More

    ಮಕ್ಕಳ ಕಳ್ಳರಿದ್ದಾರೆ ಎಚ್ಚರಿಕೆ! ಹಾಡುಹಗಲೇ ಕಿಡ್ನಾಪ್​ ಯತ್ನಕ್ಕೆ ಬೆದರಿದ ಗ್ರಾಮಸ್ಥರು

    ಬೆಳಗಾವಿ: ಮನೆಯ ಬಳಿಯೇ ಆಡುತ್ತಿದ್ದ ಮಕ್ಕಳನ್ನು ಹಾಡುಹಗಲೇ ಕಿಡ್ನಾಪ್‌ ಮಾಡಲು ದುಷ್ಕರ್ಮಿಗಳ ಗುಂಪೊಂದು ಯತ್ನಿಸಿರುವ ಪ್ರಸಂಗ ಬೆಳಗಾವಿ ಜಿಲ್ಲೆಯಿಂದ ವರದಿಯಾಗಿದೆ. ಸ್ಥಳೀಯ ಜನರ ಸಮಯಪ್ರಜ್ಞೆಯಿಂದ ಯತ್ನ ವಿಫಲವಾಗಿದ್ದರೂ, ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚು ಬಿದ್ದಿದ್ದಾರೆ.

    ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ.ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟವಾಡುತ್ತಿದ್ದ ಮಕ್ಕಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಲು ದುಷ್ಕರ್ಮಿಗಳ ಗ್ಯಾಂಗ್ ಒಂದು ಯತ್ನಿಸಿದೆ. ಏಳು ವರ್ಷ ಮತ್ತು ಐದು ವರ್ಷದ ಬಾಲಕಿಯರಿಗೆ ಚಾಕೊಲೇಟ್ ಕೊಡ್ತೇನಿ ಬಾ ಅಂತ ಹೊತ್ತೊಯ್ಯುತ್ತಿದ್ದರು. ಓಮಿನಿ ವ್ಯಾನ್​​ನಲ್ಲಿ ಬಂದಿದ್ದ ನಾಲ್ವರು ಮಕ್ಕಳನ್ನು ವ್ಯಾನಿನಲ್ಲಿ ಹಾಕಿಕೊಂಡಿದ್ದರು. ಸ್ಥಳೀಯರು ಗಮನಿಸಿ ಕಿರುಚುತ್ತಿದ್ದಂತೆ ಮಕ್ಕಳನ್ನು ಬಿಟ್ಟು ಓಡಿ ಹೋದರು ಎನ್ನಲಾಗಿದೆ.

    ಇದನ್ನೂ ಓದಿ: ಪತಿಗೂ ಧೋತಿ ತೊಡಿಸಿ, ಸೀರೆಯುಟ್ಟು ನಟಿ ಪ್ರಿಯಾಂಕಾ ಲಕ್ಷ್ಮೀಪೂಜೆ: ನೆಟ್ಟಿಗರಿಂದ ಅಭಿನಂದನೆಗಳ ಮಹಾಪೂರ

    ಈ ಪುಟಾಣಿ ಸೋದರಿಯರು ಉಮೇಶ್ ಕಾಂಬ್ಳೆ ಎಂಬುವವರ ಮಕ್ಕಳಾಗಿದ್ದಾರೆ. ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

    ಸಾಲಬಾಧೆಗೆ ಬೇಸತ್ತು ಸಾವಿನ ಹಾದಿ ಹಿಡಿದ ಸಾರಿಗೆ ನೌಕರ; ಕೊನೆಗೂ ಉಳಿಯಲಿಲ್ಲ

    ಬಿಗಡಾಯಿಸಿದ ರಾಜಧಾನಿಯ ವಾಯು ಪರಿಸರ; ದೀಪಾವಳಿ ಪಟಾಕಿಗಳಿಂದ ಮತ್ತಷ್ಟು ಮಾಲಿನ್ಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts