More

    ಮತ್ತೊಬ್ಬರ ನೆರವಿಗೆ ನಿಲ್ಲುವವನೇ ಶ್ರೀಮಂತ

    ಶ್ರೀರಂಗಪಟ್ಟಣ: ದುಡ್ಡೊಂದಿದ್ದರೆ ಎಲ್ಲ ಮಾಡಬಹುದು ಹಾಗೂ ಗಳಿಸಬಹುದು ಎಂಬ ಭ್ರಮೆಯಲ್ಲಿರುವವನಿಗಿಂತ ಸಮಾಜದಲ್ಲಿ ತಾನೂ ಬದುಕಿ ತನ್ನ ಕೈಲಾದಷ್ಟು ನೆರವು ನೀಡಿ ಮತ್ತೊಬ್ಬರನ್ನು ಬದುಕಿಸಿ ಬಾಳುವವನೇ ನಿಜವಾದ ಶ್ರೀಮಂತ ಎಂದು ಚಂದ್ರವನದ ಪೀಠಾಧಿಪತಿ ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

    ಪಟ್ಟಣ ಹೊರವಲಯದ ಪೂರ್ವ ವಾಹಿನಿಯ ಚಂದ್ರವನ ಆಶ್ರಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ 136ನೇ ಬೆಳದಿಂಗಳ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಯಾರು ಮಠ, ದೇವಸ್ಥಾನಗಳಿಗೆ ಹೋದಾಗ ಸಮಾಧಾನವನ್ನು ಕಳೆದುಕೊಳ್ಳುತ್ತಾರೋ ಅವರು ಅಲ್ಲಿಗೆ ಹೋಗಿದ್ದೂ ವ್ಯರ್ಥ. ಇತ್ತೀಚೆಗೆ ಮನುಷ್ಯನಲ್ಲಿ ಎಷ್ಟೇ ಸಂಪತ್ತಿದ್ದರೂ ಅವನಿಗೆ ದುರಾಸೆ ಹೆಚ್ಚಾಗುತ್ತಿದೆ. ಎಲ್ಲರಲ್ಲೂ ಯಾರು ಶ್ರೇಷ್ಠ ಎನ್ನುವುದಕ್ಕಿಂತ ನೀವು ಎಂದು ಶ್ರೇಷ್ಠರಾಗುತ್ತೀರಿ ಎಂಬುದು ಮುಖ್ಯ. ರಾಮಾಯಣ, ಮಹಾಭಾರತದಂತಹ ಪುಣ್ಯಕಥೆಗಳು ನಮಗೆ ಆದರ್ಶ ಕಲಿಸುತ್ತವೆ. ದುಡ್ಡೊಂದಿದ್ದರೆ ಎಲ್ಲವೂ ಸಾಧ್ಯ ಎಂಬುದು ಸುಳ್ಳು. ಪರರಿಗೆ ಅನ್ನ ಹಾಕುವ, ನೊಂದವರಿಗೆ ಸಾಂತ್ವನ ಹೇಳುವ ಶಕ್ತಿ ಯಾರಲ್ಲಿದೆಯೋ ಹಾಗೂ ತಾನೂ ಬದುಕಿ, ಮತ್ತೊಬ್ಬರು ಬದುಕಲಿ ಎನ್ನುವ ಮನೋಭಾವವುಳ್ಳವರೇ ನಿಜವಾದ ಶ್ರೀಮಂತ. ತಾಳ್ಮೆ, ಶಾಂತಿ, ತೃಪ್ತಿ, ನೆಮ್ಮದಿ ಅರಿವೇ ಗುರು, ಗುರುವೇ ಅರಿವು ಎಂಬುದೇ ಸರ್ವಕಾಲಕ್ಕೂ ಸತ್ಯ ಎಂದರು.

    ಕೊಪ್ಪಳದ ಗವಿಮಠದ ಶ್ರೀ ಸಿದ್ದಲಿಂಗ ದೇವರು ಸ್ವಾಮೀಜಿ ಮಾತನಾಡಿ, ಮಾನವನು ತನಗೆ ದೊರೆತ ಈ ಪವಿತ್ರ ಜನ್ಮವನ್ನು ಹೇಗೆ ಪಾವನಗೊಳಿಸಿಕೊಂಡು ಮುನ್ನಡೆಯಬೇಕೆಂದು ತಾನೇ ಅರ್ಥಮಾಡಿಕೊಂಡು ತಲೆಬಾಗಿ ನಡೆಯಬೇಕು ಎಂದರು.

    ಇದಕ್ಕೂ ಮೊದಲು ಕಾರ್ಯಕ್ರಮವನ್ನು ಎಸ್‌ಡಿಎಂಇ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಭಿನವ ಭಾರತ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts