More

    ನಾಗವರ್ಮ ಅರಸನ ಕಾಲದ ಶಾಸನ ಪತ್ತೆ

    ವಿಜಯವಾಣಿ ಸುದ್ದಿಜಾಲ ಅಂಕೋಲಾ

    ತಾಲೂಕಿನ ಅಂಗಡಿಬೈಲ್ ಭಂಡಾರಿಗದ್ದೆಯಲ್ಲಿ ಅಪ್ರಕಟಿತ ಶಾಸನವೊಂದನ್ನು ಶ್ಯಾಮಸುಂದರ ಗೌಡ ಗುರುತಿಸಿದ್ದಾರೆ.

    ಚಂದ್ರಕಾಂತ ಆಚಾರಿಯವರ ಮನೆ ಎದುರಿನ ಮಾವಿನ ಮರದ ಕೆಳಗೆ ವೀರಗಲ್ಲು, ಅದರ ಕೆಳಗೆ ಶಾಸನ ಪತ್ತೆಯಾಗಿದೆ. ಮನೆಯವರು ಅದನ್ನು ನಿತ್ಯ ಪೂಜಿಸುತ್ತಿದ್ದಾರೆ. ಈ ಶಾಸನ ನಾಗವರ್ಮ ಎಂಬ ರಾಜನ ಕಾಲದ್ದಾಗಿದೆ. ರಾಜನನ್ನು ಗೋಕರ್ಣ ಪುರವರಾಧೀಶ್ವರ ಎಂದು ಕರೆದಿದೆ.

    ಶಾಸನವು ಕೇವಲ ಮೂರು ಸಾಲುಗಳನ್ನು ಹೊಂದಿದ್ದರೂ, ಈ ಹಿಂದೆ ದೊರೆತ ಶಾಸನಗಳು ತಿಳಿಸದ ನಾಗವರ್ಮ ಅರಸನ ಬಿರುದುಗಳನ್ನು ತಿಳಿಸುತ್ತದೆ. ಅರಸ ಒಳ್ಳೆಯ ಆಡಳಿತಗಾರ, ಶೂರ, ನೀತಿಗಳ ಪರಿಪಾಲಕನಾಗಿದ್ದ. ಪರಸ್ತ್ರೀಯರನ್ನು ತಾಯಿಯಂತೆ ಕಾಣುತ್ತಿದ್ದ, ಪಕ್ಷಿ ಸಂಕುಲಗಳನ್ನು ಪ್ರೀತಿಸುತ್ತಿದ್ದ ಎಂದು ಶಾಸನ ತಿಳಿಸಿದೆ.

    ನಾಗವರ್ಮ ಅರಸ ಸುಮಾರು ಕ್ರಿಶ 1070 ರಿಂದ 1113ರ ವರೆಗೆ ಗೋಕರ್ಣವನ್ನು ಕೇಂದ್ರವಾಗಿಟ್ಟು ಕೊಂಡು ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ, ಸಿದ್ದಾಪುರ ತಾಲೂಕುಗಳ ಭಾಗದಲ್ಲಿ ಆಳ್ವಿಕೆ ನಡೆಸಿದ್ದ. ಈ ಶಾಸನದ ಹೊರತು ಹೊನ್ನಾವರ ತಾಲೂಕಿನ ಕೆಕ್ಕಾರ, ಹಳದೀಪುರ, ಕಡಬಾಳ, ಅಂಕೋಲಾ ತಾಲೂಕಿನ ಬಡಗೇರಿ, ಹಾವೇರಿ ಜಿಲ್ಲೆಯ ಗಳಗನಾಥ ಮೊದಲಾದೆಡೆ ದೊರೆತ ಶಾಸನಗಳಲ್ಲಿ ನಾಗವರ್ಮ ಅರಸನ ಉಲ್ಲೇಖವಿದೆ ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ. ಅಲ್ಲದೆ, ಅದರ ಮೇಲಿರುವ ಶಿಲ್ಪವೂ ಅತಿ ಅಪರೂಪದ್ದಾಗಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts