More

    ಅಪ್ಪುದು ಮುತ್ತಿನಂಥ ವ್ಯಕ್ತಿತ್ವ! ‘ಜೇಮ್ಸ್’ನ ‘ಸಲಾಂ ಸೋಲ್ಜರ್’ ಹಾಡು ರಿಲೀಸ್… ಕಿಚ್ಚ ಸುದೀಪ್ ಭಾವುಕ

    ಕನ್ನಡದ ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಮತ್ತು ನಟ ಕಿಚ್ಚ ಸುದೀಪ್ ಅವರ ನಡುವೆ ಇರುವ ಸ್ನೇಹ ಅವರ ಬಾಲ್ಯದಿಂದಲೂ ಎಲ್ಲರ ಗಮನ ಸೆಳೆಯಿತು. ಅಪ್ಪು ಎಂದರೆ ಕಿಚ್ಚನಿಗೆ ಅಚ್ಚುಮೆಚ್ಚು. ಅದೇ ರೀತಿ ಸುದೀಪ್ ಅವರ ಬಗ್ಗೆ ಅಪ್ಪುಗೂ ತುಂಬಾನೆ ಅಭಿಮಾನ ಇತ್ತು. ಎಲ್ಲಿ ಭೇಟಿ ಮಾಡಿದರು ಒಬ್ಬರನ್ನು ಒಬ್ಬರು ತಬ್ಬಿಕೊಳ್ಳದೇ ಇರುವುದಿಲ್ಲ ಈ ಸ್ನೇಹಿತರು. ಇನ್ನು, ಅಪ್ಪು ನಿಧನರಾದಾಗ ನಟ ಕಿಚ್ಚ ಸುದೀಪ್ ಅವರು ಬಿಕ್ಕಿ ಬಿಕ್ಕಿ ಅತ್ತ ವಿಡಿಯೋಗಳ ಕಂಡ ಅಭಿಮಾನಿಗಳ ಮನಸ್ಸಿಗೂ ತುಂಬಾನೆ ಬೇಜಾರಾಗಿತ್ತು.
    ಇಂದಿಗೂ ‘ಪವರ್ ಸ್ಟಾರ್’ ಇಲ್ಲ ಎಂಬ ಸತ್ಯ, ಕೊರಗು ಎಲ್ಲರನ್ನೂ ಕಾಡುತ್ತಿದೆ ಎಂದರೇ ತಪ್ಪಾಗುವುದಿಲ್ಲ. ಇದೀಗ, ಅಪ್ಪು ಅವರು ಕೊನೆಯ ಬಾರಿ ಹೀರೋ ಆಗಿ ನಟಿಸಿದ ಚಿತ್ರ ‘ಜೇಮ್ಸ್ಮಾ.17 ರಂದು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಸಿನಿಮಾದ ಮೊದಲ ಹಾಡು ಧೂಳೆಬ್ಬಿಸಿತು. ಅಂತೆಯೇ, ಮಾ.11 ರಂದು ‘ಜೇಮ್ಸ್ಚಿತ್ರದ ಎರಡನೇ ಹಾಡು ಸಲಾಂ ಸೋಲ್ಜರ್ನ ಲಿರಿಕಲ್ ವಿಡಿಯೋವನ್ನು ನಟ ಕಿಚ್ಚ ಸುದೀಪ್ ಅವರು ರಿಲೀಸ್ ಮಾಡಿದ್ದಾರೆ.
    ಇನ್ನು, ಬಿಡುಗಡೆಗೂ ಮುನ್ನ ಈ ಹಾಡನ್ನು ನೋಡಿದ ಕಿಚ್ಚ ತುಂಬಾನೆ ಖುಷಿಪಟ್ಟಿದ್ದಾರೆ. ಜೆತೆಗೆ, ‘ಜೇಮ್ಸ್ತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ಕಿಚ್ಚ ಅವರು ಟ್ವೀಟ್ ಮಾಡಿದ್ದು, ‘ದೊಡ್ಡ ಪರದೆಯಲ್ಲಿ ಪುನೀತ್​ ಅವರ ಇರುವಿಕೆಯನ್ನು ಸಂಭ್ರಮಿಸುವ ಕಾಲ ಇದು. ಮುತ್ತಿನಂಥ ವ್ಯಕ್ತಿತ್ವದ ಅವರಿಗೆ ಬೇರೆ ಯಾರೂ ಸರಿಸಾಟಿ ಇಲ್ಲ. ಜೇಮ್ಸ್ ಸಿನಿಮಾದ ಪ್ರತಿ ಕ್ಷಣವನ್ನು ಎಂಜಾಯ್​ ಮಾಡಿ’ ಎಂದಿದ್ದಾರೆ. ಸದ್ಯ, ಸಲಾಂ ಸೋಲ್ಜರ್‘ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

    ಅಪ್ಪುದು ಮುತ್ತಿನಂಥ ವ್ಯಕ್ತಿತ್ವ! ‘ಜೇಮ್ಸ್'ನ 'ಸಲಾಂ ಸೋಲ್ಜರ್' ಹಾಡು ರಿಲೀಸ್... ಕಿಚ್ಚ ಸುದೀಪ್ ಭಾವುಕ ಅಪ್ಪುದು ಮುತ್ತಿನಂಥ ವ್ಯಕ್ತಿತ್ವ! ‘ಜೇಮ್ಸ್'ನ 'ಸಲಾಂ ಸೋಲ್ಜರ್' ಹಾಡು ರಿಲೀಸ್... ಕಿಚ್ಚ ಸುದೀಪ್ ಭಾವುಕ ಅಪ್ಪುದು ಮುತ್ತಿನಂಥ ವ್ಯಕ್ತಿತ್ವ! ‘ಜೇಮ್ಸ್'ನ 'ಸಲಾಂ ಸೋಲ್ಜರ್' ಹಾಡು ರಿಲೀಸ್... ಕಿಚ್ಚ ಸುದೀಪ್ ಭಾವುಕ  ಅಪ್ಪುದು ಮುತ್ತಿನಂಥ ವ್ಯಕ್ತಿತ್ವ! ‘ಜೇಮ್ಸ್'ನ 'ಸಲಾಂ ಸೋಲ್ಜರ್' ಹಾಡು ರಿಲೀಸ್... ಕಿಚ್ಚ ಸುದೀಪ್ ಭಾವುಕಅಪ್ಪುದು ಮುತ್ತಿನಂಥ ವ್ಯಕ್ತಿತ್ವ! ‘ಜೇಮ್ಸ್'ನ 'ಸಲಾಂ ಸೋಲ್ಜರ್' ಹಾಡು ರಿಲೀಸ್... ಕಿಚ್ಚ ಸುದೀಪ್ ಭಾವುಕ

    ಮತ್ತೆ ಬೋಲ್ಡ್ ಅವತಾರ ತಾಳಿದ ಸಮಂತಾ! ಫೋಟೋಗಳು ವೈರಲ್…

    ಅಪ್ಪನಂತೆ ಮಕ್ಕಳು… ದುಬೈನಲ್ಲಿ ಹುಡುಗಿಯ ಜತೆಗಿರುವ ನಾಗಾರ್ಜುನ ಫೋಟೋ ವೈರಲ್! ವಾಸ್ತವ ಏನು?

    ರಶ್ಮಿಕಾ VS ಪೂಜಾ, ಕಿಯಾರಾ: ಯಾರ ಕೈ ತಪ್ಪಿತು ದಳಪತಿ ವಿಜಯ್ 66ನೇ ಸಿನಿಮಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts