More

    ಕಷ್ಟದ ದಿನಗಳಲ್ಲಿ‌ ನನ್ನ ಜತೆ ನಿಂತ ಬೊಮ್ಮಾಯಿ ಮಾಮನ ಪರ ನಾನು ನಿಲ್ತೇನೆ: ಕಿಚ್ಚ ಸುದೀಪ್​

    ಬೆಂಗಳೂರು: ಚಿತ್ರರಂಗದ‌ ಕಷ್ಟದ ದಿನಗಳಲ್ಲಿ‌ ನಾನು ಪ್ರೀತಿಯಿಂದ ಬೊಮ್ಮಾಯಿ ಮಾಮ ಎಂದು ಕರೆಯುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ಜೊತೆ ನಿಂತಿದ್ದರು. ಅವರ ಪರ ನಿಲ್ಲುತ್ತೇನೆಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ನಟ ಸುದೀಪ್​ ಹೇಳಿದರು.

    ಸಿಎಂ ಬೊಮ್ಮಾಯಿ ಉಪಸ್ಥಿತರಿದ್ದ ಖಾಸಗಿ ಹೋಟೆಲ್​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಅವರು ಮಾತನಾಡಿದರು. ಇಲ್ಲಿ ನನ್ನ ನಿಲುವು ಅಂತಾ ಏನು ಇಲ್ಲ. ‌ರಾಜಕೀಯವೂ ಇಲ್ಲ. ಕಷ್ಟದ ದಿನಗಳಲ್ಲಿ ಬೊಮ್ಮಾಯಿ ಮಾಮ ನನಗೆ ಬೆಂಗಾವಲಾಗಿ ನಿಂತರು. ಹೀಗಾಗಿ ಇಂದು ಅವರ ಪರ ನಾನು ನಿಲ್ಲುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿಯ ತತ್ವ ಸಿದ್ಧಾಂತಗಳಿಗೆ‌ ಒಪ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್​, ನನ್ನ ಮನೆಯಲ್ಲಿ ಒಬ್ಬರು ತಂದೆ ಇದ್ರೆ ಅವರು ಹೇಳಿದಂತೆ‌ ಕೇಳ್ತೀವಿ. ಅವರಿಗೆ ಸಹಾಯ ಬೇಕು ಅಂದ್ರೆ ನಾನು ಅವರ ಪರ‌ ನಿಲ್ಲೋದು ನನ್ನ ಕರ್ತವ್ಯ. ಒಬ್ಬ ವ್ಯಕ್ತಿಯ ಪರವಾಗಿ ನಿಲ್ತೀವಿ ಅಂದ್ರೆ ಪಕ್ಷದ ಪರವಾಗಿ ನಿಲ್ಲುತ್ತೇವೆ ಎಂದರ್ಥ ಎಂದರು.

    ಇದನ್ನೂ ಓದಿ: 80 ಲಕ್ಷ ರೂ. ಲಾಟರಿ ಹೊಡೆದ ಮರುದಿನವೇ ಯುವಕ ಮೃತಪಟ್ಟ ಪ್ರಕರಣ: ಆಪ್ತ ಸ್ನೇಹಿತನ ಬಂಧನ

    ಇದೇ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ, ಸುದೀಪ್ ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ನಮ್ಮ ಹಾಗೂ ಅವರ ಸಂಬಂಧವನ್ನು ಗೌರವಿಸಿ ನಮ್ಮ ಪರವಾಗಿ ನಿಲ್ಲುತ್ತಿದ್ದಾರೆ. ಮೊದಲಿನಿಂದಲೂ ಅವರ‌ ಜತೆ ಒಳ್ಳೆಯ ಸಂಬಂಧ ಇರುವುದರಿಂದ ಎರಡು ಬಾರಿ ಮಾತಾಡಿದ್ದೆ. ನಿಮಗೋಸ್ಕರ‌ ಸಿದ್ಧನಿದ್ದೇನೆ ಎಂದಿದ್ದಾರೆ. ಪಕ್ಷದ ಪರ ಪ್ರಚಾರ‌ ಮಾಡ್ತೇನೆ ಎಂದಿದ್ದಾರೆ ಎಂದು ಹೇಳಿದರು.

    ನಾನು ಎಲ್ಲರಿಗೂ ಕ್ಯಾಂಪೇನ್ ಮಾಡಲು ಆಗೋದಿಲ್ಲ. ನಾನು ಬಂದಿರೋದು ಬೊಮ್ಮಾಯಿ ಮಾವನಿಗೋಸ್ಕರ. ಅವರು ಹೇಳಿದರೆ, ಅವಶ್ಯಕತೆ ಬಂದರೆ,‌ ಇತರರ ಪರನೂ ಕ್ಯಾಂಪೇನ್ ಮಾಡ್ತೇನೆ ಎಂದು ಹೇಳಿದರು. ನಿಮ್ಮ ಮೇಲೆ ಇಡಿ, ಐಟಿ ಒತ್ತಡವೇನಾದ್ರೂ ಹಾಕಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ, ಸುದೀಪ್ ಹಾಗೇನು ಇಲ್ಲ. ನಮ್ಮ ಮನೆಗೆ ಈಗಾಗಲೇ ಇಡಿ, ಐಟಿ ಬಂದು ಹೋಗಿದ್ದಾರೆ. ಅವರಿಗೆ ಮನೆಯಲ್ಲಿ ಏನೂ ಸಿಗಲಿಲ್ಲ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು. ​

    ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್​, ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ. ನಮ್ಮ ದೇಶದ ಕಾನೂನು ಬಲಿಷ್ಟವಾಗಿದೆ. ಆರೋಪಗಳನ್ನು ನ್ಯಾಯಾಲಯ ನೊಡಿಕೊಳ್ಳುತ್ತದೆ ಎಂದು ಹೇಳಿದರು.

    ಸುದ್ದಿಗೋಷ್ಠಿಯ ಕೊನೆಯಲ್ಲಿ ಕಿಚ್ಚ ಸುದೀಪ್​ ಅವರಿಗೆ ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದರು. ಸುದೀಪ್​ ಅವರ ಪ್ರಚಾರದ ಬಗ್ಗೆ ಕೂತು ಪ್ಲಾನ್ ಮಾಡುತ್ತೇವೆ. ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ. ಸುದೀಪ್ ನಮ್ಮ‌ ಜತೆ ಸೇರಿರೋದು ತುಂಬಾ‌ ಖುಷಿಯಾಗಿದೆ. ನಮ್ಮ ಪಕ್ಷಕ್ಕೆ ಹೊಸ ಶಕ್ತಿ ಬಂದಂತಾಗಿದೆ. ಈ ನಿಲುವು ತೆಗೆದುಕೊಳ್ಳಲು ಅವರು ಎಷ್ಟು ಚಿಂತನೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಬಿಜೆಪಿಗೆ ದೊಡ್ಡ ಶಕ್ತಿ‌ ಕೊಟ್ಟಿದ್ದಾರೆ ಎಂದು ಹೇಳಿದರು.

    ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ! ಬಿಜೆಪಿ ವಿರುದ್ಧ ಪ್ರಕಾಶ್​ ರಾಜ್​ ವಾಗ್ದಾಳಿ

    ಖಾಸಗಿ ವಿಡಿಯೋ ಲೀಕ್​ ಮಾಡುವುದಾಗಿ ನಟ ಸುದೀಪ್​ಗೆ ಬೆದರಿಕೆ ಪತ್ರ: ದೂರು ದಾಖಲು

    ನಟ ಸುದೀಪ್​ಗೆ ಬಂದ ಬೆದರಿಕೆ ಪತ್ರದಲ್ಲಿ ಏನಿದೆ? ತನಿಖೆಯ ಜವಾಬ್ದಾರಿ ಸಿಸಿಬಿ ಹೆಗಲಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts