More

    ಅಬಕಾರಿ ಅಕ್ರಮ ಚಟುವಟಿಕೆ ಕಂಡಲ್ಲಿ ದೂರು ನೀಡಿ

    ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರ ಜಿಲ್ಲೆ-4ರ ವ್ಯಾಪ್ತಿಗೆ ಒಳಪಡುವ ಅಬಕಾರಿ ವಲಯ ಪ್ರದೇಶಗಳಲ್ಲಿ ಎನ್‌ಡಿಪಿಎಸ್ ಪದಾರ್ಥಗಳು, ಅನಧಿಕೃತ, ನಕಲಿ, ಡಿಫೆನ್ಸ್ ಇತ್ಯಾದಿ ಮದ್ಯ ತಯಾರಿಕೆ, ದಾಸ್ತಾನು, ಮಾರಾಟ, ಸಾಗಣೆ ಅಥವಾ ಅಬಕಾರಿ ಸಂಬಂಧಿತ ಯಾವುದೇ ಪದಾರ್ಥಗಳು ಕಂಡುಬಂದಲ್ಲಿ ಸಾರ್ವಜನಿಕರು ಈ ಟೋಲ್ ಫ್ರೀ, ದೂರವಾಣಿ ಸಂಖ್ಯೆಗೆ 1800-425-1245/080-29915540 ಗೆ ದೂರು ನೀಡಬಹುದಾಗಿದೆ.

    ಅಬಕಾರಿ ಉಪ ಆಯುಕ್ತರ ಕಚೇರಿ, ಬೆಂಗಳೂರು ನಗರ ಜಿಲ್ಲೆ-4, ನೆಲಮಹಡಿ, ಅಬಕಾರಿ ಭವನ, ಕೆಎಸ್‌ಬಿಸಿಎಲ್ ಕಾಂಪ್ಲೆಕ್ಸ್, ಬ್ಯಾಟರಾಯನಪುರ ಪೊಲೀಸ್ ಠಾಣೆ ಎದುರು, ಮೈಸೂರು ರಸ್ತೆ, ಬೆಂಗಳೂರು-560026 ಈ ವಿಳಾಸದಲ್ಲೂ ಕಂಪ್ಲೆಂಟ್ ನೀಡಬಹುದಾಗಿದೆ. ಜತೆಗೆ ಶ್ರೀರಾಮಪುರ-7829119288, ರಾಜಾಜಿನಗರ- 9902751947, ಸಂಪಂಗಿರಾಮನಗರ-9449597225, ಜಯನಗರ-9449597221, ಅಶೋಕನಗರ- 7975902880, ಶಾಂತಿನಗರ-9449597226, ಉಪ ವಿಭಾಗ 7-8050603085, ಉಪ ವಿಭಾಗ 8 -9449219257 ದೂರವಾಣಿ ಸಂಖ್ಯೆಗೆ ನಾಗರಿಕರು ದೂರು ಸಲ್ಲಿಸಬಹುದು.

    ಈ ವಿಷಯದಲ್ಲಿ ಮಾಹಿತಿದಾರರ ಗೌಪ್ಯತೆ ಕಾಪಾಡಲಾಗುವುದು ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts