More

    ಸಿಂಬು ಚಿತ್ರದಲ್ಲಿ ಜಾನ್ವಿ, ಕಿಯಾರಾ!

    ಚೆನ್ನೈ: ಕಾಲಿವುಡ್‌ನ ಮೋಸ್ಟ್ ಬ್ಯಾಚುಲರ್ ಹೀರೋ ಶಿಂಬು (ಸಿಲಂಬರಸಂತ್ರ) ಎದುರು ಇಬ್ಬರು ನಾಯಕಿಯರು ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇವರಿಬ್ಬರೂ ಬಾಲಿವುಡ್ ನಾಯಕಿಯರು ಎಂಬುದು ಗಮನಾರ್ಹ.

    ಇದನ್ನೂ ಓದಿ: ‘ಹುಡುಗ ಕಪ್ಪು ಬೇಡ’ ಎಂದವಳು..’ಮದುವೆಗೆ ರೆಡಿ’ ಎಂದಳು! ಕಾರಣ ಕೇಳಿದ್ರೆ ಹೌಹಾರ್ತೀರಾ?

    ಸದ್ಯ ಕಮಲ್ ಹಾಸನ್ ಅವರ ‘ಥಗ್ಲೈಫ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ಸಿಂಬು, ಕಮಲ್ ಹಾಸನ್ ಅವರ ಸ್ವಂತ ನಿರ್ಮಾಣ ಸಂಸ್ಥೆ ರಾಜ್​ಕಮಲ್ ಫಿಲಂಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ತಮ್ಮ 48 ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಒಂದು ಸಣ್ಣ ಝಲಕ್ ಈ ಹಿಂದೆಯೇ ಬಿಡುಗಡೆಯಾಗಿತ್ತು.

    ಈಗಾಗಲೇ ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಸಿಂಬು ನಾಯಕ ಮತ್ತು ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗಮನಾರ್ಹ. ಆದರೆ, ಇದರಲ್ಲಿ ನಟಿಸಲಿರುವ ನಾಯಕಿಯರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.

    ಈ ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮತ್ತು ಜಾನ್ವಿ ಕಪೂರ್ ಅವರನ್ನು ಆಯ್ಕೆ ಮಾಡಲು ನಿರ್ದೇಶಕರು ಮತ್ತು ನಿರ್ಮಾಪಕರು ಗಮನಹರಿಸಿದ್ದಾರೆ ಎಂದು ವರದಿಯಾಗಿದೆ. ಈ ಇಬ್ಬರು ನಾಯಕಿಯರ ಪೈಕಿ ಕಿಯಾರಾ ಅಡ್ವಾಣಿ ಖ್ಯಾತ ನಿರ್ದೇಶಕ ಶಂಕರ್ ನಿರ್ಮಿಸುತ್ತಿರುವ ‘ಗೇಮ್ ಚೇಂಜರ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಜಾಹ್ನವಿ ಕಪೂರ್ ‘ದೇವರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಬು ಸಿನಿಮಾದಲ್ಲಿ ನಟಿಸಲು ಇಬ್ಬರೂ ಒಪ್ಪುತ್ತಾರಾ? ಇಲ್ಲವಾ? ಎಂಬುದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

    ಇದರ ನಡುವೆ, ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಹೆಸರನ್ನು ಖಚಿತಪಡಿಸಲಾಗಿದೆ ಎಂಬ ಸುದ್ದಿ ಪ್ರಸ್ತುತ ಸುತ್ತುತ್ತಿದೆ. ಇದರಲ್ಲಿ ನಿಜ ಯಾವುದು ಮತ್ತು ಯಾರು ನಟಿಸುತ್ತಿದ್ದಾರೆ ಎಂಬುದು ಇನ್ನೂ ಗೊಂದಲದಲ್ಲೇ ಇದೆ. ಬ್ಲಡ್​ ಅಂಡ್​ ಬಾಟೆಲ್​ ಎಂದು ಕರೆಯಲ್ಪಡುವ ಈ ಚಿತ್ರವು ಎರಡು ಭಾಗಗಳಲ್ಲಿರಲಿದೆ. ಕಮಲ್ ಹಾಸನ್ ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಆರಂಭವಾಗಲಿದೆ.

    5 ಹಂತದಲ್ಲಿ 50.72 ಕೋಟಿ ಜನರಿಂದ ಮತದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts