More

    ಮೂರನೇ ಏಕದಿನ ಪಂದ್ಯ: ಕೆ.ಎಲ್.ರಾಹುಲ್ ಶತಕದ ನೆರವಿನೊಂದಿಗೆ ಟೀಇಂಡಿಯಾ 7 ವಿಕೆಟ್​ಗೆ 296ರನ್

    ಮೌಂಟ್​ ಮೌಂಗನುಯಿ: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರನೇ ಏಕದಿನದ ಪಂದ್ಯದಲ್ಲಿ ಕೆ.ಎಲ್​.ರಾಹುಲ್ ಅವರ ಶತಕದ ನೆರವಿನೊಂದಿಗೆ ಆತಿಥೇಯ ತಂಡಕ್ಕೆ 297ರನ್​ಗಳ ಗೆಲುವಿನ ಗುರಿಯನ್ನು ನಿಗದಿ ಮಾಡಿದೆ.

    ಕ್ರಿಕೆಟ್ ವೃತ್ತಿ ಬದುಕಿನ ನಾಲ್ಕನೇ ಶತಕ ದಾಖಲಿಸಿದ ರಾಹುಲ್​ ಇನ್ನಿಂಗ್ಸ್​ನಲ್ಲಿ 113 ಬಾಲ್ ಎದುರಿಸಿ 112 ರನ್ ಸೇರಿಸಿದ್ದರು. ಇದರಲ್ಲಿ ಒಂಭತ್ತು ಫೋರ್​, ಎರಡು ಸಿಕ್ಸ್​ ಒಳಗೊಂಡಿವೆ. ಟೀಂ ಇಂಡಿಯಾ 13ನೇ ಓವರ್​ನಲ್ಲಿ ಮೂರು ವಿಕೆಟ್ ಕಳೆದುಕೊಂಡು 62 ರನ್​ ಗಳಿಸಿ ಸಂಕಷ್ಟದಲ್ಲಿ ಇದ್ದಾಗ ರಾಹುಲ್ ಕ್ರೀಸ್​ಗೆ ಇಳಿದಿದ್ದರು.

    ಶ್ರೇಯಸ್​ ಅಯ್ಯರ್ ಜತೆಗೂಡಿ ನಾಲ್ಕನೇ ವಿಕೆಟ್​ಗೆ 100 ರನ್​ಗಳ ಜತೆಯಾಟ ದಾಖಲಿಸಿದ ರಾಹುಲ್​, ನಂತರ ಐದನೇ ವಿಕೆಟ್​ ಜತೆಯಾಟದಲ್ಲಿ ಮನೀಷ್ ಪಾಂಡೆ ಜತೆಗೂಡಿ 107 ರನ್ ಕಲೆಹಾಕಿದರು. ಶ್ರೇಯಸ್ ಅಯ್ಯರ್ 63 ಬಾಲ್​ ಎದುರಿಸಿ 62 ರನ್​, ಪಾಂಡೆ 48 ಬಾಲ್ ಎದುರಿಸಿ 42 ರನ್ ಗಳಿಸಿದ್ದರು.

    ಭಾರತ ಈ ಪಂದ್ಯದಲ್ಲೂ ಆರಂಭಿಕ ಆಘಾತ ಅನುಭವಿಸಿದೆ. ಕಳಪೆ ಆಟ ತೋರಿದ ಆರಂಭಿಕ ಆಟಗಾರರ ಪೈಕಿ ಮಯಾಂಕ್ ಅಗರ್​ವಾಲ್​ ಒಂದು ರನ್​ಗೆ ವಿಕೆಟ್ ಕೈಚೆಲ್ಲಿದರೆ, ಕಪ್ತಾನ ವಿರಾಟ್ ಕೊಹ್ಲಿ ಕೂಡ 9 ರನ್​ಗೆ ಏಳನೇ ಓವರ್​ನಲ್ಲಿ ಮೂರನೇ ವಿಕೆಟ್ ರೂಪದಲ್ಲಿ ಪೆವಿಲಿಯನ್​ಗೆ ಮರಳಿದರು. ಮತ್ತೋರ್ವ ಓಪನರ್ ಪೃಥ್ವಿ ಷಾ 42 ಬಾಲ್ ಎದುರಿಸಿ 40 ರನ್​ ಗಳಿಸಿದರೂ 13ನೇ ಓವರ್​ನಲ್ಲಿ ಇಲ್ಲದ ಎರಡನೇ ರನ್​ ಗಳಿಸಲು ಓಡಿ ರನ್​ಔಟ್ ಆದರು.

    ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಕಿವೀಸ್ ಪಡೆಯಲ್ಲಿ ಹಮಿಷ್ ಬೆನ್ನೆಟ್​ ಹತ್ತು ಓವರ್ ಎಸೆದು 64 ರನ್ ನೀಡಿ 4 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಈ ಪಂದ್ಯದಲ್ಲಿ ಕಿವೀಸ್ ಪಡೆ ಎರಡು ಬದಲಾವಣೆ ಮಾಡಿಕೊಂಡಿತ್ತು. ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮರಳಿ ತಂಡ ಸೇರಿದ್ದು ಮತ್ತು ಸ್ಪಿನ್ನರ್​ ಮಿಚೆಲ್​ ಸಾನ್ಟರ್​ ಅವರು ಟಾಮ್​ ಬ್ಲಂಡೆಲ್ ಅವರ ಜಾಗ ತುಂಬಿದ್ದರು. ಟೀಂ ಇಂಡಿಯಾದಲ್ಲಿ ಕೇದಾರ್ ಜಾಧವ್ ಬದಲು ಮನೀಷ್ ಪಾಂಡೆ ಸ್ಥಾನ ಪಡೆದಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts