More

    VIDEO: ಚಾಕಲೇಟ್ ಆಸೆಗಾಗಿ ನದಿ ನೀರಿನಲ್ಲಿ ತುಂಬಿದ ಗ್ಯಾಸ್​ ಸಿಲಿಂಡರ್ ಸಾಗಿಸುವ ಮಕ್ಕಳು; ಇದು ಹಳ್ಳಿಗರ ಕ್ರೌರ್ಯ

    ಪಟನಾ: ಮಕ್ಕಳಿಗೆ ಚಾಕಲೇಟ್​ ಆಸೆ ತೋರಿಸಿ, ತುಂಬಿದ ಎಲ್​ಪಿಜಿ ಸಿಲೆಂಡರ್​ ಗ್ಯಾಸ್​ಗಳನ್ನು ನದಿಯ ಒಂದು ದಡದಿಂದ-ಇನ್ನೊಂದು ದಡಕ್ಕೆ ಸಾಗಿಸಿಕೊಳ್ಳುವ ಕ್ರೂರ ಘಟನೆ ಬಿಹಾರದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ.

    ಬಿಹಾರದ ಕಠಿಹಾರ ಜಿಲ್ಲೆಯಲ್ಲಿರುವ ಹಾಸನ್​ಗಂಜನ್​​ನಲ್ಲಿ ಭಾಸ್ನಾ ನದಿ ಹರಿಯುತ್ತದೆ. ಈ ಪ್ರದೇಶದ ಸ್ಥಳೀಯ ಮಕ್ಕಳು ನದಿ ನೀರಿನಲ್ಲಿ ಮನಸೋ ಇಚ್ಛೆ ಈಜುತ್ತಾರೆ. ಅದರಲ್ಲೂ ಬೇಸಿಗೆ ಬಂತೆಂದರೆ ಹೆಚ್ಚು ಸಮಯ ನೀರಿನಲ್ಲಿಯೇ ಕಳೆಯುತ್ತಿರುತ್ತಾರೆ. ಆದರೆ ಆ ಹಳ್ಳಿಯ ಕೆಲವು ದೊಡ್ಡ ಜನರು ಮಕ್ಕಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗೋ ಕಳ್ಳ ಸಾಗಾಟ ತಡೆಗೆ ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್​ಗೆ ಕೊಲೆ ಬೆದರಿಕೆ

    ಈ ನದಿಯಿಂದ ಆಚೆ ಇರುವ ಹಳ್ಳಿಗಳು ಇತ್ತ ಭಾಗಕ್ಕೆ ಬರಲು ದೋಣಿಯನ್ನು ಬಳಸುತ್ತಾರೆ. ಹಾಗಾಗಿ ಇಲ್ಲಿ ಒಂದಷ್ಟು ಜನರು ದೋಣಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ದೋಣಿ ಮಾಲೀಕರು ಒಬ್ಬರಿಗೆ 20 ರೂ.ನಂತೆ ಹಣ ಪಡೆಯುತ್ತಾರೆ. ಆದರೆ ಎಲ್​ಪಿಜಿ ಸಿಲೆಂಡರ್​ ದೋಣಿಯಲ್ಲಿ ಹಾಕಿ, ಸಾಗಿಸಬೇಕು ಎಂದರೆ ಹೆಚ್ಚುವರಿ ಅಂದರೆ ಮತ್ತೂ 20 ರೂ. ಕೊಡಬೇಕು.

    ಕೆಲವರು ಅಂಬಿಗ ಕೇಳಿದಷ್ಟು ಹಣ ಕೊಟ್ಟು, ಗ್ಯಾಸ್​ ಸಿಲಿಂಡರ್​​ನ್ನು ದೋಣಿಯಲ್ಲಿಯೇ ಸಾಗಿಸುತ್ತಾರೆ. ಆದರೆ ಮತ್ತೆ ಕೆಲವರು ಆ ಹಣವನ್ನು ಉಳಿಸುತ್ತಾರೆ. ತಾವು ದೋಣಿಯಲ್ಲಿ ಹೋಗಿ, ನದಿಯಲ್ಲಿ ಆಡುವ ಮಕ್ಕಳ ಕೈಯಲ್ಲಿ ತುಂಬಿದ ಸಿಲಿಂಡರ್​ನ್ನು ಮತ್ತೊಂದು ದಡಕ್ಕೆ ಸಾಗಿಸುತ್ತಾರೆ. ನೀವು ಈ ಸಿಲಿಂಡರ್​ನ್ನು ಆಚೆ ದಡಕ್ಕೆ ಕೊಂಡೊಯ್ದರೆ ಚಾಕಲೇಟ್​ ಕೊಡುತ್ತೇವೆ ಎನ್ನುತ್ತಾರೆ. ಬಡ ಮಕ್ಕಳು ಆಸೆಗೆ ಬಿದ್ದು, ಅಷ್ಟು ಭಾರದ ಸಿಲಿಂಡರ್​ನ್ನು ಹೊತ್ತು ನದಿ ದಾಟುತ್ತಾರೆ. ಇದನ್ನೂ ಓದಿ: ಬಹುದೊಡ್ಡ ಪ್ರಮಾದ ಮಾಡಿ, ಬಳಿಕ ಭಾರತೀಯ ಹಿಂದುಗಳ ಕ್ಷಮೆ ಕೋರಿದ ಇಸ್ರೇಲ್​ ಪ್ರಧಾನಿಯ ಹಿರಿಯ ಮಗ…

    ಇವರೆಲ್ಲ ಮಕ್ಕಳು. ಅವರಿಗೆ ಹೀಗೆ ಸಿಲಿಂಡರ್​ನ್ನು ತಾವು ತೆಗೆದುಕೊಂಡು ಹೋಗುವುದರಿಂದ ಅಪಾಯ ಆಗಬಹುದು ಎಂಬುದೆಲ್ಲ ತಿಳಿಯುವುದಿಲ್ಲ. ಚಾಕಲೇಟ್​ ಸಿಗುತ್ತದಲ್ಲ ಎಂಬ ಒಂದೇ ಆಸೆಗೆ ಬಿದ್ದು, ನೀರಿನಲ್ಲಿ ಸಿಲಿಂಡರ್​ ಎಳೆಯುತ್ತ, ನೂಕುತ್ತ ಸಾಗುತ್ತಾರೆ.

    ವಿಡಿಯೋವೊಂದು ವೈರಲ್ ಆದ ಬಳಿಕ ರಾಷ್ಟ್ರೀಯ ಮಾಧ್ಯಮವೊಂದು ಮಕ್ಕಳನ್ನು ಸಂಪರ್ಕಿಸಿ ಪ್ರಶ್ನೆ ಮಾಡಿದೆ. ಆಗ ಅವರು ತುಂಬ ಮುಗ್ಧತೆಯಿಂದ, ಚಾಕಲೇಟ್​ ಕೊಡುತ್ತೀವಿ ಎನ್ನುತ್ತಾರೆ. ನಾವು ಸಿಲಿಂಡರ್ ಸಾಗಿಸಿದ ಮೇಲೆ ಎಷ್ಟೋ ಜನ ಹಾಗೇ ಹೋಗಿಬಿಡುತ್ತಾರೆ. ಹೇಳಿದ್ದನ್ನು ಕೊಡುವುದೇ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಮತ್ತೊಂದಷ್ಟು ಜನ ದುಡ್ಡು ಕೊಡುತ್ತೇವೆ ಎನ್ನುತ್ತಾರೆ. ಆಮೇಲೆ ನಮ್ಮ ಕಡೆಗೆ ನೋಡದೆ ಹೋಗುತ್ತಾರೆ ಎಂದೂ ಮಕ್ಕಳು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts