೆ: ಬಿಜೆಪಿ ರಾಜ್ಯದಲ್ಲಿದೆ, ರಾಜ್ಯದ ಜನರ ಆರೋಗ್ಯ ಮುಖ್ಯ. ನಿಯಮಾವಳಿ ಪ್ರಕಾರ ಗಣೇಶ ಹಬ್ಬವನ್ನು ಆಚರಿಸಲು ಯಾವುದೇ ತೊಂದರೆ ಇಲ್ಲ ಎಂದರು. ಶಿವಮೊಗ್ಗದಲ್ಲಿ ಲಕ್ಷಾಂತರ ಜನ ಮೆರವಣಿಗೆ ಮಾಡುತ್ತಿದ್ರು. ಆದ್ರೆ, ಈಗ ಮೆರವಣಿಗೆ ಬೇಡ ಅಂತ ಹಿಂದೂ ಮಹಾಸಭಾ ತೀರ್ಮಾನ ಮಾಡಿದೆ. ಹಬ್ಬ ಆಚರಣೆಗೆ ಅವಕಾಶ ಕೊಡ್ತೇವೆ. ಆದ್ರೆ ಯಾವ ರೀತಿ ಆಗಬೇಕು ಅಂತ ನಿರ್ಧಾರ ಮಾಡುತ್ತೇವೆ ಎಂದರು.

    ನೋ ವ್ಯಾಕ್ಸಿನ್, ನೋ ರೇಷನ್, ನೋ ಪೆನ್ಶನ್ ಅಂತ ಚಾಮರಾಜನಗರ ಜಿಲ್ಲಾಧಿಕಾರಿ ಹೇಳಿದ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮೋದಿ ಅವರೇ ಹೇಳಿದ್ದಾರೆ, ಉಚಿತವಾಗಿ ಎಲ್ಲವನ್ನೂ ಕೊಡ್ತೀವಿ ಅಂತ. ಇವರು ಯಾವ ರೀತಿ ಹೇಳ್ತಾರೆ ಅನ್ನೋದು ಗೊತ್ತಿಲ್ಲ ಎಂದರು.

    ಸಿದ್ದರಾಮಯ್ಯ ಚಿಕಿತ್ಸೆ ಪಡೆದು ಬಂದ ಬಳಿಕ ಬಿಜೆಪಿ ಟ್ವೀಟ್ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಷಡ್ಯಂತ್ರ ಮಾಡಿಕೊಂಡಿದ್ದಾರೆ. ಇರೋದೇ ಇಬ್ಬರು, ಮೂವರು. ಅವರೇ ಕಾಲೆಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಪಂಚ ಕೌರವರು ಅಂತ ಹೇಳಿದ್ದೇನೆ ಎಂದರು.

    ತಾಲಿಬಾನ್​​ಗೆ ಶುಭಾಶಯ ಕೋರಿದ ಅಲ್​ಖೈದಾ! ಕಾಶ್ಮೀರದ ಬಗ್ಗೆ ನಾಲಿಗೆ ಹರಿಬಿಟ್ಟ ಆತಂಕವಾದಿಗಳು!

    ತಾಲಿಬಾನ್​​ಗೆ ಶುಭಾಶಯ ಕೋರಿದ ಅಲ್​ಖೈದಾ! ಕಾಶ್ಮೀರದ ಬಗ್ಗೆ ನಾಲಿಗೆ ಹರಿಬಿಟ್ಟ ಆತಂಕವಾದಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts