More

    ಭಾರತ ಮಹಿಳೆಯರ ಬೆಂಬಿಡದ ಸೋಲು; ರಿಚಾ ದಾಖಲೆಗೂ ಒಲಿಯಲಿಲ್ಲ ಗೆಲುವು

    ಕ್ವೀನ್ಸ್‌ಟೌನ್: ಭಾರತ ಮಹಿಳಾ ಕ್ರಿಕೆಟ್ ತಂಡದ ನ್ಯೂಜಿಲೆಂಡ್ ಪ್ರವಾಸದ ಕಳಪೆ ನಿರ್ವಹಣೆ ಮುಂದುವರಿದಿದ್ದು, ಸತತ 4ನೇ ಏಕದಿನ ಪಂದ್ಯದಲ್ಲೂ ಸೋಲು ಅನುಭವಿಸಿದೆ. ಯುವ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ (52 ರನ್, 29 ಎಸೆತ, 4 ಬೌಂಡರಿ, 4 ಸಿಕ್ಸರ್) ಸಿಡಿಸಿದ ವೇಗದ ಅರ್ಧಶತಕದ ನಡುವೆಯೂ ಭಾರತ ತಂಡ 4ನೇ ಏಕದಿನ ಪಂದ್ಯದಲ್ಲಿ ಆತಿಥೇಯರಿಗೆ 63 ರನ್‌ಗಳಿಂದ ಶರಣಾಯಿತು. ಪ್ರವಾಸದಾರಂಭದಲ್ಲಿ ಏಕೈಕ ಟಿ20 ಪಂದ್ಯದಲ್ಲೂ ಸೋತಿದ್ದ ಭಾರತ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಇನ್ನು ಗುರುವಾರ 5ನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಮಿಥಾಲಿ ರಾಜ್ ಪಡೆ ವೈಟ್‌ವಾಷ್ ಮುಖಭಂಗ ತಪ್ಪಿಸಲು ಹೋರಾಡಬೇಕಿದೆ.

    ಮಳೆಯಿಂದಾಗಿ ವಿಳಂಭಗೊಂಡ ಪಂದ್ಯ ತಲಾ 20 ಓವರ್‌ಗಳಿಗೆ ಕಡಿತಗೊಂಡಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕಿವೀಸ್, 5 ವಿಕೆಟ್‌ಗೆ 191 ರನ್ ಪೇರಿಸಿತು. ಪ್ರತಿಯಾಗಿ ಭಾರತ 17.5 ಓವರ್‌ಗಳಲ್ಲಿ 128 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಅಮೆಲಿಯ ಕೆರ್ (68*ರನ್, 33 ಎಸೆತ, 11 ಬೌಂಡರಿ, 1 ಸಿಕ್ಸರ್, 30ಕ್ಕೆ 3 ವಿಕೆಟ್) ಆಲ್ರೌಂಡ್ ನಿರ್ವಹಣೆಯಿಂದ ಭಾರತವನ್ನು ಕಾಡಿದರು. ಏಕದಿನ ವಿಶ್ವಕಪ್‌ಗೆ ಕೇವಲ 2 ವಾರ ಬಾಕಿ ಇರುವಾಗ ಈ ಸತತ ಸೋಲಿನ ಸರಪಳಿ ಭಾರತ ತಂಡದ ದಿಕ್ಕೆಡಿಸಿದೆ.

    ರಿಚಾ ಘೋಷ್ ದಾಖಲೆ ವ್ಯರ್ಥ
    18 ವರ್ಷದ ರಿಚಾ ಘೋಷ್ 26 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಈ ಮೂಲಕ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಸಾಧಕಿ ಎನಿಸಿದರು. 2008ರಲ್ಲಿ ರುಮೇಲಿ ದಾರ್ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ಹಿಂದಿನ ದಾಖಲೆಯಾಗಿತ್ತು. ಮೊದಲ 7 ಎಸೆತಗಳಲ್ಲಿ 17 ರನ್ ಗಳಿಸಿದ್ದ ರಿಚಾ ನಂತರ ಸಿಡಿಯಲಾರಂಭಿಸಿದ್ದರು. ರಿಚಾ ಕ್ರೀಸ್‌ಗೆ ಇಳಿದಾಗ ಭಾರತ 19 ರನ್‌ಗೆ 4 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಅವರು ಔಟಾದ ಬಳಿಕ ಮತ್ತೆ ಕುಸಿದ ಭಾರತ 32 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು.

    ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191 (ಸೋಫಿ ಡಿವೈನ್ 32, ಸುಜಿ ಬೇಟ್ಸ್ 41, ಅಮೆಲಿಯ ಕೆರ್ 68*, ಸ್ಯಾಟರ್ತ್‌ವೇಟ್ 32, ರೇಣುಕಾ ಸಿಂಗ್ 33ಕ್ಕೆ 2, ರಾಜೇಶ್ವರಿ 26ಕ್ಕೆ 1), ಭಾರತ: 17.5 ಓವರ್‌ಗಳಲ್ಲಿ 128 (ಸ್ಮತಿ 13, ಶೆಫಾಲಿ 0, ಪೂಜಾ 4, ಮಿಥಾಲಿ 30, ರಿಚಾ 52, ದೀಪ್ತಿ 9, ಅಮೆಲಿಯ ಕೆರ್ 30ಕ್ಕೆ 3, ಜಾನ್ಸೆನ್ 32ಕ್ಕೆ 3, ಜೆಸ್ ಕೆರ್ 11ಕ್ಕೆ 2, ಮೆಕ್‌ಕಾಯ್ 22ಕ್ಕೆ 2). ಪಂದ್ಯಶ್ರೇಷ್ಠ: ಅಮೆರಿಯ ಕೆರ್.

    ಗಂಗೂಲಿ, ದ್ರಾವಿಡ್ ವಿರುದ್ಧ ವೃದ್ಧಿಮಾನ್ ಸಾಹ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts