More

    11 ವರ್ಷದ ಕ್ರಿಕೆಟಿಗನ ಚಿಕಿತ್ಸೆಗೆ ಕನ್ನಡಿಗ ಕೆಎಲ್ ರಾಹುಲ್ ನೆರವಿನ ಹಸ್ತ

    ಬೆಂಗಳೂರು: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 11 ವರ್ಷದ ಕ್ರಿಕೆಟಿಗನ ಶಸಚಿಕಿತ್ಸೆಗಾಗಿ ಟೀಮ್ ಇಂಡಿಯಾದ ಉಪನಾಯಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ 31 ಲಕ್ಷ ರೂ. ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

    ‘ಅಪ್ಲಾಸ್ಟಿಕ್ ಅನಾಮಿಯಾ’ ಎಂಬ ಅಪರೂಪದ ರಕ್ತ ವ್ಯಾಧಿಯಿಂದ ಬಳಲುತ್ತಿದ್ದ ವರದ್ ಎನ್ನುವ ಬಾಲಕನಿಗೆ ಮೂಳೆ ಮಜ್ಜೆ ಕಸಿ (ಬಿಎಂಟಿ) ಮಾಡಲು 35 ಲಕ್ಷ ರೂ. ಆರ್ಥಿಕ ನೆರವಿನ ಅಗತ್ಯವಿತ್ತು. ರೋಗ ನಿರೋಧಕ ಶಕ್ತಿ ಕುಂದಿಸುವ ಈ ಕಾಯಿಲೆಗೆ ಬಿಎಂಟಿ ಚಿಕಿತ್ಸೆಯೊಂದೇ ಶಾಶ್ವತ ಪರಿಹಾರವಾಗಿತ್ತು. ಇದಕ್ಕಾಗಿ ವಿಮಾ ಏಜೆಂಟ್ ಆಗಿರುವ ಅವರ ತಂದೆ ಸಚಿನ್ ನಲವಾಡೆ ಮತ್ತು ತಾಯಿ ಸ್ವಪ್ನ ಝಾ ಅವರು ‘ಗೀವ್ ಇಂಡಿಯಾ’ ವೆಬ್‌ಸೈಟ್ ಮೂಲಕ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದರು.

    ಇದರ ಬಗ್ಗೆ ಮಾಹಿತಿ ಪಡೆದುಕೊಂಡ ಕೆಎಲ್ ರಾಹುಲ್, ಚಿಕಿತ್ಸೆಯ 35 ಲಕ್ಷ ರೂ. ಪೈಕಿ 31 ಲಕ್ಷ ರೂ. ಪಾವತಿಸಿದ್ದಾರೆ. ಇತರ ಮೊತ್ತ ನಿಧಿ ಸಂಗ್ರಹದಿಂದ ಬಂದಿತ್ತು. ಇದೀಗ ಯಶಸ್ವಿ ಶಸಚಿಕಿತ್ಸೆ ನಡೆದಿದ್ದು, ಮುಂದೊಂದು ದಿನ ಭಾರತ ತಂಡದ ಪರ ಆಡಬೇಕೆಂಬ ಅವರ ಆಸೆಗೆ ಮರುಜೀವ ಬಂದಿದೆ. ಕೆಎಲ್ ರಾಹುಲ್ ಮುಂಬರುವ ಐಪಿಎಲ್‌ನಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದು, ಇದಕ್ಕಾಗಿ 17 ಕೋಟಿ ರೂ. ಮೊತ್ತದ ದಾಖಲೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

    ಭಾರತ ಮಹಿಳೆಯರ ಬೆಂಬಿಡದ ಸೋಲು; ರಿಚಾ ದಾಖಲೆಗೂ ಒಲಿಯಲಿಲ್ಲ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts