More

    ಗೋ ಕಳ್ಳ ಸಾಗಾಟ ತಡೆಗೆ ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್​ಗೆ ಕೊಲೆ ಬೆದರಿಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.

    ಗೋ ಸಾಗಾಟ ಕುರಿತ ನಿಯಮಗಳ ಸೂಚನೆ ನೀಡಿದ್ದ ಜಿಲ್ಲಾಧಿಕಾರಿಯನ್ನು “ಫಸ್ಟ್​ ಮೊಲೆನ್​ ಕರ್ತ್​ ಕೆರೊಡು'(ಮೊದಲು ಅವಳನ್ನು ಕಡಿದು ಕೊಲ್ಲಬೇಕು) ಎಂದು ತುಳುವಿನಲ್ಲಿ ಬೆದರಿಕೆ ಹಾಕಲಾಗಿದೆ. ಇದರ ಬೆನ್ನಲ್ಲೇ ಸಿಂಧೂ ಬಿ.ರೂಪೇಶ್​ ಸೇರಿದಂತೆ 13 ಹಿರಿಯ ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

    ಇದನ್ನೂ ಓದಿರಿ ಸುದ್ದಿಗಾಗಿ ಕೊಲೆ ಆರೋಪಿ ಮನೆಗೆ ಬೆಂಕಿ ಹಚ್ಚಿಸಿದ್ದ ವರದಿಗಾರ ಅರೆಸ್ಟ್!

    ಬಕ್ರೀದ್​ ಹಬ್ಬದ ಸಂದರ್ಭ ಅಕ್ರಮವಾಗಿ ಗೋ ಸಾಗಾಟ ಆಗದಂತೆ ತಡೆಯಬೇಕು. ಆದರೆ, ಗೋ ಸಾಗಾಟ ತಡೆ ವೇಳೆ ಯಾರೂ ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರಿಗೆ ದೂರು ನೀಡಬೇಕು ಎಂದು ಡಿಸಿ ಸಿಂಧು ಬಿ. ರೂಪೇಶ್​ ಸೋಮವಾರ ಮಾಧ್ಯಮ ಹೇಳಿಕೆ ನೀಡಿದ್ದರು. ಅದನ್ನು ಕೆಲ ವೆಬ್​ಸೈಟ್​ಗಳಲ್ಲಿ ಅಪಾರ್ಥ ಬರುವ ರೀತಿಯಲ್ಲಿ ಪ್ರಕಟಿಸಲಾಗಿತ್ತು. ಅದನ್ನೇ ಉಲ್ಲೇಖಿಸಿ ಸಂಘಟನೆಯೊಂದರ ವಾಟ್ಸ್ಆ್ಯಪ್​ ಗ್ರೂಪ್​ನಲ್ಲಿ ವ್ಯಕ್ತಿಯೊಬ್ಬ “ಫಸ್ಟ್​ ಮೊಲೆನ್​ ಕರ್ತ್​ ಕೆರೊಡು'(ಮೊದಲು ಅವಳನ್ನು ಕಡಿದು ಕೊಲ್ಲಬೇಕು) ಎಂದು ತುಳುವಿನಲ್ಲಿ ಬೆದರಿಕೆ ಹಾಕಿದ್ದ. ಪೊಲೀಸ್​ ಇಲಾಖೆ ತನಿಖೆ ಆರಂಭಿಸಿದೆ.

    ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿರುವ ಡಿಸಿಪಿ ಅರುಣಾಂಗ್ಶುಗಿರಿ ಅವರು ಜಿಲ್ಲಾಧಿಕಾರಿ ಈವರೆಗೆ ದೂರು ನೀಡಿಲ್ಲ. ಅವರಿಗೆ ದೂರು ನೀಡುವಂತೆ ತಿಳಿಸಿದ್ದೇವೆ. ನಾವು ಸ್ವಯಂಪ್ರೇರಣೆಯಿಂದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.

    ಈ ನಡುವೆಯೇ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜಕುಮಾರ್​ ಕತ್ರಿ, ನಾಗಾಂಬಿಕ ದೇವಿ ಸೇರಿ 13 ಹಿರಿಯ ಐಎಎಸ್​ ಅಧಿಕಾರಿಗಳಿಗೆ ಸರ್ಕಾರ ಮಂಗಳವಾರ ವಿವಿಧ ಜವಾಬ್ದಾರಿ ನೀಡಿ ಸ್ಥಳ ನಿಯುಕ್ತಿಗೊಳಿಸಿದೆ. ಸಿಂಧೂ ಬಿ ರೂಪೇಶ್​ ಅವರನ್ನು-ಎಲೆಕ್ಟ್ರಾನಿಕ್​ ಡೆಲಿವರಿ ಆಫ್​ ಸಿಟಿಜನ್​ ಸವಿರ್ಸ್​ (ಡಿಪಿಎಆರ್​) ನಿರ್ದೇಶಕರ ಸ್ಥಾನಕ್ಕೆ ನಿಯುಕ್ತಿ ಮಾಡಲಾಗಿದೆ.

    ಎಮ್ಮೆಗಳ ಕಾದಾಟ, ಬಾವಿಗೆ ಜಿಗಿದ ಗರ್ಭಿಣಿ ಎಮ್ಮೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts