More

    ಸರ್ಕಾರಿ ಕೆಲ್ಸ ಗಿಟ್ಟಿಸಿಕೊಳ್ಳಲು ನಾನಾ ತಂತ್ರ! ನಿನ್ನೆ ಒಳಉಡುಪಲ್ಲಿ 5 ಕೆಜಿ ತೂಕದ ಕಲ್ಲು, ಇಂದು ಗೋಧಿ ಹಿಟ್ಟು

    ಬೆಂಗಳೂರು: ಕೆಕೆಆರ್​ಟಿಸಿ ಡ್ರೈವರ್​ ಕಂ ಕಂಡಕ್ಟರ್​ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಪಾಸ್​ ಮಾಡಲು ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿರುವುದು ಸಂಗತಿ ನಿನ್ನೆಯಷ್ಟೇ ಬಹಿರಂಗವಾಗಿ, ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ನಿನ್ನೆ (ಫೆ.10) ಅಭ್ಯರ್ಥಿಗಳು ತೂಕ ಹೆಚ್ಚಿಸಿಕೊಳ್ಳುವ ಸಲುವಾಗ ಕಬ್ಬಿಣ ಹಾಗೂ ತೂಕದ ಕಲ್ಲುಗಳನ್ನು ಕಟ್ಟಿಕೊಂಡು ಬಂದು ಸಿಕ್ಕಿಬಿದ್ದಿದರು. ಇದೀಗ ಮತ್ತೊಬ್ಬ ಅಸಾಮಿ ಕಬ್ಬಿಣ ಬದಲು ಹಿಟ್ಟಿನ ಮೊರೆ ಹೋಗಿ ತಗಲಾಕೊಂಡಿದ್ದಾನೆ.

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯಲ್ಲಿ ಚಾಲಕ ಕಂ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಬೇಕಾದರೆ 55 ಕೆ.ಜಿ. ತೂಕ ಕಡ್ಡಾಯವಾಗಿದೆ. ಹೇಗಾದರೂ ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಲೇಬೇಕೆಂದು ಅಡ್ಡದಾರಿ ಹಿಡಿದಿದ್ದ ಅಭ್ಯರ್ಥಿಗಳ ಅಕ್ರಮವನ್ನು ನಿನ್ನೆ ಜಾಗೃತ ದಳದ ಅಧಿಕಾರಿಗಳು ಬಯಲು ಮಾಡಿದ್ದರು. ಒಳಉಡುಪುಗಳಲ್ಲಿ ಭಾರವಾದ ಕಬ್ಬಿಣದ ರಾಡ್‌ಗಳು, ತಕ್ಕಡಿಯಲ್ಲಿ ಬಳಸುವ ಕಬ್ಬಿಣದ ಕಲ್ಲುಗಳನ್ನು ಇಟ್ಟುಕೊಂಡು ಬಂದು ಕಣ್ಣಿಗೆ ಮಣ್ಣೆರಚಲು ಯತ್ನಿಸಿ ಅಭ್ಯರ್ಥಿಗಳು ಸಿಕ್ಕಿಬಿದ್ದ ವಿಡಿಯೋ ನಿನ್ನೆ ಬಹಿರಂಗವಾಗಿತ್ತು.

    ಇದೀಗ ಮತ್ತೊಂದು ವಿಡಿಯೋ ಬಯಲಾಗಿದೆ. ಇನ್ನೊಬ್ಬ ಭೂಪ ತೂಕ ಹೆಚ್ಚಿಸಲು ಕಬ್ಬಿಣದ ಬದಲು ಹಿಟ್ಟಿನ ಮೊರೆ ಹೋಗಿದ್ದಾನೆ. ಒಂದೊಂದು ಕಾಲಿಗೆ ಒಂದೊಂದು ಕೆಜಿಯ ಗೋಧಿ ಹಿಟ್ಟನ್ನು ಸುತ್ತಿಕೊಂಡು ಬಂದಿದ್ದ. ಗೋಧಿ ಹಿಟ್ಟನ್ನು ನೀರಲ್ಲಿ ಕಲಸಿ ತೊಡೆಯ ಸುತ್ತಲು ಅಂಟಿಸಿಕೊಂಡು ಅದರ ಮೇಲೆ ಬಟ್ಟೆ ಕಟ್ಟಿಕೊಂಡು ಬಂದಿದ್ದ. ಕೆಕೆಆರ್​ಟಿಸಿ ಜಾಗೃತ ದಳದ ಅಧಿಕಾರಿಗಳ ತಪಾಸಣೆ ವೇಳೆ ಅಭ್ಯರ್ಥಿಯ ಕಳ್ಳಾಟ ಬಯಲಾಗಿದೆ.

    ಇದೀಗ ಹಿಟ್ಟು ಸುತ್ತಿಕೊಂಡು ಬಂದ ಅಭ್ಯರ್ಥಿಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

    ಏನು ಆಗಲ್ಲ ಅನ್ನೋ ನಂಬಿಕೆ….ಆಸೆಪಟ್ಟು ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ದುರಂತ ಅಂತ್ಯ

    ಕರಾವಳಿಯ 4 ಕ್ಷೇತ್ರ ಕಾಂಗ್ರೆಸ್ ಪಾಲಾಗುವ ಭೀತಿ!; ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗ, ಇಂದು ಮಂಗಳೂರಲ್ಲಿ ಷಾ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts