More

  ಕಿತ್ತೂರು ಭಾಗಕ್ಕೆ ನೀರಾವರಿ ಯೋಜನೆ ನೀಡಿ

  ಚನ್ನಮ್ಮ ಕಿತ್ತೂರು : ಕಿತ್ತೂರ ಕ್ಷೇತ್ರಕ್ಕೆ ಅವಶ್ಯವಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶಾಸಕ ಮಹಾಂತೇಶ ದೊಡಗೌಡರ ಮನವಿ ಸಲ್ಲಿಸಿದ್ದಾರೆ.

  ಐತಿಹಾಸಿಕ ಕಿತ್ತೂರು ಕ್ಷೇತ್ರವು ಹೆಚ್ಚಾಗಿ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದ್ದು, ಕೃಷಿಯನ್ನು ಆಧರಿಸಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಭಾಗದ ರೈತರಿಗೆ ಹೇಳಿಕೊಳ್ಳುವಂತ ಯಾವುದೇ ನೀರಾವರಿ ಸೌಲಭ್ಯವಿಲ್ಲದೇ ನೀರಾವರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀರಾವರಿ ಯೋಜನೆಗಳ ಅನುಷ್ಠಾನ ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.

  ಮಲಪ್ರಭಾ ನದಿಗೆ ಮಹದಾಯಿ ಜೋಡಣೆ ಮಾಡಿ ಕಳಸಾ-ಬಂಡೂರಿ ಯೋಜನೆಗಳನ್ನು ಜಾರಿಗೆ ತರುವ ಸಮಯದಲ್ಲಿ ಮಲಪ್ರಭಾ ನದಿಗೆ ಸೂಕ್ತವಾದ ಸ್ಥಳದಲ್ಲಿ ಬ್ರೀಜ್ ಕಂ ಬ್ಯಾರೇಜ್ ನಿರ್ಮಿಸಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸುವುದು, ತಟ್ಟಿ ಹಳ್ಳಕ್ಕೆ ಅಸೋಗಾ ಹತ್ತಿರ ಡ್ಯಾಂ ನಿರ್ಮಿಸುವುದು ಮತ್ತು ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಮುಖಾಂತರ ನೀರು ಒದಗಿಸುವುದು, ಕಾಳಿ ನದಿಯ ನೀರು ಭಾಗಶಹಃ ಬಳಕೆಯಾಗದೇ ಸಮುದ್ರಪಾಲಾಗುತ್ತಿದ್ದು, ಈ ನೀರನ್ನು ಸದ್ಬಳಕೆ ಮಾಡಿಕೊಂಡು ಕಿತ್ತೂರ ಹಾಗೂ ಧಾರವಾಡ ಭಾಗಕ್ಕೆ ಕಾಲುವೆ ಮುಖಾಂತರ ಸೌಲಭ್ಯ ಕಲ್ಪಿಸುವುದು. ತಿಗಡಿ ಡ್ಯಾಂ ನಿರ್ಮಾಣವಾಗಿದ್ದರೂ ಕಾಲುವೆಗಳ ಮುಖಾಂತರ ನೀರು ಹರಿಸುತ್ತಿಲ್ಲ ಕಾರಣ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವುದು, ಚಚಡಿ ಏತ ನೀರಾವರಿ ಯೋಜನೆಯ ಕಾಮಗಾರಿ ತ್ವರಿಗತವಾಗಿ ಕೈಗೆತ್ತಿಕೊಂಡು ನೇಸರಗಿ ಹಾಗೂ ಬೈಲಹೊಂಗಲ ಭಾಗಕ್ಕೆ ಅನುಕೂಲ ಕಲ್ಪಸುವುದು ಹೀಗೆ ಹಲವು ಮಹತ್ವದ ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts