More

    ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಬೆಂಗಳೂರು: ವಾರದ ಹಿಂದೆ ಎಲೆಮಲ್ಲಪ್ಪನ ಕೆರೆಯಲ್ಲಿ ಪತ್ತೆಯಾಗಿದ್ದ ತಲೆ- ಕೈಕಾಲುಗಳಿಲ್ಲದ ಅಪರಿಚಿತ ಶವದ ರಹಸ್ಯ ಬಯಲಾಗಿದ್ದು, ಈ ಸ್ಟೋರಿ ಓದಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ.

    ಜ.12ರಂದು ಎಲೆಮಲ್ಲಪ್ಪನ ಕೆರೆಯಲ್ಲಿ ಕೇಶವ್ ಪ್ರಸಾದ್​ರ ಹಿರಿಮಗ ಕೌಶಲ್ ಪ್ರಸಾದ್ ಎಂಬಾತನ ಶವ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕೊಲೆ ಹಿಂದಿನ ಮಾಸ್ಟರ್​ ಪ್ಲಾನ್​ ಅಪ್ಪ!ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಅಪ್ಪನೇ ಸುಪಾರಿ ಕೊಟ್ಟಿದ್ದ! ಇದನ್ನೂ ಓದಿರಿ ತಂದೆ-ತಾಯಿ-ಮಕ್ಕಳಿಬ್ಬರು ಆತ್ಮಹತ್ಯೆ, ಶವಗಳನ್ನ ಕಂಡು ಬೆಚ್ಚಿಬಿದ್ದ ಸ್ಥಳೀಯರು

    ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
    ಕೊಲೆಯಾದ ಕೌಶಲ್​ ಪ್ರಸಾದ್​

    ಎಲೆಮಲ್ಲಪ್ಪನ ಕೆರೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಕೇಸ್​ ಆವಲಹಳ್ಳಿ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರು ಅವರಿಚಿತ ಶವ ಯಾರದ್ದು ಎಂದು ಹುಡುಕಾಟ ನಡೆಸುತ್ತಿದ್ದರು. ಅದೇ ದಿನ ಕೌಶಲ್ ಪ್ರಸಾದ್ ನಾಪತ್ತೆಯಾಗಿದ್ದಾನೆ ಎಂದು ಅಪ್ಪನಿಂದಲೇ ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಮಲ್ಲೇಶ್ವರಂ ಪೊಲೀಸರು ಆವಲಹಳ್ಳಿ ಪೊಲೀಸರನ್ನು ಸಂಪರ್ಕಿಸಿದಾಗ ಕೆರೆಯಲ್ಲಿ ಪತ್ತೆಯಾದ ಶವ ಕೌಶಲ್ ಪ್ರಸಾದ್‌ನದ್ದೇ ಅನ್ನೋದು ಖಚಿತವಾಗಿತ್ತು. ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿತ್ತು. ಇದರ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ತಂದೆ ಕೇಶವ್ ಪ್ರಸಾದ್​ರನ್ನು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ಸತ್ಯ ಒಪ್ಪಿಕೊಡ ಕೇಶವ್ ಪ್ರಸಾದ್, ಕಿರಿಮಗ ಕೌಸ್ತುಭ್‌ ಮೂಲಕ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿರಿ ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
    ಕೌಶಲ್​ ಪ್ರಸಾದ್​ ಜತೆ ತಂದೆ ಮತ್ತು ತಮ್ಮ

    ಕೌಶಲ್ ಪ್ರಸಾದ್‌ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ. ಅಪ್ಪ-ಅಮ್ಮನಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಹಿರಿಮಗನ ವರ್ತನೆಯಿಂದ ಬೇಸತ್ತ ತಂದೆ, ಮಗನ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ತನ್ನ ಕಿರಿಮಗ ಕೌಸ್ತುಭ್‌ಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸುವಂತೆ ಸೂಚನೆಯನ್ನೂ ಕೊಟ್ಟಿದ್ದ. ಅಪ್ಪನ ಅಣತಿಗೆ ತಲೆಬಾಗಿದ ಕೌಸ್ತುಭ್​, ಜ.10ರಂದು ಮದ್ಯ ಸೇವಿಸೋಣ ಬಾ ಎಂದು ತನ್ನ ಅಣ್ಣನನ್ನ ಕರೆದಿದ್ದ. ಅಲ್ಲಿಗೆ ಬಂದ ಅಣ್ಣನಿಗೆ ಮದ್ಯಕ್ಕೆ ಯಾವುದೋ ಮಾತ್ರೆ ಹಾಕಿ ಕುಡಿಸಿದ್ದ. ಮೊದಲೇ ಸಂಚು ರೂಪಿಸಿದ್ದಂತೆ ಸುಪಾರಿ ಪಡೆದಿದ್ದ ವಿಷ್ಣು ಎಂಬಾತ ತನ್ನ ಸಹಚರ ನವೀನ್​ನೊಂದಿಗೆ ಬಂದಿದ್ದ. ಮಲ್ಲೇಶ್ವರಂನಿಂದ ಆವಲಹಳ್ಳಿಗೆ ಕೌಶಲ್​ನನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಆರೋಪಿಗಳು, ಕಾರಿನಲ್ಲೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಬಳಿಕ ಮಚ್ಚಿನಿಂದ ರುಂಡ-ಮುಂಡ ಬೇರ್ಪಡಿಸಿದ್ದರು. ಮೃತದೇಹವನ್ನು ಎಲೆಮಲ್ಲಪ್ಪ ಕೆರೆಗೆ ಎಸೆದು ಹೋಗಿದ್ದರು.

    ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ತಂದೆ ಕೇಶವ್‌ ಪ್ರಸಾದ್ ಮತ್ತು ಕೌಸ್ತುಭ್‌ನನ್ನು ಬಂಧಿಸಿದ್ದ ಪೊಲೀಸರು, ಬಳಿಕ ಅವರ ಮಾಹಿತಿ ಆಧರಿಸಿ ವಿಷ್ಣು, ನವೀನ್ ಮತ್ತು ಹತ್ಯೆಗೆ ಮಚ್ಚು ಪೂರೈಸಿದ್ದ ಗಜ ಎಂಬಾತನನ್ನು ಬಂಧಿಸಿದ್ದಾರೆ. ಕೇಶವ್​ ಹತ್ಯೆ ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಲಾಗಿದೆ.

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಈ ಒಂದು ನಿರ್ಧಾರವೇ ದುರಂತ ಸಾವಿಗೆ ಕಾರಣವಾಯ್ತಾ? ಮೃತರ ಸಂಬಂಧಿ ಗೋಳಾಟ

    ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 13 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts